ಪ್ರವಾಹ ಸಂಕಷ್ಟ: ಸೆ.7ಕ್ಕೆ ರಾಜ್ಯಕ್ಕೆ ಕೇಂದ್ರ ಸಮೀಕ್ಷಾ ತಂಡ ಭೇಟಿ, ರೂ.4,800 ಕೋಟಿ ಪರಿಹಾರ ಮನವಿಗೆ ಸರ್ಕಾರ ನಿರ್ಧಾರ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಸಂಕಷ್ಟ ಎದುರಾಗಿದ್ದು, ಪ್ರವಾಹ ಪರಿಣಾಮ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಈ ನಡುವಲ್ಲೇ ಕೇಂದ್ರದ ಸಮೀಕ್ಷಾ ತಂಡ ಸೆ.7 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಸಂಕಷ್ಟ ಎದುರಾಗಿದ್ದು, ಪ್ರವಾಹ ಪರಿಣಾಮ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಈ ನಡುವಲ್ಲೇ ಕೇಂದ್ರದ ಸಮೀಕ್ಷಾ ತಂಡ ಸೆ.7 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಲಿದೆ. 

ಕೇಂದ್ರ ಗೃಹ ಸಚಿವಾಲಯದ ಜಂಟಿ ನಿರ್ದೇಶಕ ಕೆ.ಬಿ.ಪ್ರತಾಪ್ ನೇತೃತ್ವದ 6 ಮಂದಿ ತಜ್ಞರನ್ನು ಒಳಗೊಂಡ ತಂಡ ಸೋಮವಾರ ರಾಜ್ಯಕ್ಕೆ ಭೇಟಿ ನೀಡಲಿದ್ದು, ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳಾದ ಕೊಡಗು, ಬೆಳಗಾವಿ, ಬಿಜಾಪುರ ಹಾಗೂ ಬಾಗಲಕೋಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. 

ಈ ಕುರಿತು ವಿಧಾನಸೌಧದಲ್ಲಿ ಮಾಹಿತಿ ನೀಡಿರುವ ಕಂದಾಯ ಸಚಿವ ಆರ್.ಅಶೋಕ್ ಅವರು, ಪ್ರವಾಹ ಸಮೀಕ್ಷಾ ತಂಡವನ್ನು ಕಳುಹಿಸಿಕೊಟ್ಟಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕೇಂದ್ರದ ಸಮೀಕ್ಷಾ ತಂಡವನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದೆವು. ಈ ನಿಟ್ಟಿಲ್ಲಿ ಕೇಂದ್ರ ಸಮೀಕ್ಷಾ ತಂಡ ಸೆ.7ರಂದು ರಾಜ್ಯಕ್ಕೆ ಆಗಮಿಸಿ ಸಮೀಕ್ಷೆ ನಡೆಸಲಿದೆ ಎಂದು ಹೇಳಿದರು. 

ರಾಜ್ಯಕ್ಕೆ ಆಗಮಿಸುವ ಕೇಂದ್ರ ತಂಡಕ್ಕೆ ಪ್ರವಾಹದಿಂದ ಆಗಿರುವ ಹಾನಿ ಕುರಿತಾಗಿ ಮಾಹಿತಿ ನೀಡಿದ್ದೇವೆ. ವಿಡಿಯೋ, ಫೋಟೋಗಳನ್ನು ಹಾನಿ ಪ್ರಮಾಣ ಅಂದಾಜಿಸಲು ನೀಡಲಾಗುವುದು. ಪ್ರವಾಹದಿಂದಾಗಿ ರಾಜ್ಯದಲ್ಲಿ ಸುಮಾರು ರೂ.4,800 ಕೋಟಿ ನಷ್ಟದ ಬಗ್ಗೆ ಅಂದಾಜು ನೀಡಿದ್ದೇವೆ. ಕೇಂದ್ರದ ತಂಡಕ್ಕೂ ಈ ಬಗ್ಗೆ ಮಾಹಿತಿಗಳನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com