ಹಾಸನ: ಎರಡನೇ ಮದ್ವೆಯಿಂದ ಬೇಸರ, ಮಗುವನ್ನೂ ಕೊಂದು ತಾಯಿ ಆತ್ಮಹತ್ಯೆ!

ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಮಗುವಿಗೂ ನೇಣು ಬಿಗಿದು ಕೊಂದ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಸಕಲೇಶಪುರದ ಆನೇಮಹಲ್ ಎಂಬಲ್ಲಿ ನಡೆದಿದೆ.
ಪ್ರಜ್ವಲ ಹಾಗೂ ಅವರ ಪುತ್ರಿ
ಪ್ರಜ್ವಲ ಹಾಗೂ ಅವರ ಪುತ್ರಿ
Updated on: 

ಹಾಸನ: ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಮಗುವಿಗೂ ನೇಣು ಬಿಗಿದು ಕೊಂದ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಸಕಲೇಶಪುರದ ಆನೇಮಹಲ್ ಎಂಬಲ್ಲಿ ನಡೆದಿದೆ.

ಮೃತರನ್ನು ಪ್ರಜ್ವಲ (26) ಹಾಗೂ ಆಕೆಯ ಪುತ್ರಿ ಸಾದ್ವಿ(2.5) ಎಂದು ಗುರುತಿಸಲಾಗಿದೆ.

ಪ್ರಜ್ವಲ ಅವರ ಮೊದಲ ಪತಿ ಸುರೇಂದ್ರ ರಸ್ತೆ ಅಪಘಾತದಲ್ಲಿಸಾವನ್ನಪ್ಪಿದ್ದು ಮನೆಯವರು ಮಗಳ ಜೀವನ ಸುರಕ್ಷತೆ ದೃಷ್ಟಿಯಿಂದ ಅವಳಿಗೆ ಆನೇಮಹಲ್ ನ ಮೋಹನ್ ಎಂಬಾತನೊಂದಿಗೆ ಮದುವೆ ಮಾಡಿಸಿದ್ದರು. ಇನ್ನು ಮೋಹನ್ ಅವರ ಪತ್ನಿ ಕೂಡ ಮೂರು ತಿಂಗಳ ಹಿಂದೆ ಹೆರಿಗೆ ವೇಳೆ ಮೃತಪಟ್ಟಿದ್ದರು.

ಜೂನ್ 16ರಂದು ಮದುವೆ ನಡೆದಿತ್ತು. ಆ ಮದುವೆಯಾದ ಎರಡನೇ ದಿನಕ್ಕೆ ಪ್ರಜ್ವಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗುವಿಗೂ ನೇಣು ಬಿಗಿದು ಕೊಂದು ತಾನೂ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com