ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಇಸ್ರೇಲ್ ಬೆಂಬಲಿಸಿದ ವ್ಯಕ್ತಿಯ ಮೇಲೆ ಹಲ್ಲೆ, ಐವರ ಬಂಧನ

ಇಸ್ರೇಲ್ ದೇಶವನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ಮೇಲೆ ಐವರು ಹಲ್ಲೆ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. 

ಮಂಗಳೂರು: ಇಸ್ರೇಲ್ ದೇಶವನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ಮೇಲೆ ಐವರು ಹಲ್ಲೆ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. 

ಇಸ್ರೇಲ್‌ಗೆ ಬೆಂಬಲವಾಗಿ ಫೇಸ್‌ಬುಕ್ ಪೋಸ್ಟ್‌ ಹಾಕಿದ ಕಾರಣ ಬೇಕರಿಯನ್ನು ಧ್ವಂಸಗೊಳಿಸಿ ಅದರ ಮಾಲೀಕರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮುಲ್ಕಿ ಪೊಲೀಸರು ಐವರನ್ನು ಬಂಧಿಸಿದ್ದು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. 

ಪ್ಯಾಲೆಸ್ಟೈನ್‌ನಲ್ಲಿನ ಭಯೋತ್ಪಾದಕ ಗುಂಪುಗಳ ವಿರುದ್ಧ ಇಸ್ರೇಲ್‌ನ ಕ್ರಮವನ್ನು ಬೆಂಬಲಿಸುವ ಮೂಲಕ ಬೇಕರಿ ಮಾಲೀಕರು ಇತ್ತೀಚೆಗೆ ಫೇಸ್‌ಬುಕ್ ಪೋಸ್ಟ್ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಕೆರಳಿಕೆ ಕೆಲ ಸ್ಥಳೀಯ ಯುವಕರ ಗುಂಪು ಬೇಕರಿಗೆ ನುಗ್ಗಿ ಕ್ಷಮೆ ಯಾಚಿಸುವಂತೆ ಮಾಲೀಕನನ್ನು ಒತ್ತಾಯಿಸಿ ಘಟನೆಯನ್ನು ಚಿತ್ರೀಕರಿಸಿದ್ದಾರೆ.

ಬೇಕರಿ ಮಾಲೀಕರಿಗೆ ವಿದೇಶದಿಂದ ಅಂತರ್ಜಾಲದ ಮೂಲಕ ಬೆದರಿಕೆ ಕರೆಗಳು ಬಂದವು ಎಂದು ಹೇಳಲಾಗಿದ್ದು, ಇದರ ಬೆನ್ನಲ್ಲೇ ಕೆಲ ಸಂಘಟನೆಗಳ ಮುಖಂಡರು ಬೇಕರಿಗೆ ಭೇಟಿ ನೀಡಿದ ನಂತರ ಮುಲ್ಕಿ ಪೊಲೀಸರಿಗೆ ದೂರು ನೀಡಲಾಯಿತು. ಎಲ್ಲಾ ಆರೋಪಿಗಳು ಷರತ್ತುಬದ್ಧ ಜಾಮೀನು ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com