ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಗರದ ಹಲವೆಡೆ ನಾಳೆ ನೀರು ಪೂರೈಕೆಯಲ್ಲಿ ವ್ಯತ್ಯಯ

ಜಲಮಂಡಳಿಯು ಕೆ.ಆರ್‌.ಪುರದಲ್ಲಿ ಪೈಪ್‌ ಜೋಡಣಾ ಕಾರ್ಯ ಹಾಗೂ ಟಿ.ಕೆ.ಹಳ್ಳಿಯಲ್ಲಿ ಪೈಪ್‌ ಬದಲಿಸುವ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಡಿ.29ರಂದು ಬೆಳಗಿನ ಜಾವ 3 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಗರದ ಹಲವೆಡೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
Published on

ಬೆಂಗಳೂರು: ಜಲಮಂಡಳಿಯು ಕೆ.ಆರ್‌.ಪುರದಲ್ಲಿ ಪೈಪ್‌ ಜೋಡಣಾ ಕಾರ್ಯ ಹಾಗೂ ಟಿ.ಕೆ.ಹಳ್ಳಿಯಲ್ಲಿ ಪೈಪ್‌ ಬದಲಿಸುವ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಡಿ.29ರಂದು ಬೆಳಗಿನ ಜಾವ 3 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಗರದ ಹಲವೆಡೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಯಲಹಂಕ, ಜಕ್ಕೂರು, ಬ್ಯಾಟರಾಯನಪುರ, ಮಾರತಹಳ್ಳಿ, ಕೆಆರ್ ಪುರಂ, ನಾಗರಭಾವಿ, ವೈಟ್‌ಫೀಲ್ಡ್ ನೀರು ವ್ಯತ್ಯಯವಾಗಲಿದೆ ಎಂದು ತಿಳಿದುಬಂದಿದೆ.

ಇದಷ್ಟೇ ಅಲ್ಲದೆ, ದಾಸರಹಳ್ಳಿ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ.ದಾಸರಹಳ್ಳಿ, ಪೀಣ್ಯ, ರಾಜಗೋಪಾಲನಗರ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ಎಚ್ಎಂಟಿ ವಾರ್ಡ್, ನಂದಿನಿ ಲೇಔಟ್, ಆರ್.ಆರ್.ನಗರ, ಕೆಂಗೇರಿ, ಉಲ್ಲಾಳ, ಅನ್ನಪೂರ್ಣೇಶ್ವರಿ ನಗರ, ಪಾಪರೆಡ್ಡಿಪಾಳ್ಯ, ಮಲ್ಲತ್ತಹಳ್ಳಿ, ಕೆಂಗುಂಟೆ, ಜಗಜ್ಯೋತಿ ಲೇಔಟ್, ಜ್ಞಾನಭಾರತಿ ಲೇಔಟ್, ಐಡಿಯಲ್ ಹೋಮ್ಸ್, ಬಿಇಎಂಎಲ್ ಲೇಔಟ್, ಪಟ್ಟಣಗೆರೆ, ಚನ್ನಸಂದ್ರ, ಕೊತ್ತನೂರು ದಿಣ್ಣೆ, ಜೆ.ಪಿ.ನಗರ 6, 7 & 8ನೇ ಹಂತ, ವಿಜಯಬ್ಯಾಂಕ್ ಲೇಔಟ್, ಕೂಡ್ಲು ವಿನಲ್ಲೂ ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ.

ಇನ್ನೂ ಯಾವೆಲ್ಲಾ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ಹೆಚ್ಚಿನ ಮಾಹಿತಿಯು ಈ ಕೆಳಕಂಡ ವೆಬ್'ಸೈಟ್ https://bwssb.karnataka.gov.in ನಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com