ಚಿತ್ರದುರ್ಗ: ರಸ್ತೆ ದಾಟುತಿದ್ದ ಕುರಿ ಹಿಂಡಿನ ಮೇಲೆ ನುಗ್ಗಿದ ಲಾರಿ; ಓರ್ವ ಕುರಿಗಾಹಿ ಮತ್ತು 70 ಕುರಿಗಳ ದಾರುಣ ಸಾವು

ರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ ಏಕಾಏಕಿ ಲಾರಿ ನುಗ್ಗಿ ಓರ್ವ ಕುರಿಗಾಹಿ ಸಹಿತ 70 ಕುರಿಗಳು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಣಿವೆ ಬಳಿ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚಿತ್ರದುರ್ಗ: ಚಿತ್ರದುರ್ಗ: ರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ ಏಕಾಏಕಿ ಲಾರಿ ನುಗ್ಗಿ ಓರ್ವ ಕುರಿಗಾಹಿ ಸಹಿತ 70 ಕುರಿಗಳು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಣಿವೆ ಬಳಿ ಸಂಭವಿಸಿದೆ.

ಹಿರಿಯೂರು ತಾಲೂಕಿನ ಬೆನಕನಹಳ್ಳಿಯ 47 ವರ್ಷದ ಕುರಿಗಾಹಿ ಮೂಡಲಪ್ಪ 70 ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆಯ ತಿರುವಿನಲ್ಲಿ ಕುರಿಗಳು ದಾಟುತ್ತಿದ್ದ ವೇಳೆ ಅತಿ ವೇಗದಿಂದ ಬಂದ ಲಾರಿ ಕ್ಷರ್ಣಾಧದಲ್ಲಿ ಕುರಿಗಳ ಮೇಲೆ ಹಾಯ್ದು ಈ ದುರ್ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತಿರುವಿನಲ್ಲಿ ವೇಗವಾಗಿ ಬಂದ ಲಾರಿ, ನಿಯಂತ್ರಣ ತಪ್ಪಿ ಕುರಿ ಹಿಂಡಿನ ಮೇಲೆ ಹರಿದಿದೆ. ಇನ್ನು ಘಟನೆ ಸಂಭವಿಸುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹೊಳಕೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com