ಓಮಿಕ್ರಾನ್ ಭೀತಿ: ಬೆಂಗಳೂರಿಗೆ ಆಗಮಿಸುವವರಿಗೆ ಶೀಘ್ರ ಸಾಂಸ್ಥಿಕ ಕ್ವಾರಂಟೈನ್; ಕೋವಿಡ್ ಪರೀಕ್ಷಾ ದರಗಳ ಮೇಲೆ ಮಿತಿ!

ನಗರದಲ್ಲಿ ಓಮಿಕ್ರಾನ್ ಭೀತಿ ಹೆಚ್ಚಾಗಿರುವಂತೆಯೇ ಇತ್ತ ಬೆಂಗಳೂರಿಗೆ ಆಗಮಿಸುವ ವಿದೇಶಿಗರಿಗೆ ಶೀಘ್ರ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆಯಲ್ಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಓಮಿಕ್ರಾನ್ ಭೀತಿ ಹೆಚ್ಚಾಗಿರುವಂತೆಯೇ ಇತ್ತ ಬೆಂಗಳೂರಿಗೆ ಆಗಮಿಸುವ ವಿದೇಶಿಗರಿಗೆ ಶೀಘ್ರ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆಯಲ್ಲಿದೆ.

ನಗರಕ್ಕೆ ಆಗಮಿಸುವ ವಿದೇಶಿಗರನ್ನು ತಪಾಸಣೆ ಮಾಡಿ ಹೋಟೆಲ್‌ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡುವ ಕುರಿತು ಸರ್ಕಾರ ಚಿಂತನೆಯಲ್ಲಿ ತೊಡಗಿದೆ. ಈಗಾಗಲೇ ನಗರದಲ್ಲಿ 2 ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಅವರ ಸಂಪರ್ಕಿತವರಲ್ಲಿ ಸೋಂಕು ಕಾಣಿಸಿಕೊಂಡಿರುವ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಕಳುಹಿಸಲಾಗಿದೆ. ಅಂತೆಯೇ ಮುಂಜಾಗ್ರತಾ ಕ್ರಮವಾಗಿ ಇನ್ನು ಮುಂದೆ ನಗರಕ್ಕೆ ಆಗಮಿಸುವ ವಿದೇಶಗರಿಗೆ ಸಾಂಸ್ಥಿಕ ಕ್ವಾರಂಟೈನ್ ಮತ್ತು ಪರೀಕ್ಷೆಗೆ ಒಳಪಡುವ ನಿಯಮವನ್ನು ಮರಳಿ ತರಲು ಬಿಬಿಎಂಪಿ ಮತ್ತು ಆರೋಗ್ಯ ಅಧಿಕಾರಿಗಳು ಚಿಂತಿಸುತ್ತಿದ್ದಾರೆ.

ಈ ನಿಯಮ ಈ ಹಿಂದೆ ಅಂದರೆ ಮೊದಲ ಮತ್ತು ಎರಡನೇ ಅಲೆಯ ಸಮಯದಲ್ಲಿ ಆಚರಣೆಯಲ್ಲಿತ್ತು, ಆದರೆ ಈಗ ಹೆಚ್ಚಿನ ಅಪಾಯದ ದೇಶಗಳಿಗೆ ಮಾತ್ರ ಈ ನಿಯಮ ಸೀಮಿತವಾಗಿದೆ. ಆದರೆ ಇದೀಗ ಈ ನಿಯಮವನ್ನು ಮತ್ತೆ ನಗರದಲ್ಲಿ ಜಾರಿಗೆ ತರಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ ಅಧಿಕಾರಿಗಳು ತಜ್ಞರ ಸಲಹೆಯನ್ನು ಪರಿಷ್ಕರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮುಂದೆ ಪ್ರಸ್ತಾವನೆಯನ್ನು ಇರಿಸುವ ಕೆಲಸ ಮಾಡುತ್ತಿದ್ದಾರೆ, ಇದು ಪ್ರಕರಣಗಳ ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಜನರಲ್ಲಿ ಭಯ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

"ಜರ್ಮನಿಯ ಮಹಿಳಾ ಪ್ರಯಾಣಿಕರು ಸೋಂಕಿಗೆ ತುತ್ತಾಗಿದ್ದು, ರೋಗಲಕ್ಷಣಗಳನ್ನು ಹೊಂದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಬೆಂಗಳೂರಿಗೆ ಆಗಮಿಸಿದ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಾವು ಪರಿಶೀಲಿಸುತ್ತಿದ್ದೇವೆ. ಹೊಸ ಪ್ರಯಾಣಿಕರ ಪ್ರವೇಶವನ್ನು ಸೂಕ್ಷ್ಮವಾಗಿ ಗಮನಿಸಬೇಕು. ದಕ್ಷಿಣ ಆಫ್ರಿಕಾದ 66 ವರ್ಷದ ಪ್ರಯಾಣಿಕರಲ್ಲಿ ಸೋಂಕು ಕಾಣಸಿಕೊಂಡಿತ್ತು. ಕೇಂದ್ರ ಸರ್ಕಾರ ನೀಡಿರುವ ಸಲಹೆಗಳನ್ನು ಪಾಲಿಸಬೇಕಾದ ಸಮಸ್ಯೆ ಎದುರಾಗಿದೆ. ಕೆಲವು ಮಾರ್ಗಸೂಚಿಗಳನ್ನು ಬದಲಿಸಿ ಹೆಚ್ಚಿನ ನಿರ್ಬಂಧಗಳನ್ನು ತರಲು ಮಹಾರಾಷ್ಟ್ರ ಪ್ರಯತ್ನಿಸಿತ್ತು. ಆದರೆ ಕೇಂದ್ರ ಸರ್ಕಾರ ಆಕ್ಷೇಪಿಸಿದ್ದರಿಂದ ಅವುಗಳನ್ನು ಹಿಂತೆಗೆದುಕೊಳ್ಳಬೇಕಾಯಿತು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು TNIE ಗೆ ಮಾಹಿತಿ ನೀಡಿದ್ದಾರೆ.

ಅಂತೆಯೇ, 'ಸರ್ಕಾರವು ಯಾವುದೇ ಮುಜುಗರದ ಪರಿಸ್ಥಿತಿಯನ್ನು ಎದುರಿಸಲು ಬಯಸುವುದಿಲ್ಲ, ಆದ್ದರಿಂದ ಅದು ತುಂಬಾ ಜಾಗರೂಕವಾಗಿದೆ. ಆದರೆ ಇತರ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಮತ್ತು ನಗರಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿದರೆ, ಸರ್ಕಾರವು ಈಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. ನಗರಕ್ಕೆ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರು ಅವರು ಯಾವ ದೇಶದಿಂದ ಬಂದರೂ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವ ಕುರಿತು ಕೇಂದ್ರ ಸರ್ಕಾರದ ಬಳಿ ಪ್ರಸ್ತಾಪಿಸಲು ನಾವು ಯೋಚಿಸುತ್ತಿದ್ದೇವೆ. ಅವರು ಎರಡು ಸುತ್ತಿನ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಬೇಕು ಮತ್ತು ಅವರ ಪರೀಕ್ಷಾ ವರದಿಗಳು ನೆಗೆಟಿವ್ ಬಂದ ನಂತರವೇ ಹೊರಡಬಹುದು. ಅಲ್ಲದೆ, ಅವರು ಯಾವುದೇ ಸಂದರ್ಭದಲ್ಲೂ ಅಜ್ಞಾತವಾಗಿರುವಂತಿಲ್ಲ ಎಂದು ಅವರು ಭರವಸೆ ನೀಡಬೇಕು ಎಂದು ಅಧಿಕಾರಿ ಹೇಳಿದರು.

ಕೋವಿಡ್ ಪರೀಕ್ಷಾ ದರಗಳ ಮೇಲೆ ಮಿತಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಿರುವುದರಿಂದ, ರಾಜ್ಯ ಸರ್ಕಾರವು ಸಾಂಪ್ರದಾಯಿಕ ಮತ್ತು ಎಕ್ಸ್‌ಪ್ರೆಸ್ ಪರೀಕ್ಷೆಗಳಿಗೆ ಬೆಲೆ ಮಿತಿಗಳನ್ನು ಘೋಷಿಸಿದೆ. ಇವು ICMR ಅನುಮೋದಿತ ಪರೀಕ್ಷೆಗಳಾಗಿವೆ.

ಪರೀಕ್ಷಾ ದರಗಳು ಇಂತಿವೆ
RT-PCR (ಸಾಂಪ್ರದಾಯಿಕ): 500 ರೂ.
ಅಬಾಟ್ ಐಡಿ: ರೂ 3,000.
ಥರ್ಮೋಫಿಶರ್ ಅಕ್ಯುಲಾ: ರೂ 1,500.
ಟಾಟಾ MD3 ಜೀನ್ ಫಾಸ್ಟ್.
ಟಾಟಾ MDXF: ರೂ 1,200.
ಸೆಫೀಡ್ ಜೀನ್ ತಜ್ಞರ ಪರೀಕ್ಷೆ: 2,750 ರೂ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com