60 ಸೆಕೆಂಡುಗಳಲ್ಲಿ 426 ಪಂಚು ಕೊಟ್ಟು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಭಾರತದ ಪಂಚ್ ವೀರ

ರಫಾನ್ ಗೆ ತಾನು ಈ ಪರಿಯಾಗಿ ಪಂಚ್ ನೀಡುವುದಾಗಿ ಗೊತ್ತಿರಲಿಲ್ಲವಂತೆ. ಅವರ ಈ ಕೌಶಲವನ್ನು ಮೊದಲು ಗುರುತಿಸಿದ್ದು ಅವರ ಸ್ನೇಹಿತರು.
ರಫಾನ್ ಉಮ್ಮರ್
ರಫಾನ್ ಉಮ್ಮರ್
Updated on

ಕೊಚ್ಚಿ: ಬಾಕ್ಸಿಂಗ್ ಕ್ರೀಡೆಯಲ್ಲಿ ಪಂಚ್ ಕೊಡುವುದನ್ನು ನೀವು ನೋಡಿರಬಹುದು. ಇನ್ನು ಕೆಲ ಸನ್ನಿವೇಶಗಳಲ್ಲಿ ಹಾದಿ ಬೀದಿಗಳಲ್ಲಿ ಗುದ್ದಾಡಿಕೊಳ್ಳುವುದನ್ನೂ ನೋಡಿರಬಹುದು. ಅವರು ಯಾರೂ ಕೇರಳದ ಕೋಝಿಕ್ಕೋಡ್ ನಗರದ ರಫಾನ್ ಉಮ್ಮರ್ ಗೆ ಸರಿಸಮಾನರಾಗರು. 

26ರ ಹರೆಯದ ರಫಾನ್ 60 ಸೆಕೆಂಡುಗಳಲ್ಲಿ 426 ಪಂಚುಗಳನ್ನು ನೀಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಈ ದಾಖಲೆ ಈ ಹಿಂದೆ ಸ್ಲೊವಾಕಿಯಾ ದೇಶದ ಕಿಕ್ ಬಾಕ್ಸರ್ ಮತ್ತು ಕರಾಟೆ ಪಟು ಪಾವೆಲ್ ಎನ್ನುವವರ ಹೆಸರಲ್ಲಿತ್ತು. ಇದೀಗ ಆ ದಾಖಲೆಯನ್ನು ಭಾರತದ ರಫಾನ್ ಮುರಿದಿದ್ದಾರೆ.

ರಫಾನ್ ಗೆ ತಾನು ಈ ಪರಿಯಾಗಿ ಪಂಚ್ ನೀಡುವುದಾಗಿ ಗೊತ್ತಿರಲಿಲ್ಲವಂತೆ. ಅವರ ಈ ಕೌಶಲವನ್ನು ಮೊದಲು ಗುರುತಿಸಿದ್ದು ಅವರ ಸ್ನೇಹಿತರು. ನಂತರ ಪರೀಕ್ಷೆ ಮಾಡುವ ಸಲುವಾಗಿ 15 ಸೆಕೆಂಡುಗಳ ವಿಡಿಯೋವನ್ನು ಸ್ನೇಹಿತರು ಮಾಡಿದ್ದರು. ಅದರಲ್ಲಿ 15 ಸೆಕೆಂಡುಗಳಲ್ಲಿ 100 ಪಂಚುಗಳನ್ನು ರಫಾನ್ ನೀಡಿದ್ದರು. ಈ ಸಾಧನೆಗಾಗಿ ಯಾವುದೇ ವಿಶೇಷ ತರಬೇತಿಯನ್ನು ರಫಾನ್ ಪಡೆದಿಲ್ಲ ಎನ್ನುವುದು ವಿಶೇಷ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com