ದೇಶದಲ್ಲೇ ಮೊದಲು: ಬೆಂಗಳೂರಿನ ಕೆ.ಎಸ್.ಆರ್ ರೈಲು ನಿಲ್ದಾಣದಲ್ಲಿ ಹೈಟೆಕ್ ಭದ್ರತೆ ಒದಗಿಸುವ ವಿಡಿಯೋ ವಾಲ್

ತಪಾಸಣಾ ಸಿಬ್ಬಂದಿಯ ಕಣ್ತಪ್ಪಿಸಿ ಸ್ಕ್ಯಾನರ್ ಒಳಗಿಂದ ಅಪಾಯಕಾರಿ ಶಸ್ತ್ರಾಸ್ತ್ರ ಹಾದು ನಿಲ್ದಾಣದೊಳಕ್ಕೆ ಪ್ರವೇಶಿಸಿದರೂ ನೂತನ ವಿಡಿಯೊ ವಾಲ್ ತಂತ್ರಜ್ಞಾನದಿಂದ ಅದನ್ನು ಪತ್ತೆಹಚ್ಚಬಹುದಾಗಿದೆ.
ವಿಡಿಯೋ ವಾಲ್
ವಿಡಿಯೋ ವಾಲ್
Updated on

ಬೆಂಗಳೂರು: ಬೆಲ್ಜಿಯಂ ದೇಶದಿಂದ ಆಮದು ಮಾಡಿಕೊಳ್ಳಲಾದ ವಿಡಿಯೋ ವಾಲ್ ಅನ್ನು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದೆ. ರೈಲ್ವೇ ಭದ್ರತಾ ಪಡೆ (ಆರ್ ಪಿ ಎಫ್) ಈ ವಿಡಿಯೊ ವಾಲ್ ಅನ್ನು ತನ್ನ ಸೈಬರ್ ಸೆಲ್ ಕಚೇರಿಯಲ್ಲಿ ಅಳವಡಿಸಿದೆ. ಇದು ದೇಶದಲ್ಲೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿರುವ ರೈಲ್ವೇ ಸೈಬರ್ ಸೆಲ್ ವಿಭಾಗದಲ್ಲಿನ ಗೋಡೆ ಮೇಲೆ 16x10 ಅಡಿಯಷ್ಟು ವಿಸ್ತೀರ್ಣದ ಡಿಜಿಟಲ್ ಪರದೆ ಹಾಕಲಾಗಿದೆ. ಅದರಲ್ಲಿ 16 ವಿಂಡೋಗಳಿವೆ. ಅಂದರೆ 16 ಸ್ಕ್ರೀನ್ ಗಳಲ್ಲಿ ರೈಲ್ವೇ ನಿಲ್ದಾಣಗಳ ಭದ್ರತೆಯನ್ನು ಮಾನಿಟರ್ ಮಾಡಬಹುದಾಗಿದೆ. ಅರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಸಹಾಯದಿಂದ ಇದು ಕಾರ್ಯ ನಿರ್ವಹಿಸುತ್ತದೆ. 

ತಪಾಸಣಾ ಸಿಬ್ಬಂದಿಯ ಕಣ್ತಪ್ಪಿಸಿ ಸ್ಕ್ಯಾನರ್ ಒಳಗಿಂದ ಅಪಾಯಕಾರಿ ಶಸ್ತ್ರಾಸ್ತ್ರ ಹಾದು ನಿಲ್ದಾಣದೊಳಕ್ಕೆ ಪ್ರವೇಶಿಸಿದರೂ ನೂತನ ವಿಡಿಯೊ ವಾಲ್ ತಂತ್ರಜ್ಞಾನದಿಂದ ಅದನ್ನು ಪತ್ತೆಹಚ್ಚಬಹುದಾಗಿದೆ. ಇದುವ ವಿಡಿಯೋ ವಾಲ್ ನ ಹಲವು ಉಪಯೋಗಗಳಲ್ಲಿ ಒಂದು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com