ಬೆಂಗಳೂರು: ನಾಲ್ಕು ತಿಂಗಳ ಸತತ ಮನವಿ ನಂತರ ನಾಗವಾರ ಮತ್ತು ವೀರನಪಾಳ್ಯ ನಿವಾಸಿಗಳ ದೂರುಗಳಿಗೆ ಸ್ಪಂದನೆ ದೊರೆತಿದೆ. ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈ ವಾಕ್ ನಿರ್ಮಾಣ ಕಾಮಗಾರಿ ವೇಳೆ ನೆಲಸಮಗೊಳಿಸಿದ್ದ ಎರಡು ಮೆಟ್ಟಿಲೇಣಿಗಳ ಪುನರ್ ನಿರ್ಮಾಣಕ್ಕೆ ಪ್ಲ್ಯಾನ್ ಅನ್ನು ನೀಡಲು ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗ ಕೇಳಿದೆ.
ಸ್ಥಳೀಯರು ಹೇಳುವಂತೆೀ ಹಿಂದೆ ನಾಗವಾರ ಫ್ಲೈ ಓವರ್ ಮತ್ತು ಸರ್ವೀಸ್ ರಸ್ತೆಗಳನ್ನು ಸಂಪರ್ಕಿಸಲು ಎರಡು ಮೆಟ್ಟಿಲೇಣಿಗಳಿದ್ದವು. ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಲು ಅಲ್ಲಿನ ನಿವಾಸಿಗಳು ಈ ಮೆಟ್ಟಿಲೇಣಿಗಳ ಬಳಕೆ ಮಾಡುತ್ತಿದ್ದರು.
ಮಾನ್ಯತಾ ಟೆಕ್ ಪಾರ್ಕ್ ನವರು ಫ್ಲೈ ಓವರಿನಿಂದ ಟೆಕ್ ಪಾರ್ಕ್ ಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಸ್ಕೈ ವಾಕ್ ಅನ್ನು ನಿರ್ಮಿಸಿದ್ದರು. ಈ ಸಂದರ್ಭ ಎರಡು ಮೆಟ್ಟಿಲೇಣಿಗಳನ್ನು ತೆಗೆಯಲಾಗಿತ್ತು. ಅದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು.
ಈ ಹಿಂದೆ ಟೆಕ್ ಪಾರ್ಕ್ ನವರಿಗೆ ಈ ಸಂಬಂಧ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
'007 ಮತ್ತೆ ಬರುತ್ತೇವೆ': ಕಳ್ಳರ ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾದ ಬೆಂಗಳೂರು ಪೊಲೀಸರು
ಐಎಎಸ್ ಅಧಿಕಾರಿ ಜತೆ ಒಡನಾಟ; ಏಕಮುಖ ಪ್ರೇಮ ವೈಫಲ್ಯದಿಂದ ಡಿ.ಕೆ ರವಿ ಆತ್ಮಹತ್ಯೆ: ಸಿದ್ದರಾಮಯ್ಯ
ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ರದ್ಧುಗೊಳಿಸಿದ ಕರ್ನಾಟಕ ಹೈಕೋರ್ಟ್
ಬೆಂಗಳೂರಿನಲ್ಲಿ ಕೋವಿಡ್ ಸಕ್ರಿಯ ಪ್ರಕರಣ ತಗ್ಗಿಸಲು ಹೆಣಗಾಟ
ಬೆಂಗಳೂರು: ಯುಟ್ಯೂಬ್ ನೋಡಿ ಬೈಕ್ ಕಳವು ಮಾಡುತ್ತಿದ್ದ ಗ್ಯಾಂಗ್ ಬಂಧನ
Advertisement