ಭೂಕುಸಿತದ ನಂತರ ದುಧ್‌ಸಾಗರ್ ಬಳಿ ಹಳಿ ತಪ್ಪಿದ ಮಂಗಳೂರು-ಮುಂಬೈ ವಿಶೇಷ ರೈಲು

ಭೂಕುಸಿತದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳುವ ವಿಶೇಷ ರೈಲು(ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್) ದುಧ್‌ಸಾಗರ್-ಸೋನೌಲಿಮ್ ನಿಲ್ದಾಣಗಳ ನಡುವೆ ಹಳಿ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ಹಳಿ ತಪ್ಪಿದ ರೈಲು
ಹಳಿ ತಪ್ಪಿದ ರೈಲು
Updated on

ಹುಬ್ಬಳ್ಳಿ: ಭೂಕುಸಿತದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳುವ ವಿಶೇಷ ರೈಲು(ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್) ದುಧ್‌ಸಾಗರ್-ಸೋನೌಲಿಮ್ ನಿಲ್ದಾಣಗಳ ನಡುವೆ ಹಳಿ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಎಲ್ಲಾ 345 ಪ್ರಯಾಣಿಕರನ್ನು ಮಡ್ಗಾಂವ್‌ಗೆ ವಾಪಸ್ ಕಳುಹಿಸಲಾಗಿದೆ.

ಕರಾವಳಿ ಪ್ರದೇಶದಲ್ಲಿ ನಿರಂತರ ಮಳೆ ಮತ್ತು ಗೋವಾದಲ್ಲಿ ನದಿಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಅನೇಕ ರೈಲುಗಳನ್ನು ಮಡ್ಗೊವನ್-ಲೋಂಡಾ-ಮಿರಾಜ್ ಮೂಲಕ ಸಂಚರಿಸುತ್ತಿವೆ. ಪರಿಣಾಮವಾಗಿ, ದುರದೃಷ್ಟದ ಮಂಗಳೂರು-ಮುಂಬೈ ರೈಲು ಕಾರ್ವಾರ್, ಮಡ್ಗಾಂವ್, ಲೋಂಡಾ ಮತ್ತು ಮಿರಾಜ್ ಮೂಲಕ ಮುಂಬೈಗೆ ಹೋಗುತ್ತಿತ್ತು.

ಸೌತ್ ವೆಸ್ಟರ್ನ್ ರೈಲ್ವೆಯ ದುಧ್‌ಸಾಗರ್ ಮತ್ತು ಸೋನಾಲಿಮ್ ನಡುವೆ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಎರಡು ಭೂಕುಸಿತ ಸಂಭವಿಸಿದೆ. ಘಟನೆ ನಡೆದ ಕೂಡಲೇ, ಕ್ಯಾಸಲ್ ರಾಕ್ ಮತ್ತು ವಾಸ್ಕೋ ಡಾ ಗಾಮಾದ ಅಪಘಾತ ಪರಿಹಾರ ರೈಲು(ಎಆರ್‌ಟಿ) ಸ್ಥಳಕ್ಕೆ ಧಾವಿಸಿ ಪುನಃಸ್ಥಾಪನೆ ಕ್ರಮಗಳನ್ನು ಕೈಗೊಂಡಿದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಲ್ಖೆಡೆ ಸೇರಿದಂತೆ ಹುಬ್ಬಳ್ಳಿ ವಿಭಾಗದ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಈ ಮಧ್ಯೆ, ದುಧ್‌ಸಾಗರ್ ಮೂಲಕ ಮಡ್ಗಾಂವ್‌ಗೆ ತೆರಳುತ್ತಿದ್ದ ಹಜರತ್ ನಿಜಾಮುದ್ದೀನ್-ವಾಸ್ಕೋ ಡಾ ಗಾಮಾ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ನಿಲ್ಲಿಸಿ ಮತ್ತೆ ಲೋಂಡಾಗೆ ವಾಪಸ್ ಕಳುಹಿಸಲಾಯಿತು. ರೈಲಿನಲ್ಲಿ 887 ಪ್ರಯಾಣಿಕರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com