ರಾಜ್ಯದಲ್ಲಿ ಹೊಸ ಜಲ ನೀತಿ: ಸಮಿತಿ ರಚನೆಗೆ ಸರ್ಕಾರ ನಿರ್ಧಾರ

ರಾಜ್ಯದಲ್ಲಿರುವ ನೀರಿನ ಬಳಕೆ ಕುರಿತು, ನೀರು ನಿರ್ವಹಣೆ, ಕೃಷಿ, ಕೈಗಾರಿಕೆ, ಕುಡಿಯುವ ನೀರಿಗೆ ಆದ್ಯತೆ ನೀಡಬೇಕೆನ್ನುವ ದೃಷ್ಟಿಯಿಂದ ಹೊಸ ಜಲನೀತಿ ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ರಾಜ್ಯದಲ್ಲಿರುವ ನೀರಿನ ಬಳಕೆ ಕುರಿತು, ನೀರು ನಿರ್ವಹಣೆ, ಕೃಷಿ, ಕೈಗಾರಿಕೆ, ಕುಡಿಯುವ ನೀರಿಗೆ ಆದ್ಯತೆ ನೀಡಬೇಕೆನ್ನುವ ದೃಷ್ಟಿಯಿಂದ ಹೊಸ ಜಲನೀತಿ ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿಯವರು, ಕರ್ನಾಟಕ ರಾಜ್ಯ ಜಲನೀತಿ 2021ಕ್ಕೆ ಅನುಮೋದನೆ ನೀಡಲಾಗಿದೆ. 2019ರ ರಾಜ್ಯ ಜಲನೀತಿಯನ್ನು ಪರಿಷ್ಕರಿಸಿ ನೂತನ ಜಲನೀತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. 

ನೀರು ನಿರ್ವಹಣೆ, ಯಾವ ಉದ್ದೇಶಕ್ಕೆ ಹೆಚ್ಚಿನ ನೀರು ಬಳಕೆ ಮಾಡಬೇಕು, ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವ ಸಮಗ್ರ ನೀತಿ ರೂಪಿಸಲು ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಉಪ ಸಮಿತಿಯಲ್ಲಿ ಯಾರು ಇರಬೇಕು, ಯಾರು ಅಧ್ಯಕ್ಷರಾಗಬೇಕು ಎನ್ನುವುದನ್ನು ಸಿಎಂ ನಿರ್ಧಾರಕ್ಕೆ ಬಿಡಲಾಗಿದೆ. ಈ ನೀತಿ ಅಂತಾರಾಜ್ಯ ಜಲ ವಿವಾದಕ್ಕೀಡಾದ ವಿಷಯಗಳನ್ನು ಒಳ ಗೊಳ್ಳುವುದಿಲ್ಲ. ವಿಶ್ವಬ್ಯಾಂಕ್‌ ನೆರವಿನಿಂದ ರಾಜ್ಯದ ಅಣೆಕಟ್ಟುಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ 2 ಮತ್ತು 3ನೇ ಹಂತದ ಕಾಮಗಾರಿಗಳಿಗೆ 1,500 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಈ ಯೋಜನೆಗೆ ಶೇ. 70ರಷ್ಟು ವಿಶ್ವ ಬ್ಯಾಂಕ್‌ ಸಾಲ ಮತ್ತು ಶೇ.30ರಷ್ಟು ರಾಜ್ಯದ ಪಾಲು ಬಳಸಲಾಗುವುದು ಎಂದು ತಿಳಿಸಿದ್ದಾರೆ. 

ಕರ್ನಾಟಕ ಟೌನ್ ಪ್ಲಾನಿಂಗ್ ಆಕ್ಟ್ 1961ಗೆ ತಿದ್ದುಪಡಿ ಮಾಡಲು ಸಭೆಯು ಸಮ್ಮತಿಸಿದ್ದು, ಟಿಡಿಆರ್ ನೀಡಲು ಎರಡು ಸರ್ವೆ ಬದಲು ಒಂದೇ ಸಲ ಸರ್ವೆ ಮಾಡಲು ತೀರ್ಮಾನ ಮಾಡಲಾಗಿದೆ. ಟಿಡಿಆರ್ ಕೊಡುವ ವ್ಯವಸ್ಥೆಯನ್ನು ಯಾರು ಸಮೀಕ್ಷೆ ಮಾಡಿ ಕೊಡುತ್ತಾರೆ ಅದೇ ಅಂತಿಮ ಎಂಬ ನಿಯಮವನ್ನು ಸಡಿಸಲಾಗುವುದು. ಬಿಡಿಎ ಸಮೀಕ್ಷೆಗೆ ಬಿಡಿಎ ಒಪ್ಪಿಗೆ ನೀಡಬೇಕು. 90 ದಿನದೊಳಗೆ ಟಿಡಿಆರ್ ನೀಡಬೇಕು. ಸಕಾಲದಲ್ಲಿ ಪ್ರತಿಕ್ರಿಯಿಸಿದ್ದರೆ ಡೀಮ್ಡ್ ಒಪ್ಪಿಗೆ ಅಂತ ತೀರ್ಮಾನ ಮಾಡಲು ಸಂಪುಟ ಸಭೆಯು ನಿರ್ಧಾರ ಕೈಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com