ಕಲಬುರಗಿ: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ 6,547 ಕೊರೋನಾ ಪ್ರಕರಣ ದಾಖಲು

ಕೊರೋನಾ ವೈರಸ್ ಸೋಂಕು ವ್ಯಾಪಕಗೊಳ್ಳುತ್ತಿರುವ ನಡುವಲ್ಲೇ ಕಲಬುರಗಿ ಜಿಲ್ಲೆಯ 11 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈವರೆಗೂ 6,547 ಮಂದಿಯಲ್ಲಿ ಕೊರೋನಾ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಕೊರೋನಾ ವೈರಸ್ ಸೋಂಕು ವ್ಯಾಪಕಗೊಳ್ಳುತ್ತಿರುವ ನಡುವಲ್ಲೇ ಕಲಬುರಗಿ ಜಿಲ್ಲೆಯ 11 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈವರೆಗೂ 6,547 ಮಂದಿಯಲ್ಲಿ ಕೊರೋನಾ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.  

ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 168 ಮಂದಿಯಲ್ಲಿ ಕೊರೋನಾ ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 18898ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ ಮೂವರ ಸಾವಿನೊಂದಿಗೆ ಸಾವಿನ ಸಂಖ್ಯೆ 263ಕ್ಕೆ ಏರಿಕೆಯಾಗಿದೆ. 

18898 ಮಂದಿ ಸೋಂಕಿತರ ಪೈಕಿ 13,459 ಮಂದಿ ಸೋಂಕಿನಿಂದ ಗುಣಮುಖರಾಗಿದ್ದೂ, ಜಿಲ್ಲೆಯಲ್ಲಿನ್ನೂ 2176 ಸಕ್ರಿಯ ಪ್ರಕರಣಗಳಿವೆ. ಇವರೆಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ. 

ಮಾರ್ಚ್ 10ರವರೆಗೂ ಜಿಲ್ಲೆಯಲ್ಲಿ 15,730 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 6,547 ಪ್ರಕರಣಗಳು ನಗರದ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಕಂಡು ಬಂದಿದೆ. ಈ 6,547 ಮಂದಿ ಸೋಂಕಿತರ ಪೈಕಿ ಈಗಾಗಲೇ 5,000 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೆ, 181 ಮಂದಿ ಸಾವನ್ನಪ್ಪಿದ್ದು, 1,366 ಮಂದಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸೇಂಟ್ ಜಾನ್ ಪ್ರಾಥಮಿಕ ಆರೋಗ್ಯ ಕೇಂತ್ರದ ಉಸ್ತುವಾರಿ ಹಿರಿಯ ವೈದ್ಯ ಡಾ. ಮಲ್ಹಾರಿ ರಾವ್ ಮಲ್ಲೆ ಅವರು ಮಾತನಾಡಿ, “ಜನರು ಹೆಚ್ಚು ಜಾಗರೂಕರಾಗಿದ್ದರೆ ಮತ್ತು ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿದರೆ ಪರೀಕ್ಷೆಯನ್ನು ಮಾಡಿಸುವ ಅಗತ್ಯವಿಲ್ಲ. ಸಾಂಕ್ರಾಮಿಕ ರೋಗ ಈಗಾಗಲೇ ಇಡೀ ದೇಶವನ್ನು ಹರಡಿದ್ದು, ಕಲಬುರಗಿ ಜಿಲ್ಲೆ ಇದರಿಂದ ಹೊರತಾಗಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com