ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ, 2 ಲಕ್ಷ ರೂ. ನಗದು ವಶ
ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 2 ಲಕ್ಷ ರೂ. ನಗದು ಮತ್ತು 2 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
Published: 06th November 2020 12:02 PM | Last Updated: 06th November 2020 12:47 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 2 ಲಕ್ಷ ರೂ. ನಗದು ಮತ್ತು 2 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಸವನಗುಡಿಯ ಚಿಕ್ಕಮಾವಳ್ಳಿ, ಎಸ್ .ಕೆ.ಲೇನ್, ಮಾರಮ್ಮ ದೇವಸ್ಥಾನ ಹತ್ತಿರದ ನಿವಾಸಿ ದುಂಗರ್ ಚಂದ್ ಜೈನ್ (49) ಹಾಗೂ ನಗರತ್ ಪೇಟೆ ಮುಖ್ಯರಸ್ತೆ 2ನೇ ಮಹಡಿ ನಿವಾಸಿ ಕಿರಣ್ ಜೈನ್ (24) ಬಂಧಿತ ಆರೋಪಿಗಳು.
ಅವರಿಂದ ಕ್ರಿಕೆಟ್ ಜೂಜಾಟ್ಕೆ ಸಂಬಂಧಿಸಿದಂತೆ 2 ಲಕ್ಷ ರೂ.ನಗದು, 2 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.