ರಾಜ್ಯದಲ್ಲಿ ಕೊರೋನಾ ಇಳಿಕೆ ಬೆನ್ನಲ್ಲೇ ಆಕ್ಸಿಜನ್ ಬೆಡ್'ಗೂ ಬೇಡಿಕೆ ಇಳಿಕೆ!

ರಾಜ್ಯದಲ್ಲಿ ಕಳೆದ 2 ವಾರಗಳಿಂದ ಕೊರೋನಾ ಇಳಿಕೆಯಾಗಿದ್ದು, ಇದರೊಂದಿಗೆ ಆಕ್ಸಿಜನ್ ಬೆಡ್'ಗಳ ಬೇಡಿಕೆ ಕೂಡ ಕಡಿಮೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಕಳೆದ 2 ವಾರಗಳಿಂದ ಕೊರೋನಾ ಇಳಿಕೆಯಾಗಿದ್ದು, ಇದರೊಂದಿಗೆ ಆಕ್ಸಿಜನ್ ಬೆಡ್'ಗಳ ಬೇಡಿಕೆ ಕೂಡ ಕಡಿಮೆಯಾಗಿದೆ. 

ರಾಜ್ಯದ ಕೋವಿಡ್-19 ವಾರ್ ರೂಮ್ ಈ ಕುರಿತ ಮಾಹಿತಿ ಪ್ರಕಟಿಸಿದ್ದು, ಜೂನ್ 3 ರಂದು 48,167 ಆಕ್ಸಿಜನ್ ಹಾಸಿಗೆಗಳ ಪೈಕಿ (30,655) ಶೇ. 63.64 ಬುಕ್ ಆಗಿವೆ. ಜೂನ್ 17 ರಂದು, 48,105 ಆಮ್ಲಜನಕ ಹಾಸಿಗೆಗಳಲ್ಲಿ ಕೇವಲ 32.53 ರಷ್ಟು ಮಾತ್ರ (15,653)ಬುಕ್ ಆಗಿವೆ. ಬೆಂಗಳೂರಿನ ಕೋವಿಡ್‌ ಚಿಕಿತ್ಸೆಗೆ ಅತಿದೊಡ್ಡ ಆರೈಕೆ ಕೇಂದ್ರವಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 416 ಎಚ್‌ಡಿಯು ಹಾಸಿಗೆಗಳಲ್ಲಿ 361 ಖಾಲಿಯಿರುವುದು ಕಂಡು ಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ ಅವರು, ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹಾಗೂ ಆಕ್ಸಿಜನ್ ಬೆಡ್ ಗಳ ಬೇಡಿಕೆ ಎರಡೂ ಇಳಿಕೆಯಾಗಿದೆ. ಈ ಹಿಂದೆ ಬೆಡ್ ಗಳಿಗೆ ಆಹಾಕಾರ ಶುರುವಾಗಿತ್ತು. ಆದರೆ, ಇಂದು ರಾಜ್ಯದಲ್ಲಿ ಶೇ.50ರಷ್ಟು ಬೆಡ್ ಗಳು ಖಾಲಿ ಉಳಿದಿವೆ. ಮೇ.22ರ ಬಳಿಕ ಸೋಂಕು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದನ್ನು ಗಮನಿಸಿದ್ದೇವೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಹುತೇಕ ಜನರು ಲಕ್ಷಣ ರಹಿತ ಹಾಗೂ ಸಣ್ಣಪುಟ್ಟ ಲಕ್ಷಣಗಳಿರುವವರಾಗಿದ್ದಾರೆ. ಅವರಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಆಗತ್ಯವಿಲ್ಲ. ಪ್ರಿಸ್ಟೀನ್ ಆಸ್ಪತ್ರೆಯಲ್ಲಿ ಪ್ರತೀನಿತ್ಯ 8-10 ಮಂದಿ ದಾಖಲಾಗುತ್ತಿದ್ದರು. ಆದರೀಗ ಈ ಸಂಖ್ಯೆ 1-2ಕ್ಕೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ. 

ಬಿಬಿಎಂಪಿ ಬೆಡ್ ಪೋರ್ಟಲ್ ನಲ್ಲಿರುವ ಮಾಹಿತಿಗಳ ಪ್ರಕಾರ, ಹಂಚಿಕೆಯಾದ 7,172 ಸರ್ಕಾರಿ ಕೋಟಾ ಸಾಮಾನ್ಯ ಹಾಸಿಗೆಗಳಲ್ಲಿ 6,750 ಹಾಸಿಗಳು ಲಭ್ಯವಿದೆ. 4,913 ಸರ್ಕಾರಿ ಕೋಟಾ ಹೈ ಡಿಪೆಂಡೆನ್ಸಿ ಯುನಿಟ್ (ಎಚ್‌ಡಿಯು) ಹಾಸಿಗೆಗಳಲ್ಲಿ 4,243 ಖಾಲಿ ಇವೆ. 643 ಸರ್ಕಾರಿ ಕೋಟಾ ಐಸಿಯು ವೆಂಟಿಲೇಟರ್ ಹಾಸಿಗೆಗಳಲ್ಲಿ 288 ಲಭ್ಯವಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com