12 ಕೋಟಿ ರೂ. ಓಣಂ ಬಂಪರ್ ಲಾಟರಿ ಗೆದ್ದ ಕೇರಳ ರಿಕ್ಷಾ ಡ್ರೈವರ್

12 ಕೋಟಿ ರೂ. ಬಹುಮಾನ ಬಂದಿದ್ದರೂ ತಮ್ಮ ಬದುಕು ಎಂದಿನಂತೆಯೇ ನಡೆಯಲಿದೆ ಎಂದು ಜಯಪಾಲನ್ ಹೇಳಿದ್ದಾರೆ. ಬಹುಮಾನ ಬಂದ ಹಣದಲ್ಲಿ ಮೊದಲು ಸಾಲಗಳನ್ನು ತೀರಿಸುವ ಯೋಚನೆ ಜಯಪಾಲನ್ ಅವರದು.
ಜಯಪಾಲನ್ ಗೆ ಮುತ್ತಿಡುತ್ತಿರುವ ತಾಯಿ
ಜಯಪಾಲನ್ ಗೆ ಮುತ್ತಿಡುತ್ತಿರುವ ತಾಯಿ

ಕೊಚ್ಚಿ: ಎರ್ನಾಕುಲಂನ ಮರಡು ಎಂಬಲ್ಲಿನ ನಿವಾಸಿ ಜಯಪಾಲನ್ ಗೆ 12 ಕೋಟಿ ರೂ. ಮೌಲ್ಯದ ಕೇರಳ ಬಂಪರ್ ಲಾಟರಿ ಹೊಡೆದಿದೆ. ಜಯಪಾಲನ್ ಅವರು ವೃತ್ತಿಯಲ್ಲಿ ರಿಕ್ಷಾಚಾಲಕರಾಗಿದ್ದಾರೆ. ಕಳೆದ ಭಾನುವಾರ ಲಾತರಿ ಫಲಿತಾಂಶ ಘೋಷಣೆಯಾಗಿತ್ತು.

ಲಾಟರಿ ಫಲಿತಾಂಶ ಘೋಷಣೆಯಾದ ಬಳಿಕ ವಿಜೇತರು ಯಾರೂ ತಕ್ಷಣವೇ ಮುಂದೆ ಬಂದಿರಲಿಲ್ಲ. ಹೀಗಾಗಿ ಬಹುಮಾನ ವಿಜೇತ ಲಾಟರಿ ಹೊಡೆದವನಿಗಾಗಿ ಇಡೀ ಕೇರಳ ರಾಜ್ಯ ಎದುರು ನೋಡುತ್ತಿತ್ತು. ನಂತರ ಸುದ್ದಿ ಮಾಧ್ಯಮಗಳಿಂದ ವಿಜೇತ ಲಾತರಿಯ ನಂಬರ್ ಜಯಪಾಲನ್ ಕಣ್ಣಿಗೆ ಬಿದ್ದಿತ್ತು. 

ರಾತ್ರಿ ನೈಟ್ ಶಿಫ್ಟ್ ಕೆಲಸ ಮಾಡುತ್ತಿದ್ದುದರಿಂದ ಅವರಿಗೆ ಲಾಟರಿ ಫಲಿತಾಂಶ ನೋಡಲು ಆಗಿರಲಿಲ್ಲ. ನಂತರ ಬೆಳಿಗ್ಗೆ ಈ ಬಗ್ಗೆ ಪರಿಶೀಲನೆ ನಡೆಸಿದಾಗ ತಮ್ಮ ನಂಬರ್ ಗೆ ಬಹುಮಾನ ಬಂದಿರುವುದು ಜಯಪಾಲನ್ ಗೆ ಗೊತ್ತಾಗಿತ್ತು. ಅವರು ಪ್ರತಿವರ್ಷ ಕೇರಳ ಲಾಟರಿ ಖರೀದಿಸುತ್ತಿದ್ದರು.

12 ಕೋಟಿ ರೂ. ಬಹುಮಾನ ಬಂದಿದ್ದರೂ ತಮ್ಮ ಬದುಕು ಎಂದಿನಂತೆಯೇ ನಡೆಯಲಿದೆ ಎಂದು ಜಯಪಾಲನ್ ಹೇಳಿದ್ದಾರೆ. ಬಹುಮಾನ ಬಂದ ಹಣದಲ್ಲಿ ಮೊದಲು ಸಾಲಗಳನ್ನು ತೀರಿಸುವ ಯೋಚನೆ ಜಯಪಾಲನ್ ಅವರದು. ಬಹುಮಾನದ ಮೊತ್ತದಲ್ಲಿ ಶೇ.10 ಪ್ರತಿಶತ ಲಾಟರಿ ಟಿಕೆಟ್ ಮಾರಿದ ಏಜೆನ್ಸಿಗೆ ಹೋಗುತ್ತದೆ.ನಂತರ ತೆರಿಗೆ ಎಲ್ಲಾ ಕಟ್ ಆಗಿ ಜಯಪಾಲನ್ ಕೈಗೆ 7.39 ಕೋಟಿ ರೂ. ಸಿಗಲಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com