ಖ್ಯಾತ ವೈರಾಣು ತಜ್ಞ ಡಾ.ಟಿ. ಜಾಕೋಬ್ ಜಾನ್
ಖ್ಯಾತ ವೈರಾಣು ತಜ್ಞ ಡಾ.ಟಿ. ಜಾಕೋಬ್ ಜಾನ್

ರಾಜ್ಯ ಸರ್ಕಾರಗಳು ಕೋವಿಡ್-19 ಪರೀಕ್ಷಾ ಕಾರ್ಯತಂತ್ರಗಳನ್ನು ಬದಲಾಯಿಸಬೇಕು: ಖ್ಯಾತ ವೈರಾಣು ತಜ್ಞ ಡಾ. ಟಿ.ಜಾಕೋಬ್ ಜಾನ್

ಆಡಳಿತ ವೈಫಲ್ಯದೆಗಳು ದೇಶವನ್ನು ಅಪಾಯಕ್ಕೆ ಸಿಲುಕಿಸಲಿದ್ದು, ರಾಜ್ಯ ಸರ್ಕಾರಗಳು ಕೂಡಲೇ ಕೊರೋನಾ ಕುರಿತ ಕಾರ್ಯತಂತ್ರಗಳನ್ನು ಬದಲಾಯಿಸಬೇಕಿದೆ ಎಂದು ಖ್ಯಾತ ವೈರಾಣು ತಜ್ಞ ಹಾಗೂ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಮಾಜಿ ಪ್ರೊಫೆಸರ್ ಆಗಿರುವ ಡಾ.ಟಿ.ಜಾಕೋಬ್ ಜಾನ್ ಅವರು ಹೇಳಿದ್ದಾರೆ. 

ಬೆಂಗಳೂರು: ಆಡಳಿತ ವೈಫಲ್ಯದೆಗಳು ದೇಶವನ್ನು ಅಪಾಯಕ್ಕೆ ಸಿಲುಕಿಸಲಿದ್ದು, ರಾಜ್ಯ ಸರ್ಕಾರಗಳು ಕೂಡಲೇ ಕೊರೋನಾ ಕುರಿತ ಕಾರ್ಯತಂತ್ರಗಳನ್ನು ಬದಲಾಯಿಸಬೇಕಿದೆ ಎಂದು ಖ್ಯಾತ ವೈರಾಣು ತಜ್ಞ ಹಾಗೂ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಮಾಜಿ ಪ್ರೊಫೆಸರ್ ಆಗಿರುವ ಡಾ.ಟಿ.ಜಾಕೋಬ್ ಜಾನ್ ಅವರು ಹೇಳಿದ್ದಾರೆ. 

ದಿ  ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕೊರೋನಾ ದಿನ ಕಳೆದಂತೆ ವ್ಯಾಪಕವಾಗುತ್ತಿದ್ದು, ರಾಜ್ಯ ಸರ್ಕಾರಗಳು ಕೋವಿಡ್-19 ಪರೀಕ್ಷಾ ಕಾರ್ಯತಂತ್ರಗಳನ್ನು ಬದಲಾಯಿಸಲೇಬೇಕಿದೆ ಎಂದು ತಿಳಿಸಿದ್ದಾರೆ. 

ದಿನ ಕಳೆದಂತೆ ಭಾರತ ಲಾಕ್'ಡೌನ್ ನಿಂದ ಹೊರ ಬರುತ್ತಿದೆ. ಜನರು ಮನೆಗಳಿಂದ ಹೊರಬರುತ್ತಿದ್ದು, ವಲಸಿಗ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ವೈರಸ್ ಮಟ್ಟ ಹಾಕುವಲ್ಲಿ ರಾಜ್ಯ ಮುಂದಿನ ಕ್ರಮಗಳೇನು? 
ಸೋಂಕಿತ ಪ್ರಕರಣಗಳು ಏರುತ್ತಲೇ ಇವೆ. ಇದರಿಂದ ದೊಡ್ಡ ಅಪಾಯವೇ ಸಂಭವಿಸಬಹುದು. ಪ್ರತೀನಿತ್ಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೇವೆ. ವಲಸಿಗರನ್ನು ನಿಭಾಯಿಸುವಲ್ಲಿ ಕೇಂದ್ರದ ವರ್ತನೆ ನೋಡುತ್ತಿದ್ದರೆ, ವೈಫಲ್ಯತೆಗಳು ಎದ್ದು ಕಾಣುತ್ತಿವೆ. ಆಡಳಿತ ವಿಫಲವಾಗುತ್ತಿದೆ. ಇದೀಗ ಆಯಾ ರಾಜ್ಯ ಸರ್ಕಾರಗಳು ಕೊರೋನಾ ಕಾರ್ಯತಂತ್ರಗಳನ್ನು ಬದಲಿಸಬೇಕಿದೆ. 

ಆ ಕಾರ್ಯತಂತ್ರಗಳು ಹೇಗಿರಬೇಕು? 
ಯಾವುದೇ ವಿನಾಯಿತಿ ನೀಡದೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಮಾಸ್ಕ್ ಧರಿಸಿದೇ ಇರುವಂತಹವರ ವಿರುದ್ಧ ದೂರು ನೀಡಲು ಸಹಾಯವಾಣಿಗಳನ್ನು ತೆರೆಯಬೇಕು. ಪರಿಶೀಲನೆ ನಡೆಸುವ ಅಧಿಕಾರಿಗಳು ಕಡ್ಡಾಯವಾಗಿ ದಂಡವನ್ನು ವಿಧಿಸಬೇಕು. ಇದರಿಂದ ವೈರಸ್ ಹರಡುವುದು ನಿಯಂತ್ರಣಗೊಳ್ಳುತ್ತದೆ. ಹಾಗೂ ಆರ್ಥಿಕತೆಯ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ. ಕೊರೋನಾಗೆ ಕ್ಲಿನಿಕಲ್ ಡಯಾಗ್ನೊಸಿಸ್ ನಡೆಸಬೇಕು. 

ಈ ಬಗ್ಗೆ ವಿವರಿಸುತ್ತೀರಾ? 
ಪರೀಕ್ಷೆ ವ್ಯಾಪಕವಾಗಿಸಬೇಕು. ಸಮುದಾಯ ಹಂತ ತಲುಪದಂತೆ ನೋಡಿಕೊಳ್ಳಬೇಕು. ಸಾಕಷ್ಟು ಜನರು ತಮಗೆ ತಿಳಿಯದಂತೆಯೇ ವೈರಸ್ ಹರಡುತ್ತಿದ್ದಾರೆ. ಕೆಲವರಲ್ಲಿ ಮಾತ್ರ ಲಕ್ಷಣಗಳು ಕಂಡು ಬರುತ್ತಿವೆ. ಲಕ್ಷಣಗಳಿರುವ ಜನರನ್ನು ನಾವು ನೋಡುತ್ತಿಲ್ಲ. ಟ್ರಾವೆಲ್ಸ್ ಹಿಸ್ಟರಿ ಇರುವ, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರ ವೈದ್ಯಕೀಯ ಪರೀಕ್ಷೆಗಳತ್ತ ಮಾತ್ರ ನಾವು ಗಮನ ಹರಿಸುತ್ತಿದ್ದೇವೆ. 

ಆರೋಗ್ಯಾಧಿಕಾರಿಗಳು ಏನು ಮಾಡಬೇಕು? 
ಕೊರೋನಾ ಸಾಂಕ್ರಾಮಿಕ ರೋಗವಾಗಿದೆ. ವೈರಸ್ ಎಲ್ಲೆಡೆ ಹರಡುತ್ತಿದೆ. ಎಲ್ಲೆಲ್ಲೆ ಮನುಷ್ಯರಿದ್ದಾರೋ ಅಲ್ಲೆಲ್ಲಾ ವೈರಸ್ ಹರಡುತ್ತಿದೆ. ಇದನ್ನು ನಾವು ಮಟ್ಟ ಹಾಕಲೇಬೇಕಿದೆ. ವೈರಸ್ ಮಟ್ಟಹಾಕಲು ಹೆಚ್ಚೆಚ್ಚು ಪರೀಕ್ಷೆಗಳು ನಡೆಯಬೇಕಿದೆ. ರೋಗಿಗಳಿಗೆ ಕ್ಲಿನಿಕಲ್ ಡಯಾಗ್ರೋಸಿಸ್ ನಡೆಸಬೇಕು. 

ಯಾವ ರೀತಿಯ ಲಕ್ಷಣಗಳ ಮೇಲೆ ಗಮನ ಹರಿಸಬೇಕು? 
ಯಾರಿಗಾದರೂ ಜ್ವರ, ಕೆಮ್ಮು ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಯಾಸ, ತಲೆನೋವು, ವಾಕರಿಕೆ, ವಾಂತಿ, ಅತಿಸಾರ, ದೇಹ ನೋವು ಎಲ್ಲವೂ ಕೋರೊನಾ ಲಕ್ಷಣಗಳೇ ಆಗಿವೆ. ಕೊರೋನಾ ಗಂಭೀರಕ್ಕೆ ಹೋಗುವ ಲಕ್ಷಣಗಳೆಂದರೆ, ವಾಸನೆ, ರುಚಿಗಳು ತಿಳಿಯದೇ ಇರುವುದು, ಉಸಿರಾಟ ಸಮಸ್ಯೆಗಳು ಎದುರಾಗುತ್ತದೆ. ಇಂತಹವರಿಗೆ ಕೊರೋನಾ ಪರೀಕ್ಷೆ ಮಾಡಿಸಲೇಬೇಕಿದೆ ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com