The New Indian Express
ಬೆಂಗಳೂರು: ಆತ ಬೆಳ್ಳಿಯ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದವನು. ಆತನ ತಂದೆ ಆಗರ್ಭ ಶ್ರೀಮಂತ. ಅದಕ್ಕಿಂತ ಹೆಚ್ಚಾಗಿ ವರ್ಣಮಯ ವ್ಯಕ್ತಿತ್ವವನ್ನು ಹೊಂದಿದ್ದಾತ. ಅಂಥವರ ಪುತ್ರನಾಗಿ ಕೇಳಿದ್ದೆಲ್ಲವೂ ಕಾಲ ಬುಡದಲ್ಲಿ ಬೀಳುವ ಸೌಭಾಗ್ಯ. ಯಾರಿಗುಂಟು ಯಾರಿಗಿಲ್ಲ.
ಇದನ್ನೂ ಓದಿ: ಪಾನ್ ಮಸಾಲಾ ಜಾಹೀರಾತಿನಿಂದ ಹಿಂದೆ ಸರಿದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್
ಆತ ಬೇರಾರೂ ಅಲ್ಲ. ದೇಶದ ಶತಕೋಟಿ ಜನರ ಕೆಂಗಣ್ಣಿಗೆ ಗುರಿಯಾಗಿರುವ ಕರ್ನಾಟಕದ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ಮಲ್ಯ. ಸಿದ್ಧಾರ್ಥ್ ಬರೆದಿರುವ ಪುಸ್ತಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
ಇದನ್ನೂ ಓದಿ: 10,000 ಕೋಟಿ ರೂ. ದಾಟಿದ ತಿಂಗಳ ಎಸ್ ಐ ಪಿ ಹೂಡಿಕೆ: ಮ್ಯೂಚುವಲ್ ಫಂಡ್ ಹೂಡಿಕೆಯತ್ತ ನಾಗರಿಕರ ಒಲವು
ಹೊರಜಗತ್ತಿಗೆ ಮಲ್ಯ ಬಗ್ಗೆ ಅವರದ್ದೇ ಆದ ಒಂದು ಇಮೇಜ್ ಇದೆ. ಕಿಂಗ್ ಫಿಷರ್ ಮದ್ಯ, ಏರ್ ಲೈನ್ಸ್ ಕ್ಯಾಲೆಂಡರ್ ಎಲ್ಲದರಿಂದಾಗಿ ಮಲ್ಯ ನೋಡುಗರಲ್ಲಿ ವಿಚಿತ್ರ ಆಸಕ್ತಿಯನ್ನು ಕೆರಳಿಸಿದವರು.
ಇದನ್ನೂ ಓದಿ: ಸಾಲ ವಂಚನೆ ಪ್ರಕರಣ: ಯೆಸ್ ಬ್ಯಾಂಕ್ ಎಂ.ಡಿ, ಸಿ ಇ ಒ ರಾಣಾ ಕಪೂರ್ ವಿರುದ್ಧ ಚಾರ್ಜ್ ಶೀಟ್ ಜಾರಿ
ತಂದೆಯಿಂದಾಗಿ ಮಗ ಸಿದ್ಧಾರ್ಥ್ ಬಗ್ಗೆಯೂ ಅವರಿಗರಿವಿಲ್ಲದಂತೆ ಸಮಾಜದಲ್ಲಿ ಒಂದು ಇಮೇಜ್ ಸೃಷ್ಟಿಯಾಗಿಬಿಟ್ಟಿತ್ತು. ಕಾಣುವುದೆಲ್ಲವೂ ಸತ್ಯವಲ್ಲ ಎನ್ನುವುದು ಮಲ್ಯ ಕುಟುಂಬಕ್ಕೆ ಸರಿಯಾಗಿ ಹೊಂದುವ ಮಾತು. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು ಎನ್ನುವ ಗಾದೆ ಮಲ್ಯ ವಿಷಯದಲ್ಲಿ ನೂರಕ್ಕೆ ನೂರು ಪ್ರತಿಶತ ನಿಜವಾಗುತ್ತದೆ. ಪಾರ್ಟಿ, ಮೋಜು ಮಸ್ತಿಯಿಂದ ಹೆಸರು ಮಾಡಿದ ಮಲ್ಯ ಅವರಿಗೂ ಹಗರಣ ಬೆಳಕಿಗೆ ಬಂದು ಲಂಡನ್ ಗೆ ಹಾರಿಹೋದ ಮಲ್ಯ ಅವರಿಗೂ ಅಜಗಜಾಂತರ.
ಇದನ್ನೂ ಓದಿ: ಏರ್ ಇಂಡಿಯಾ ಖಾಸಗೀಕರಣ: ಹರಾಜಿನಲ್ಲಿ ಟಾಟಾ ಗ್ರೂಪ್ ಪಾಲಾದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ!
ಇವೆಲ್ಲಾ ವಿಚಾರಗಳನ್ನು ಸಿದ್ಧಾರ್ಥ್ ಮಲ್ಯ ತಮ್ಮ If I'm Honest ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಸೆಲಬ್ರಿಟಿಗಳ ಮಕ್ಕಳಿಗೇನೂ ಸಮಸ್ಯೆಗಳಿರುವುದಿಲ್ಲ ಎಂಡು ಹೊರಜಗತ್ತು ತಿಳಿದಿರುತ್ತದೆ. ಆದರೆ ಸೆಲಬ್ರಿಟಿ ಆಗುವುದೆಂದರೆ ಹಲವು ಕಾಂಪ್ರಮೈಸ್ ಗಳನ್ನು ಮಾಡಿಕೊಳ್ಲಬೇಕಾಗುತ್ತದೆ. ಎಲ್ಲರಂತೆಯೇ ಸೆಲಬ್ರಿಟಿಗಳ ಮಕ್ಕಳಿಗೂ ನೂರು ಥರ ಕಷ್ಟ ಕಾರ್ಪಣ್ಯಗಳು ಇರುತ್ತವೆ ಎನ್ನುವುದು ಸಿದ್ಧಾರ್ಥ್ ಮಲ್ಯನುಭವದ ಮಾತು.
ಇದನ್ನೂ ಓದಿ: ಈ ವರ್ಷ ಅದಾನಿ ಆದಾಯ ದಿನವೊಂದಕ್ಕೆ 1,000 ಕೋಟಿ: ಶ್ರೀಮಂತರ ಪಟ್ಟಿ ಹೀಗಿದೆ...
ಸೆಲಬ್ರಿಟಿ ಮಕ್ಕಳಿಗೆ ಮುಖ್ಯವಾಗಿ ಕಾಡುವುದು ಮಾನಸಿಕ ಸಮಸ್ಯೆ. ಸಿದ್ಧಾರ್ಥ್ ಮಲ್ಯ ಕೂಡಾ ಅದಕ್ಕೆ ಹೊರತಾಗಿಲ್ಲ. ಕೆಲ ವರ್ಷಗಳ ಹಿಂದೆ ಅವರು ಖಿನ್ನತೆಯಿಂದ ಬಳಲುತ್ತಿದ್ದರು. ದೀರ್ಘ ಕಾಲ ಅದರ ವಿರುದ್ಧ ಹೋರಾಟ ನಡೆಸಿದ್ದರು. ಇವೆಲ್ಲವನ್ನೂ ಅವರು If I'm Honest ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಇನ್ಫೋಸಿಸ್, ವಿಪ್ರೊ ಸಂಸ್ಥೆಯ ಇಬ್ಬರು ಉದ್ಯೋಗಿಗಳಿಗೆ ಸ್ಟಾಕ್ ಮಾರ್ಕೆಟ್ ನಿರ್ಬಂಧ ಹೇರಿದ ಸೆಬಿ