21ನೇ ವಯಸ್ಸಿಗೇ ಪಂಚಾಯಿತಿ ಅಧ್ಯಕ್ಷ ಗಾದಿ: ತಮಿಳುನಾಡು ಯುವತಿಯ 'ಅನು' ಸಾಧನೆ

ಇಡೀ ರಾಜ್ಯದಲ್ಲೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪಂಚಾಯಿತಿ ಅಧ್ಯಕ್ಷೆಯಾದ ಖ್ಯಾತಿ ಕೆ. ಅನು ಅವರ ಪಾಲಾಗಿದೆ. ತಮ್ಮ ಮೇಲೆ ಜನರು ಇರಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ಅನು ಭರವಸೆ ನೀಡಿದ್ದಾರೆ.
ಪಂಚಾಯಿತಿ ಅಧ್ಯಕ್ಷೆ ಕೆ. ಅನು
ಪಂಚಾಯಿತಿ ಅಧ್ಯಕ್ಷೆ ಕೆ. ಅನು

ತೆಂಕಾಶಿ: ತಮಿಳುನಾಡಿನ ಶೆಂಗೊಟ್ಟಾಯ್ ಪ್ರಾಂತ್ಯದ ತೆರ್ಕುಮೆಡು ಪಂಚಾಯಿತಿಯಲ್ಲಿ ಈ ಬಾರಿ ಕೆ. ಅನು ಎಂಬ ಯುವತಿ ಗೆದ್ದಿದ್ದಾಳೆ. ಶೇ 43.84 ಮತಗಳನ್ನು ಅನು ಅವರು ಪಡೆದುಕೊಂಡಿದ್ದಾರೆ. ಅದರಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಆಕೆ ಗೆದ್ದಿರುವ ಮತಗಳಲ್ಲಿ ಏನೂ ವಿಶೇಷವಿಲ್ಲ. ಆದರೆ ವಿಶೇಷವಿರುವುದು ಆಕೆಯ ವಯಸ್ಸಿನಲ್ಲಿ. ಆಕೆಗಿನ್ನೂ 21 ವಯಸ್ಸು. 

ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ಅಚ್ಚರಿಯೇ ಸರಿ. ಇಡೀ ರಾಜ್ಯದಲ್ಲೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪಂಚಾಯಿತಿ ಅಧ್ಯಕ್ಷೆಯಾದ ಖ್ಯಾತಿ ಕೆ. ಅನು ಅವರ ಪಾಲಾಗಿದೆ. 

ಅವರ ತಂದೆ ವಿ.ಕಣ್ಣನ್ ಮೂರು ಅವಧಿಗಳ ಕಾಲ ಅದೇ ಕ್ಷೇತ್ರದಲ್ಲಿ ಪಂಚಾಯಿತಿ ಅಧ್ಯಕ್ಷರಾಗಿದ್ದರು ಎನ್ನುವುದು ಗಮನಾರ್ಹ. ತಂದೆಯ ಕೆಲಸವನ್ನು ನೋಡುತ್ತಲೇ ಬೆಳೆದಿದ್ದರಿಂದ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು ಎಂದು ಅನು ಹೇಳುತ್ತಾರೆ. ಅನು ಇದೇ ವರ್ಷ ಇಂಗ್ಲಿಷ್ ಬ್ಯಾಚೆಲರ್ ಡಿಗ್ರಿಯನ್ನು ಪಡೆದಿದ್ದಾರೆ. 

ತಮ್ಮ ಮೇಲೆ ಜನರು ಇರಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ಅನು ಭರವಸೆ ನೀಡಿದ್ದಾರೆ. ಸ್ತ್ರೀಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ ಕಿನ್ ಒದಗಿಸುವುದು, ಬಸ್ ಸೇವೆ ಒದಗಿಸುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವತ್ತ ಈಗಾಗಲೇ ಕೆಲಸಗಳು ನಡೆದಿರುವುದಾಗಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com