ಗಡಿಕೇಶ್ವಾರ ಭೂಕಂಪನ: ಸದ್ಯಕ್ಕೆ ಗ್ರಾಮಗಳ ಸ್ಥಳಾಂತರ ಅವಶ್ಯಕತೆ ಇಲ್ಲ- ತಜ್ಞರ ಅಭಿಮತ

ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮ ಸೇರಿದಂತೆ  ಸುತ್ತಮುತ್ತಲ ಭೂಕಂಪನ ಪೀಡಿತ ಯಾವುದೇ ಗ್ರಾಮಗಳನ್ನು ಸ್ಛಳಾಂತರಿಸುವ ಯಾವುದೇ ಅಶ್ಯಕತೆ ಇಲ್ಲ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಸೇರಿದಂತೆ ವಿವಿಧ ಸಂಸ್ಥೆಗಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗಡಿಕೇಶ್ವಾರ ಗ್ರಾಮದಲ್ಲಿ ಭೂಕಂಪನ
ಗಡಿಕೇಶ್ವಾರ ಗ್ರಾಮದಲ್ಲಿ ಭೂಕಂಪನ
Updated on

ಕಲಬುರಗಿ: ಅಕ್ಚೋಬರ್ ನಿಂದ ಸತತವಾಗಿ ಭೂಕಂಪನ ಕುರಿತು ಸುದ್ದಿಯಾಗುತ್ತಿರುವ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮ ಸೇರಿದಂತೆ  ಸುತ್ತಮುತ್ತಲ ಭೂಕಂಪನ ಪೀಡಿತ ಯಾವುದೇ ಗ್ರಾಮಗಳನ್ನು ಸ್ಛಳಾಂತರಿಸುವ ಯಾವುದೇ ಅಶ್ಯಕತೆ ಇಲ್ಲ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಸೇರಿದಂತೆ ವಿವಿಧ ಸಂಸ್ಥೆಗಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಲಬುರಗಿ ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ಭೂಕಂಪನ ಪೀಡಿತ ಗ್ರಾಮಗಳಿಗೆ ಸೋಮವಾರ ಎರಡು ತಂಡಗಳಾಗಿ ವಿಂಗಡಣೆಯಾಗಿ ಭೇಟಿ ನೀಡಿದ 11 ಸಂಸ್ಥೆಗಳ ತಜ್ಞರು, ಬಳಿಕ ಮಂಗಳವಾರ ಕಲಬುರಗಿಯಲ್ಲಿ ಚರ್ಚೆ ನಡೆಸಿದರು.  ಈ ಚರ್ಚೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ತಂಡ ಅಕ್ಟೋಬರ್‌ನಲ್ಲಿ ರಾಜ್ಯದ ಹಲವು ಸ್ಥಳಗಳಲ್ಲಿ ರಿಕ್ಟರ್ ಮಾಪಕದಲ್ಲಿ 2 ರಿಂದ 4.2 ರ ತೀವ್ರತೆಯ ಕಂಪನಗಳು ದಾಖಲಾಗಿವೆ. ಎಲ್ಲೆಡೆ ಕಂಪನವಿರುತ್ತದೆ. ಗಡಿಕೇಶ್ವರದಲ್ಲಿ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಕಂಪನ ಕಂಡುಬಂದಿದೆ, ಇದು ಆ ಗ್ರಾಮ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತ್ಯಧಿಕವಾಗಿದೆ, ಗ್ರಾಮಕ್ಕೆ ಯಾವುದೇ ಅಪಾಯವಿಲ್ಲ ಮತ್ತು ಗ್ರಾಮಗಳನ್ನು ಸ್ಥಳಾಂತರಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ಈ ಗ್ರಾಮಗಳಲ್ಲಿ ಭೂಮಿಯ ಕಂಪನಗಳು ಮತ್ತು ಶಬ್ದಗಳು ನಿಲ್ಲುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಡಾ. ಮನೋಜ್ ರಾಜನ್ ಅವರು ಗ್ರಾಮದಲ್ಲಿರುವ ತಮ್ಮ ಮನೆಗಳ ಮುಂದೆ ಟಿನ್ ಶೆಡ್‌ಗಳನ್ನು ನಿರ್ಮಿಸಲು ಜನರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.  ಇದು ನಿಜವಾದ ಬೇಡಿಕೆಯಾಗಿದ್ದು, ಗಡಿಕೇಶ್ವಾರದಲ್ಲಿ ಜಿಲ್ಲಾಡಳಿತ 835 ಮನೆಗಳ ಸಮೀಕ್ಷೆ ನಡೆಸಿ ತಗಡಿನ ಶೆಡ್‌ ನಿರ್ಮಾಣಕ್ಕೆ ವರದಿ ಸಲ್ಲಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಅಲ್ಲದೆ ಕಂಪನ ಪೀಡಿತ ಗ್ರಾಮಗಳ ಕುರಿತು ತಜ್ಞರು ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದ್ದು, ಈ ವರದಿಯಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿಯ ಕ್ರಮಗಳ ಕುರಿತು ಶಿಫಾರಸುಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

ಸಭೆಯಲ್ಲಿ, ಕಲಬುರಗಿ, ವಯಾಪುರ ಮತ್ತು ಬೀದರ್ ಜಿಲ್ಲಾಡಳಿತಗಳು ಜನರು ಬಳಸಬೇಕಾದ ಸಾಮಗ್ರಿಗಳು ಮತ್ತು ಕಂಪನ ಪೀಟಿಡ ಸ್ಥಳಗಳಲ್ಲಿ ಮನೆಗಳನ್ನು ಹೇಗೆ ನಿರ್ಮಿಸಬೇಕು ಎಂಬುದರ ಕುರಿತು ಜಿಲ್ಲಾಡಳಿತ ಜನರಿಗೆ ಅರಿವು ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು. ಇನ್ನು ಈ ಚರ್ಚೆಯಲ್ಲಿ 11 ವಿವಿಧ ಸಂಸ್ಥೆಗಳ ತಜ್ಞರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕಲಬುರಗಿಯ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಂಕ್ಯಾಳ್, ವಿಜಯಪುರ ಉಪ ಆಯುಕ್ತ ಯು.ಎನ್.ರಾಮಚಂದ್ರನ್, ತಹಶೀಲ್ದಾರ್‌ಗಳು ಮತ್ತು ಸಂಬಂಧಪಟ್ಟ ತಾಲ್ಲೂಕುಗಳ ಸಹಾಯಕ ಆಯುಕ್ತರು ಉಪಸ್ಥಿತರಿದ್ದರು.

ಕಂಪನ ಸಾಮಾನ್ಯ, ಆದರೆ ದೊಡ್ಡ ಪ್ರಮಾಣದ ಕಂಪನ ಸಾಧ್ಯತೆ ಇಲ್ಲ
ಅಕ್ಟೋಬರ್‌ನಲ್ಲಿ ಈ ಮೂರು ಜಿಲ್ಲೆಗಳಲ್ಲಿ ಸಂಭವಿಸಿದ ಲಘು ಕಂಪನಕ್ಕೆ ಹಲವಾರು ಕಾರಣಗಳಿದ್ದರೂ, ಮುಖ್ಯ ಕಾರಣಗಳೆಂದರೆ ಜಲ ಭೂಕಂಪನ ಮತ್ತು ನಿಯೋ ಟೆಕ್ಟೋನಿಕ್ ಚಟುವಟಿಕೆಗಳು (ಭೂಗರ್ಭದಲ್ಲಿನ ಪದರಗಳ ಚಲನೆ) ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ. ಅಂತೆಯೇ ಪ್ರಪಂಚದ ಎಲ್ಲ ಪ್ರದೇಶಗಳಲ್ಲಿ ಸೌಮ್ಯವಾದ ಭೂ ಕಂಪನ ಸಾಮಾನ್ಯ. ಅಂತೆಯೇ ಇಲ್ಲೂ ಕೂಡ ಆಗುತ್ತಿದೆ. ಆದರೆ ಈ ಸ್ಥಳಗಳಲ್ಲಿ ದೊಡ್ಡ ಕಂಪನದ ಸಾಧ್ಯತೆಯನ್ನು ತಜ್ಞರು ತಳ್ಳಿಹಾಕಿದ್ದಾರೆ. ಅಂತೆಯೇ ತಜ್ಞರು ರೇಖಾಂಶಗಳ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವನ್ನು ಚರ್ಚಿಸಿದ್ದಾರೆ. ಜಲ ಭೂಕಂಪನ ಮತ್ತು ನಿಯೋಟೆಕ್ಟೋನಿಕ್ ಚಟುವಟಿಕೆಗಳು ಮತ್ತು ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು. ಎರಡನೆಯದಾಗಿ ತಜ್ಞರು ಭೂಕಂಪನ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ಚರ್ಚಿಸಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com