ಬೊಮ್ಮಾಯಿ

ಭಾರತದ ವಿರುದ್ಧದ ಷಡ್ಯಂತ್ರಗಳನ್ನು ಗಂಭೀರವಾಗಿ ಪರಿಗಣಿಸಿ, ವಿದೇಶಿ ಹಣದ ಹರಿವಿಗೆ ಕಡಿವಾಣ ಹಾಕಿ: ಕೇಂದ್ರಕ್ಕೆ ಸಂಸದ ಬೊಮ್ಮಾಯಿ ಆಗ್ರಹ
ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಂತಹ ನೆರೆಯ ರಾಷ್ಟ್ರಗಳಿಗೆ ವಿದೇಶಿ ದೇಣಿಗೆ ಹರಿದುಬಂದಿರುವುದು ಸಾಬೀತಾಗಿದೆ, ಕಳೆದ ಹತ್ತು ವರ್ಷಗಳಿಂದ, ವಿಶೇಷವಾಗಿ ಸೊರೊಸ್ ಫೌಂಡೇಷನ್‌ನಂತಹ ಸಂಸ್ಥೆಗಳಿಂದ ಹಣ ಹರಿದುಬರುತ್ತಿದೆ ಎಂಬ ಆರೋಪಗಳಿವೆ.

ಸ್ಟಿಂಗ್ ಆಪರೇಷನ್ ವಿಚಾರ ಪ್ರಸ್ತಾಪಿಸಿದ್ದು ಡಿ.ಕೆ ಶಿವಕುಮಾರ್, ತನಿಖೆಯಾಗದಿದ್ದರೆ ಅವರ ಮೇಲೆಯೇ ಅನುಮಾನ: ಸಂಸದ ಬೊಮ್ಮಾಯಿ
ಸ್ಟಿಂಗ್ ಆಪರೇಷನ್ ವಿಚಾರವನ್ನು ಮುಖ್ಯಮಂತ್ರಿಯವರೇ ಪ್ರಸ್ತಾಪಿಸಿರುವುದರಿಂದ ಸತ್ಯವನ್ನು ಹೊರತರಲು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ ಹೇಳಿಕೆ ನೀಡಿ, ಆರಾಮವಾಗಿ ಓಡಾಡಿಕೊಂಡು ಜೀವನ ನಡೆಸಿದರೆ ಸಾಲದು. ಇದು ಅತ್ಯಂತ ಗಂಭೀರವಾದ ವಿಚಾರ.

ಕಬ್ಬು ಬೆಳೆಗಾರರ ಬೆಂಬಲಕ್ಕೆ ನಿಂತು, ಸಮಸ್ಯೆ ಪರಿಹರಿಸಿ: ರಾಜ್ಯ ಸರ್ಕಾರಕ್ಕೆ ಸಂಸದ ಬೊಮ್ಮಾಯಿ ಆಗ್ರಹ
ಕಬ್ಬಿನ ಉಪ ಉತ್ಪನ್ನಗಳಿಂದ ಸಂಗ್ರಹವಾಗುವ ಜಿಎಸ್‌ಟಿ ಆದಾಯ ರಾಜ್ಯ ಸರ್ಕಾರಕ್ಕೆ ದೊರೆಯುವುದರಿಂದ, ರೈತರ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯವೂ ತನ್ನ ಪಾಲಿನ ಜವಾಬ್ದಾರಿ ನಿರ್ವಹಿಸಬೇಕು.

ನ್ಯಾಯಾಂಗದ ಮೇಲೆ ಒತ್ತಡ ಹೇರುವುದು ಪ್ರಜಾಪ್ರಭುತ್ವ ವಿರೋಧಿ; INDIA ಒಕ್ಕೂಟದ ಪಾದಯಾತ್ರೆ ಕಾನೂನುಬಾಹಿರ: ಸಂಸದ ಬೊಮ್ಮಾಯಿ
ರಾಜಕೀಯ ಪ್ರೇರಿತ ಹಾಗೂ ದುರುದ್ದೇಶಪೂರಿತ ಉದ್ದೇಶಗಳಿಂದ ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹೇರಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುವುದು ಆತಂಕಕಾರಿ ಸಂಗತಿ.

ಕಾಂಗ್ರೆಸ್ ದೇಶವಿರೋಧಿಗಳ ಪರ: ಉಮರ್ ಖಾಲಿದ್ ಪರ ಹರಿಪ್ರಸಾದ್ ಹೇಳಿಕೆಗೆ ಸಂಸದ ಬೊಮ್ಮಾಯಿ ತೀವ್ರ ಕಿಡಿ
ಮುಂಬೈ ದಾಳಿಯನ್ನು ‘ಕೇಸರಿ ಭಯೋತ್ಪಾದನೆ’ ಎಂದು ಬಿಂಬಿಸಲು ಪ್ರಯತ್ನಿಸಿದ್ದು ಹಾಗೂ ಪಾಕಿಸ್ತಾನದ ಪರ ನಿಲುವು ತಳೆದಿರುವುದು ಇದಕ್ಕೆ ಉದಾಹರಣೆ ಎಂದು ಆರೋಪಿಸಿದರು.

"ಚಾರಿತ್ರ್ಯವಧೆ ನಿಲ್ಲಿಸಿ, ಬಹಿರಂಗ ಕ್ಷಮೆ ಕೇಳಿ": ಬೊಮ್ಮಾಯಿ ವಿರುದ್ಧ ಎಚ್.ಕೆ ಪಾಟೀಲ್ ಆಕ್ರೋಶ; ಹಾಸ್ಯಾಸ್ಪದ ಎಂದ ಮಾಜಿ ಸಿಎಂ
ಬೊಮ್ಮಾಯಿ ಅವರ ಆರೋಪಕ್ಕೆ ಭಾನುವಾರ ಗದಗದಲ್ಲಿ ಭರ್ಜರಿ ಕೌಂಟರ್ ನೀಡಿದ ಎಚ್.ಕೆ. ಪಾಟೀಲ್, ತಮ್ಮದೇ ಹೆಸರು ಮತ್ತು ತಂದೆಯ ಹೆಸರನ್ನು ಹೊಂದಿರುವ ಇಬ್ಬರು ಸ್ಥಳೀಯ ನಾಗರಿಕರನ್ನು ಮಾಧ್ಯಮಗಳ ಮುಂದೆ ಖುದ್ದಾಗಿ ಹಾಜರುಪಡಿಸಿದರು.

ಕಾಂಗ್ರೆಸ್ ಸ್ಥಾಪಿಸಿದ್ದು ವಿದೇಶಿಗರು, RSS ಸ್ಥಾಪಿಸಿದ್ದು ಭಾರತೀಯರು; ಸಮಾಜ ಸೇವೆಯಿಂದ ಬೆಳೆದ ಸಂಘಟನೆಗೆ ಮಾನ್ಯತೆ ಬೇಕಿಲ್ಲ: ಸಂಸದ ಬೊಮ್ಮಾಯಿ
ದೇಶದಲ್ಲಿ ನೋಂದಾಯಿತ ಮತ್ತು ನೋಂದಣಿಯಾಗದ ಅನೇಕ ಸಂಘಟನೆಗಳಿವೆ. ಆರ್‌ಎಸ್‌ಎಸ್‌ಗೆ ಸುದೀರ್ಘ ಇತಿಹಾಸವಿದ್ದು, ಇದು ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಘಟನೆಗಳಲ್ಲಿ ಒಂದಾಗಿದೆ. ಸಮಾಜ ಸೇವೆಯಲ್ಲಿ ಮಹತ್ವದ ಕೊಡುಗೆ ನೀಡಿರುವ ಕಾರಣವೇ ಕೆಲವರು ಈ ಸಂಘಟನೆಯನ್ನು ಗುರಿಯಾಗಿಸಿಕೊಂಡು ಟೀಕಿಸುತ್ತಿದ್ದಾರೆ.

ನಮ್ಮ ನಿರೀಕ್ಷೆಯಂತೆ ಎಕ್ಸಿಟ್ ಪೋಲ್ ಬಂದಿದೆ, ಪಶ್ಚಿಮ ಬಂಗಾಳ ಫಲಿತಾಂಶ ದೇಶಕ್ಕೆ ದಿಕ್ಸೂಚಿ: ಸಂಸದ ಬಸವರಾಜ ಬೊಮ್ಮಾಯಿ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಎಷ್ಟೇ ಸಮಸ್ಯೆ ಮಾಡಲಿ, ಏನೇ ಹಿಂಸೆ ಕೊಡಲಿ, ಜನ ಬದಲಾವಣೆ ಬಯಸಿದ್ದಾರೆ. ಅಲ್ಲಿನ ಜನ ಶೇ 90 ರಷ್ಟು ಮತದಾನ ಮಾಡಿದ್ದಾರೆ. ಪಶ್ಚಿಮ ಬಂಗಾಳ ಫಲಿತಾಂಶ ದೇಶಕ್ಕೆ ದಿಕ್ಸೂಚಿ ಆಗಲಿದೆ.

ಮಹಿಳೆಯರಿಗೆ ಅವಕಾಶ ಕೊಟ್ಟರೆ, ಸಮಾಜಕ್ಕೆ ಹೆಚ್ಚಿನ ಕೊಡುಗೆ: ಸಂಸದ ಬಸವರಾಜ ಬೊಮ್ಮಾಯಿ
ಮಹಿಳೆಯರಲ್ಲಿ ಅಪಾರ ಪ್ರತಿಭೆ, ಪ್ರಾಮಾಣಿಕತೆ ಇರುತ್ತದೆ. ಅವರಿಗೆ ಸೂಕ್ತ ಅವಕಾಶಗಳು ದೊರೆತರೆ, ಅವರು ಸಮಾಜವನ್ನು ಮತ್ತಷ್ಟು ಮುನ್ನಡೆಸುವ ಶಕ್ತಿ ಹೊಂದಿದ್ದಾರೆ.

