The New Indian Express
ಉಡುಪಿ: ಆಕ್ವಾಮ್ಯಾನ್ ಎನ್ನುವ ಹಾಲಿವುಡ್ ಸಿನಿಮಾ ಕೆಲ ವರ್ಷಗಳ ಹಿಂದೆ ಬಿಡುಗಡೆ ಕಂಡು ಯಶಸ್ವಿಯಾಗಿತ್ತು. ಸಮುದ್ರಕನ್ಯೆಯ ಮಗನಾಗಿ ಅನೇಕ ಅತಿಮಾನುಷ ಶಕ್ತಿಗಳನ್ನು ಆತ ಹೊಂದಿರುತ್ತಾನೆ.
ಇದನ್ನೂ ಓದಿ: ವಿಮಾನ 2 ಗಂಟೆ ತಡವಾದುದಕ್ಕೆ ಪ್ರಯಾಣಿಕರಿಗೆ ಗಗನಸಖಿಯರ ಪತ್ರ: ಕೋಪ ಶಮನಕ್ಕೆ ವಿನೂತನ ಮಾರ್ಗ
ಅದೇ ರೀತಿ ಮನುಷ್ಯ ಸಹಜ ಸಾಮರ್ಥ್ಯದಿಂದಲೇ ಆಕ್ವಾ ಮ್ಯಾನ್ ಎನ್ನಿಸಿಕೊಂಡವರು ಉಡುಪಿಯ ಮುಳುಗುತಜ್ಞ ಈಶ್ವರ್ ಮಲ್ಪೆ. ಕಡಲ ತೀರದ ನಗರವಾದ ಉಡುಪಿಯಲ್ಲಿ ಇದುವರೆಗೂ 20 ಮಂದಿಯನ್ನು ಸಮುದ್ರದಿಂದ ಮೇಲೆತ್ತಿ ಬದುಕಿಸಿದ್ದಾರೆ. ಅಲ್ಲದೆ 200ಕ್ಕೂ ಹೆಚ್ಚು ಮೃತದೇಹಗಳನ್ನು ಸಮುದ್ರದಿಂದ ಮೇಲೆತ್ತಿದ್ದಾರೆ.
45ರ ಹರೆಯದ ಈಶ್ವರ್ ಮಲ್ಪೆ ಅವರು ಪರಿಶ್ರಮ ಮತ್ತು ಕಠಿಣ ಅಭ್ಯಾಸದಿಂದ ಮುಳುಗುತಜ್ಞರಾದವರು. ದಿನದ ಯಾವುದೇ ಹೊತ್ತಿನಲ್ಲಿಯೂ ಅವರಿಗೆ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿಕೊಂಡವರ ರಕ್ಷಣೆಗೆ ಕರೆ ಬರುತ್ತದೆ. ತಕ್ಷಣವೇ ಅವರು ಹೊರಟು ನಿಲ್ಲುತ್ತಾರೆ.
ಇದನ್ನೂ ಓದಿ: ಪ್ರೀತಿಯ 'ಗೂಡು': ವಿಶಿಷ್ಠ ಸೇವೆ ಮೂಲಕ ಪಕ್ಷಿಗಳ ಕುರಿತು ಜಾಗೃತಿ ಮೂಡಿಸುತ್ತಿರುವ ಕರ್ನಾಟಕದ ದಂಪತಿ
ಇಷ್ಟುದಿನ ಆಕ್ಸಿಜನ್ ಸಿಲಿಂಡರ್ ಸಹಾಯವಿಲ್ಲದೆ ಅವರು ಮುಳುಗು ಹಾಕುತ್ತಿದ್ದರು. ಆದರೆ ಕೆಲಸಮಯದಿಂದ ಆಕ್ಸಿಜನ್ ಸಿಲಿಂಡರ್ ಸೂಟ್ ಧರಿಸುತ್ತಿದ್ದಾರೆ. ಜೀವರಕ್ಷಕ ದಳ, ಪೊಲೀಸರು ಕೂಡಾ ಇವರ ಸಹಾಯ ಕೋರಿ ಕರೆ ಮಾಡುತ್ತಾರೆ.
ಯಥೇಚ್ಛ ಮಳೆ ಬೀಳುವ ಪ್ರದೇಶವಾಗಿರುವುದರಿಂದ ಎಷ್ಟೊಂದು ವೇಳೆ ನದಿ, ತೊರೆಗಳು ಮೈದಂಬಿ ಹರಿಯುತ್ತಿರುವ ಸಮಯದಲ್ಲಿ ರಕ್ಷಣಾ ಕಾರ್ಯ ತುಂಬಾ ಸವಾಲಾಗಿ ಪರಿಣಮಿಸುತ್ತದೆ ಎಂದು ಈಶ್ವರ್ ಹೇಳುತ್ತಾರೆ. ಅಂಥಾ ಸಮಯದಲ್ಲಿ ಅಪಾಯಕ್ಕೆ ಸಿಲುಕಿಕೊಂಡವರ ರಕ್ಷಣೆಯ ಜೊತೆಗೆ ತಮ್ಮ ರಕ್ಷಣೆಯ ಸವಾಲು ಕೂಡಾ ಇರುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕೃಷ್ಣನಿಗೆ ಪೇಂಟಿಂಗ್ ಅರ್ಪಿಸಿದ ಕೇರಳದ ಮುಸ್ಲಿಂ ಯುವತಿ: 6 ವರ್ಷಗಳಲ್ಲಿ 500 ಕೃಷ್ಣನ ಚಿತ್ರಗಳು
ಕಳೆದ 20 ವರ್ಷಗಳಿಂದ ಹಲವು ಅಪಾಯಕಾರಿ ಸನ್ನಿವೇಶಗಳಲ್ಲಿಯೂ ಆವರು ತಮ್ಮ ಪ್ರಾಣ ಲೆಕ್ಕಿಸದೆ ಹಲವರ ಜೀವ ಉಳಿಸಿದ್ದಾರೆ. ಇಂದು ಸಮುದ್ರ ಹಾಗೂ ನದಿಯಲ್ಲಿ ಶವ ಪತ್ತೆಗಾಗಿ ಬಹಳ ದೂರದ ಸ್ಥಳಗಳಿಂದಲೂ ಬುಲಾವ್ ಬರುತ್ತಿದೆ.
ಅವರ ಬಳಿ 2 ಆಕ್ಸಿಜನ್ ಸಿಲಿಂಡರ್ ಇದೆ. ನೀರಿಗೆ ಇಳಿಯುವುದಕ್ಕೆ ಅವರಿಗೆ ಮುಖ್ಯವಾಗಿ ಬೇಕಾದ ಸಲಕರಣೆ ಎಂದರೆ ಅದುವೇ. ಅವನ್ನು ಮಲ್ಪೆ ಯಾಂತ್ರಿಕ ಸೊಸೈಟಿ ಅವರು ದೇಣಿಗೆಯಾಗಿ ನೀಡಿದ್ದಾರೆ ಎಂದು ಈಶ್ವರ್ ಸ್ಮರಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ಬದುಕು ಕಟ್ಟಿಕೊಳ್ಳುವ ಮಹಿಳೆಯರಿಗೆ ಸ್ಫೂರ್ತಿ: ಶೂನ್ಯದಿಂದ ಸ್ವಾವಲಂಬನೆಯ ಕಡೆ ಸಾಗಿದ ಕೊಡಗು ಮಹಿಳೆಯರ ಯಶೋಗಾಥೆ!
ಈಶ್ವರ್ ಆಕ್ಸಿಜನ್ ರೀಫಿಲ್ಲಿಂಗ್ ಕಿಟ್ ಗಾಗಿ ಎದುರು ನೋಡುತ್ತಿದ್ದಾರೆ. ಅದೊಂದು ಇದ್ದುಬಿಟ್ತರೆ ಯಾವುದೇ ತೊಡಕಿಲ್ಲದೆ ಈಶ್ವರ್ ತಮ್ಮ ಸಮಾಜ ಸೇವೆ ಮುಂದುವರಿಸಬಹುದು. ಯಾರಾದರೂ ಸಹೃದಯರು ದೇಣಿಗೆ ನೀಡುವರೇ ಎಂದು ಅವರು ಕಾದಿದ್ದಾರೆ.
ಈಶ್ವರ್ ಅವರು ಮಲ್ಪೆ ಬೀಚಿನಲ್ಲಿ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳೊಡನೆ ವಾಸವಿದ್ದಾರೆ. ಮನೆಯಲ್ಲಿ ಅರ್ಥಿಕ ತೊಂದರೆ ಇದ್ದರೂ ತಾವು ಯಾವತ್ತೂ ಹಣಕ್ಕಾಗಿ ರಕ್ಷಣೆ ಮಾಡಿದ್ದಿಲ್ಲ ಎಂಬ ಆತ್ಮವಿಶ್ವಾಸದ ನುಡಿಗಳನ್ನಾಡುತ್ತಾರೆ ಈಶ್ವರ್ ಮಲ್ಪೆ.
ಇದನ್ನೂ ಓದಿ: 12 ಕೋಟಿ ರೂ. ಓಣಂ ಬಂಪರ್ ಲಾಟರಿ ಗೆದ್ದ ಕೇರಳ ರಿಕ್ಷಾ ಡ್ರೈವರ್