ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನೂ 50 ಕೋವಿಡ್ ಪರೀಕ್ಷಾ ಯಂತ್ರಗಳ ಅಳವಡಿಕೆ!

ಓಮಿಕ್ರಾನ್ ಕೋವಿಡ್ ರೂಪಾಂತರ ಭೀತಿಯ ಹಿನ್ನಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೆ 50 ಕೋವಿಡ್ ಪರೀಕ್ಷಾ ಯಂತ್ರಗಳನ್ನು ಅಳಡಿಸಲಾಗಿದೆ. 
ಕೋವಿಡ್ ಪರೀಕ್ಷಾ ಯಂತ್ರಗಳು
ಕೋವಿಡ್ ಪರೀಕ್ಷಾ ಯಂತ್ರಗಳು

ಬೆಂಗಳೂರು: ಓಮಿಕ್ರಾನ್ ಕೋವಿಡ್ ರೂಪಾಂತರ ಭೀತಿಯ ಹಿನ್ನಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೆ 50 ಕೋವಿಡ್ ಪರೀಕ್ಷಾ ಯಂತ್ರಗಳನ್ನು ಅಳಡಿಸಲಾಗಿದೆ. 

'ಹೈ ರಿಸ್ಕ್' ದೇಶಗಳ ಪ್ರಯಾಣಿಕರ ಅನಾನುಕೂಲತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಹಲವಾರು ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಇದು ಎರಡು Covid-19 ಲ್ಯಾಬ್ ಪಾಲುದಾರ ಸಂಸ್ಛೆಗಳಾದ Auriga Research Private Ltd ಮತ್ತು TATA MD-Aster Labsನೊಂದಿಗೆ ಒಪ್ಪಂದ ಹೊಂದಿದೆ ಎನ್ನಲಾಗಿದೆ.

ಅಲ್ಲದೆ, ಅಸ್ತಿತ್ವದಲ್ಲಿರುವ ಎಂಟು ಯಂತ್ರಗಳಿಗೆ ಹೆಚ್ಚುವರಿಯಾಗಿ ಕೋವಿಡ್ ಪರೀಕ್ಷೆಗಳಿಗೆ ಅನುಕೂಲವಾಗುವಂತೆ 50 ಹೊಸ ಪರೀಕ್ಷಾ ಯಂತ್ರಗಳನ್ನು ಇತ್ತೀಚೆಗೆ ಖರೀದಿಸಲಾಗಿದೆ. ಹಿರಿಯ ನಾಗರಿಕರು, ಕಡಿಮೆ ಚಲನಶೀಲತೆ ಹೊಂದಿರುವ ಪ್ರಯಾಣಿಕರು ಮತ್ತು ಶಿಶುಗಳನ್ನು ಹೊಂದಿರುವ ಮಹಿಳೆಯರಿಗೆ ಆಗಮನದ ನಂತರ ಆದ್ಯತೆ ನೀಡಲಾಗುತ್ತದೆ. ಅವರು ಮೀಸಲಾದ ಪರೀಕ್ಷಾ ಕೌಂಟರ್ ಅನ್ನು ಹೊಂದಿರುತ್ತಾರೆ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com