4 ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಭೇದಿಸಿದ ಸಿಸಿಬಿ; 21 ಲಕ್ಷ ರೂ. ನಗದು ವಶ

ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿ ನಾಲ್ಕು ಬೆಟ್ಟಿಂಗ್ ಪ್ರಕರಣ ಭೇದಿಸಲಾಗಿದ್ದು, 21 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿ ನಾಲ್ಕು ಬೆಟ್ಟಿಂಗ್ ಪ್ರಕರಣ ಭೇದಿಸಲಾಗಿದ್ದು, 21 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಇಂದು ಸಿಸಿಬಿ ಪೊಲೀಸರು ಕೆ.ಆರ್.ಪುರಂ ನಲ್ಲಿ ಕ್ರಿಕೆಟ್ ಬುಕ್ಕಿ ಬಲರಾಮ್ ಮತ್ತು ನಾಗೇಂದ್ರ ಎಂಬಾತನ ಮನೆಯ ಮೇಲೆ ದಾಳಿ ನಡೆಸಿ 10 ಲಕ್ಷದ 5 ಸಾವಿರ ರೂ. ನಗದು 12 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಮತ್ತು ವಶಪಡಿಸಿಕೊಂಡ ವಸ್ತುಗಳನ್ನು ಕೆ.ಆರ್.ಪುರಂ ಪೊಲೀಸ್ ಠಾಣೆಗೆ ಹಾಜರುಪಡಿಸಲಾಗಿದೆ.

ಅದೇ ರೀತಿ ಅ.14ರಂದು ಯುಎಇಯಲ್ಲಿ ನಡೆದ ರಾಜಸ್ತಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆದ ಪಂದ್ಯದ ಬಗ್ಗೆಯೂ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ನಾಗೊಂಡನಹಳ್ಳೀ ಮುನಿಸಿಂಗ್ ರಸ್ತೆಯಲ್ಲಿರುವ ಲೋಕೇಶ್ ಚಿಕನ್ ಮತ್ತು ಮಟನ್ ಸೆಂಟರ್ ಅಂಗಡಿ ಮುಂಭಾಗದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು, ವೈಟ್ ಪೀಲ್ಡ್ ನ ಮ್ಮಡಿ ಹಳ್ಳೀ ದೊಮ್ಮರಪಾಳ್ಯ ನಿವಾಸಿ ಲೋಕೇಶ್ ಎಂಬಾತನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com