ಕೊರೋನಾ ಹೆಚ್ಚಳ: ಹಾಸಿಗೆ ಲಭ್ಯತೆ ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಡಿಸಿಪಿಗಳ ನೆರವು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಹಾಸಿಗೆ ವ್ಯವಸ್ಥೆಗೆ ಬಿಬಿಎಂಪಿ ಅಧಿಕಾರಿಗಳ ನೆರವಿಗೆ ನಗರ ಪೊಲೀಸರು ಮುಂದಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಹಾಸಿಗೆ ವ್ಯವಸ್ಥೆಗೆ ಬಿಬಿಎಂಪಿ ಅಧಿಕಾರಿಗಳ ನೆರವಿಗೆ ನಗರ ಪೊಲೀಸರು ಮುಂದಾಗಿದ್ದಾರೆ. 

ಹಾಸಿಗೆ ವ್ಯವಸ್ಥೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿನ ಶೇ. 50ರಷ್ಟು ಹಾಸಿಗೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಂಟಿ ಕಾರ್ಯಾಚರಣೆ ಮಾಡುವಂತೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಿನ್ನೆಯಷ್ಟೇ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. 

ಸೂಚನೆ ಬೆನ್ನಲ್ಲೇ ಇದೀಗ ಕ್ರಮ ಕೈಗೊಂಡಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಇದೀಗ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆಗೆ ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳ ಜಂಟಿ ಕಾರ್ಯಪಡೆ ರಚನೆ ಮಾಡಿದ್ದಾರೆ. 

ನಗರದ ಬಿಬಿಎಂಪಿ ಎಂಟು ವಲಯಗಳ ವ್ಯಾಪ್ತಿಯ ಸರ್ಕಾರಿ ಕೋಟಾದಡಿ ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಮೇಲೆ ಜಂಟಿ ಕಾರ್ಯಾಪಡೆ ನಿಗಾವಹಿಸಲಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ. 

ವಿವರ ಹೀಗಿದೆ...
ಶರಣಪ್ಪ ಎಸ್‌ಡಿ - ಪೂರ್ವ ವಲಯ, ಅನುಚೇತ್ ಎಂಎನ್ - ಪಶ್ಚಿಮ ವಲಯ, ಹರೀಶ್ ಪಾಂಡೆ - ದಕ್ಷಿಣ ವಲಯ, ದೇವರಾಜ ಡಿ - ಮಹಾದವೇಪುರ ವಲಯ, ಬಾಬಾ ಸಿಕೆ - ಯಲಹಂಕ ವಲಯ, ಸಂಜೀವ್ ಎಂ ಪಾಟೀಲ್ - ಆರ್.ಆರ್.ನಗರ ವಲಯ, ಧರ್ಮೇಂದರ್ ಕುಮಾರ್ ಮೀನಾ - ದಾಸರಹಳ್ಳಿ ವಲಯ, ಮತ್ತು ಶ್ರೀನಾಥ್ ಜೋಶಿ ಬೊಮ್ಮನಹಳ್ಳಿ ವಲಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com