ದಕ್ಷಿಣ ಕನ್ನಡ: ಎಂಡೋಸಲ್ಫಾನ್ ಪೀಡಿತನೊಂದಿಗೆ ಬಲವಂತದ ಅಸಹಜ ಲೈಂಗಿಕ ಕ್ರಿಯೆ; ವ್ಯಕ್ತಿ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ 20 ವರ್ಷದ ಪುರುಷ ಎಂಡೋಸಲ್ಫಾನ್ ಸಂತ್ರಸ್ತನನ್ನು ಅದೇ ಗ್ರಾಮದ ಬೇರೆ ಸಮುದಾಯದ ವ್ಯಕ್ತಿ ಅಸಹಜ ಲೈಂಗಿಕತೆಗೆ ಒತ್ತಾಯಿಸಿದ ಘಟನೆ ವರದಿಯಾಗಿದೆ.
ಅತ್ಯಾಚಾರ (ಸಂಗ್ರಹ ಚಿತ್ರ)
ಅತ್ಯಾಚಾರ (ಸಂಗ್ರಹ ಚಿತ್ರ)
Updated on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ 20 ವರ್ಷದ ಪುರುಷ ಎಂಡೋಸಲ್ಫಾನ್ ಸಂತ್ರಸ್ತನನ್ನು ಅದೇ ಗ್ರಾಮದ ಬೇರೆ ಸಮುದಾಯದ ವ್ಯಕ್ತಿ ಅಸಹಜ ಲೈಂಗಿಕತೆಗೆ ಒತ್ತಾಯಿಸಿದ ಘಟನೆ ವರದಿಯಾಗಿದೆ.

ಸಂತ್ರಸ್ತೆ ಸಂಜೆ 6 ಗಂಟೆ ವೇಳೆಗೆ ವಾಕಿಂಗ್ ಗೆ ತೆರಳಿದ್ದನು. ವಾಪಸ್ಸಾದಾಗ ವ್ಯಕ್ತಿಯ ಬಟ್ಟೆ ಮಣ್ಣಾಗಿರುವುದನ್ನು ಕಂಡ ತಂದೆ ಈ ಬಗ್ಗೆ ವಿಚಾರಿಸಿದ್ದಾರೆ. ತನಗೆ ಪರಿಚಯವಿರುವ ಮೊಹಮ್ಮದ್ ಹನೀಫ್ ಎಂಬಾತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆತ ಘಟನೆಯನ್ನು ವಿವರಿಸಿದ್ದಾನೆ.

ಮುರ ರೈಲ್ವೆ ಕ್ರಾಸ್ ಬಳಿ ತೆರಳುತ್ತಿದ್ದಾಗ ಮೊಹಮ್ಮದ್ ಹನೀಫ್ ಸಂತ್ರಸ್ತನಿಗೆ ಕಬ್ಬು ಕೊಡಿಸುವುದಾಗಿ ಆಮಿಷವೊಡ್ಡಿದ್ದಾನೆ ಹಾಗೂ ಪೊದೆಗೆ ಕರೆದೊಯ್ದಿದ್ದಾನೆ. ಈ ವೇಳೆ ಲೈಂಗಿಕ ಕ್ರಿಯೆಗೆ ಆತ ನಿರಾಕರಿಸಿದ್ದರಿಂದ ಮೊಹಮ್ಮದ್ ಹನೀಫ್ ಸಂತ್ರಸ್ತ ಯುವಕನಿಗೆ ಥಳಿಸಿ ಒತ್ತಾಯಪೂರ್ವಕವಾಗಿ ಅತ್ಯಾಚಾರವೆಸಗಿದ್ದಾನೆ. ಈ ಘಟನೆಯನ್ನು ಮನೆಯಲ್ಲಿ ತಿಳಿಸಿದರೆ ಹತ್ಯೆ ಮಾಡುವುದಾಗಿಯೂ ಹನೀಫ್ ಬೆದರಿಕೆ ಹಾಕಿದ್ದಾನೆ.

ಹನೀಫ್ ವಿರುದ್ಧ ಪುತ್ತೂರು ಪೊಲೀಸರು ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ, ಶಾಂತಿ ಭಂಗ) ಆರೋಪದಡಿ ಹಾಗೂ ಸೆಕ್ಷನ್ 323 ರ ಪ್ರಕಾರ (ಸ್ವಯಂ ಪ್ರೇರಿತವಾಗಿ ನೋವುಂಟುಮಾಡುವುದು) ಸೆಕ್ಷನ್ 377 ಅಸಹಜ ಅಪರಾಧ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com