ಮೃತ ಕೋವಿಡ್-19 ಸೋಂಕಿತನ ಸಂಬಂಧಿಯಿಂದ ವೈದ್ಯೆ ಮೇಲೆ ಹಲ್ಲೆ- ವಿಡಿಯೋ

ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ್ದ ವೈದ್ಯೆ ಪ್ರಿಯದರ್ಶಿನಿ ಮೇಲೆಮೃತ ಕೋವಿಡ್-19 ಸೋಂಕಿತನ ಸಂಬಂಧಿ ಹಲ್ಲೆ ಮಾಡಿರುವ  ಘಟನೆ ನಡೆದಿದೆ.
ಡಾಕ್ಟರ್ ಮೇಲೆ ಹಲ್ಲೆಯ ಸಿಸಿಟಿವಿ ದೃಶ್ಯ
ಡಾಕ್ಟರ್ ಮೇಲೆ ಹಲ್ಲೆಯ ಸಿಸಿಟಿವಿ ದೃಶ್ಯ
Updated on

ಬಳ್ಳಾರಿ: ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ್ದ ವೈದ್ಯೆ ಪ್ರಿಯದರ್ಶಿನಿ ಮೇಲೆ
ಮೃತ ಕೋವಿಡ್-19 ಸೋಂಕಿತನ ಸಂಬಂಧಿ ಹಲ್ಲೆ ಮಾಡಿರುವ  ಘಟನೆ ನಡೆದಿದೆ.

ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ಮಲ್ಲಿಕಾರ್ಜುನಗೌಡ ಎನ್ನುವ ರೋಗಿಯು ಎರಡು ದಿನಗಳ ಹಿಂದೆ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಸಂಬಂಧಿ ಕಾಯಿಲೆಯುಳ್ಳು ಈ ರೋಗಿಗೆ ಕೋವಿಡ್-19 ಸೋಂಕು ಕೂಡಾ ತಗುಲಿತ್ತು, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇವರು ಮೃತಪಟ್ಟಿದ್ದಾರೆ.

ತಮ್ಮ ತಂದೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತನ ಪುತ್ರ ತಿಪ್ಪೇಸ್ವಾಮಿ, ವೈದ್ಯೆ ಪ್ರಿಯದರ್ಶಿನಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಈ ದೃಶ್ಯ ಆಸ್ಪತ್ರೆಯಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಸಂಬಂಧ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com