ವಿಶ್ವ ಸರ್ವಧರ್ಮ ಸಂಸತ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಬೆಂಗಳೂರಿನ ಗಾಯಕಿ ದೀಪ್ತಿ ನವರತ್ನ

ಸಂಗೀತ ದೇಶ ಭಾಷೆ ಗಡಿಯನ್ನು ಮೀರಿದ್ದು. ಗಡಿಯಾಚೆಗಿನ ಧಾರ್ಮಿಕ ಸಂಗೀತಗಳ ಅಂಶಗಳನ್ನು ಗುರುತಿಸುವುದರಿಂದ ಅವುಗಳ ಮಿಳಿತಗೊಳಿಸುವುದರಿಂದ ಶ್ರೋತೃಗಳಿಗೆ ಅದ್ಭುತ ರಸಾನುಭವ ಸೃಷ್ಟಿಸಬಹುದು.
ಡಾ. ದೀಪ್ತಿ ನವರತ್ನ
ಡಾ. ದೀಪ್ತಿ ನವರತ್ನ

ಬೆಂಗಳೂರು: ಸಿಖ್ಖರ ಗುರುಗ್ರಂಥ ಸಾಹೇಬ್ ಮತ್ತು ದಾಸರ ಪದಗಳಿಗೂ ಏನು ಸಂಬಂಧ? ಹಿಂದೂಯಿಸಂ- ಜುಡಾಯಿಸಂ, ಸಿಖ್- ಹಿಂದೂಯಿಸಂ ಸಂಗೀತಕ್ಕೂ ಏನು ಸಾಮ್ಯತೆ ಇದೆ? ಕ್ರೈಸ್ತರ ಸಂಗೀತಕ್ಕೂ ಬೌದ್ಧರ ಸಂಗೀತಕ್ಕೂ ಏನು ಸಾಮ್ಯತೆ? ಇವೆಲ್ಲಾ ಪ್ರಶ್ನೆಗಳಿಗೆ ಸಂಗೀತದ ಮೂಲಕವೇ ಉತ್ತರಿಸುವವರು ಸಂಗೀತಗಾರ್ತಿ ಬೆಂಗಳೂರಿನ ಡಾ. ದೀಪ್ತಿ ನವರತ್ನ. 

ಬೆಂಗಳೂರು ನಿವಾಸಿಯಾಗಿರುವ ಶಾಸ್ತ್ರೀಯ ಗಾಯಕಿ ದೀಪ್ತಿ ವಿಶ್ವ ಸರ್ವ ಧರ್ಮ ಸಂಸತ್ (ಪಾರ್ಲಿಮೆಂಟ್ ಆಫ್ ವರ್ಲ್ಡ್ ರಿಲಿಜನ್ಸ್)ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲಿ ಅವರು ಗಾಯನ ಪ್ರದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಭಾರತೀಯ ಮಹಿಳೆ ಅವರು ಎನ್ನುವುದು ಕರ್ನಾಟಕ ರಾಜ್ಯದವರಿಗೆ ಸಂದ ಗೌರವ.

ದೀಪ್ತಿ ನವರತ್ನ ಅವರು ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

2016ರಲ್ಲಿ ದೀಪ್ತಿ ಅವರು 'ಡಯಲಾಗ್ ವಿಥ್ ಡಿವೈನ್' (ದೈವಿಕತೆಯೊಂದಿಗೆ ಸಂವಾದ) ಎನ್ನುವ 
ಸಂಗೀತ ಪ್ರಾಜೆಕ್ಟ್ ಭಾಗವಾಗಿದ್ದರು. ವಿಶ್ವದ ಹಲವು ಧರ್ಮಗಳ ಸಂಗೀತವನ್ನು ಅಭ್ಯಸಿಸಿ ಭಾರತದ ಸಂಗೀತಕ್ಕೂ ಅವುಗಳಿಗೂ ನಡುವಿನ ವ್ಯತ್ಯಾಸ ಸಾಮ್ಯತೆಯನ್ನು ಕಂಡುಕೊಂಡಿದ್ದಾರೆ.

ಪ್ರಸ್ತುತ ಕಾಲಘಟ್ಟದಲ್ಲಿ ಧಾರ್ಮಿಕ ಸಂಗೀತದ ಪ್ರಸ್ತುತತೆ ಕುರಿತಾಗಿ ಅನ್ವೇಷಣೆ ನಡೆಸುತ್ತಿರುವುದಾಗಿ ದೀಪ್ತಿ ಅವರು ಹೇಳುತ್ತಾರೆ. ಸಂಗೀತ ದೇಶ ಭಾಷೆ ಗಡಿಯನ್ನು ಮೀರಿದ್ದು. ಗಡಿಯಾಚೆಗಿನ ಧಾರ್ಮಿಕ ಸಂಗೀತಗಳ ಅಂಶಗಳನ್ನು ಗುರುತಿಸುವುದರಿಂದ ಅವುಗಳ ಮಿಳಿತಗೊಳಿಸುವುದರಿಂದ ಶ್ರೋತೃಗಳಿಗೆ ಅದ್ಭುತ ರಸಾನುಭ ಸೃಷ್ಟಿಸಬಹುದು ಎನ್ನುವುದು ಅವರ ಅನುಭವದ ಮಾತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com