ಬೆಳಗಾವಿ: ಪತ್ನಿ ಸಾವಿನಿಂದ ಮನನೊಂದು ತನ್ನಿಬ್ಬರು ಪುತ್ರಿಯರೊಂದಿಗೆ ತಂದೆ ಆತ್ಮಹತ್ಯೆ

ವ್ಯಕ್ತಿ ಓರ್ವ ತನ್ನಿಬ್ಬರೂ ಪುತ್ರಿಯರೊಂದಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ  ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಳಗಾವಿ: ವ್ಯಕ್ತಿ ಓರ್ವ ತನ್ನಿಬ್ಬರೂ ಪುತ್ರಿಯರೊಂದಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ  ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಮೃತರನ್ನು 48 ವರ್ಷದ ಕಾಡಪ್ಪ ರಂಗಾಪುರೆ, 18 ವರ್ಷದ ಕೀರ್ತಿ ಹಾಗೂ 16 ವರ್ಷದ ಸ್ಫೂರ್ತಿ ಎಂದು ಗುರುತಿಸಲಾಗಿದೆ. 

ಕಾಡಪ್ಪ ಅವರ ಪತ್ನಿ ಚನ್ನವ್ವ ರಂಗಾಪುರೆ ವಾರದ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಇದರಿಂದ ತೀವ್ರವಾಗಿ ಮನನೊಂದಿದ್ದ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com