ಬೆಂಗಳೂರು: ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸುವ ಸಿಟಿ ಪ್ರಾಜೆಕ್ಟ್ ಅನ್ನು ಹನಿವೆಲ್ ಅಟೋಮೇಷನ್ ಇಂಡಿಯಾ ಸಂಸ್ಥೆ ತನ್ನದಾಗಿಸಿಕೊಂಡಿದೆ. ನಿರ್ಭಯಾ ನಿಧಿಯಡಿ ಈ ಪ್ರಾಜೆಕ್ಟ್ ರೂಪಿಸಲಾಗಿದ್ದು, ಪ್ರಾಜೆಕ್ಟ್ ಮೊತ್ತ 496.57 ಕೋಟಿ ರೂ. ಆಗಿದೆ.
ನಿರ್ಭಯಾ ನಿಧಿ ಕೇಂದ್ರ ಸರ್ಕಾರ ಪ್ರಾಯೋಜಿತ ನಿಧಿಯಾಗಿದೆ.ಮಹಿಳೆಯರ ಸಬಲೀಕರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸುವ ಕಾರ್ಯಕ್ರಮ ರೂಪಿಸುವಲ್ಲಿ ಈ ನಿಧಿ ಪ್ರಧಾನ ಪಾತ್ರ ವಹಿಸಿದೆ.
ಈ ಪ್ರಾಜೆಕ್ಟ್ ಅಡಿ ಹನಿವೆಲ್ ಸಂಸ್ಥೆ ನಗರದ 3,000ಕ್ಕೂ ಹೆಚ್ಚು ಸ್ಥಳಗಳಲ್ಲಿ 7,000 ವಿಡಿಯೊ ಕ್ಯಾಮೆರಾಗಳ ಅಳವಡಿಕೆ ಮತ್ತು ಕೇಂದ್ರ ನಿಯಂತ್ರಣ ಕೊಠಡಿ ನಿರ್ಮಾಣ ಜವಾಬ್ದಾರಿ ಹೊಣೆ ಹೊತ್ತುಕೊಳ್ಳಲಿದೆ.
ಈ ವಿಡಿಯೊ ಕ್ಯಾಮೆರಾಗಳು ಸುಧಾರಿತ ತಂತ್ರಜ್ಞಾನವನ್ನು ಹೊಂದಿದ್ದು, ಫೇಸ್ ರೆಕಾಗ್ನಿಷನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಹೊರತಾಗಿ ಸದ್ಯ ಬಲಕೆಯಲ್ಲಿರುವ ಸುರಕ್ಷಾ ಆಪ್ ಅನ್ನು ಮೇಲ್ದರ್ಜೆಗೆ ಏರಿಸಲಿದೆ.
ಬೆಂಗಳೂರು: 'ರಸ್ತೆ ಗುಂಡಿಗಳ ಹಬ್ಬ'ದೊಂದಿಗೆ ಆಮ್ ಆದ್ಮಿ ಪಕ್ಷದಿಂದ ವಿನೂತನ ಪ್ರತಿಭಟನೆ
ಬೆಂಗಳೂರು: ರೈಲ್ವೇ ಹಳಿ ಮೇಲೆ ಮಲಗಿ ಆತ್ಯಹತ್ಯೆಗೆ ಯತ್ನಿಸಿದರೂ ಬದುಕುಳಿದ ಬಿಎಂಟಿಸಿ ಮಹಿಳಾ ನೌಕರೆ!
ಬೆಂಗಳೂರು ಮೇರಿ ಜಾನ್ ಎಂದ 'ರತ್ನನ್ ಸುಂದರಿ' ರೆಬಾ ಮೋನಿಕಾ ಜಾನ್ ಗೆ 11 ಪ್ರಶ್ನೆಗಳು
ಬೆಂಗಳೂರು ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಮಾಸ್ಟರ್ ಪ್ಲಾನ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸೋದಾಗಿ ವಂಚನೆ, ಅಧ್ಯಾಪಕನ ಬಂಧನ
ಬೆಂಗಳೂರು: ನಗರಕ್ಕೆ ಕಾಲಿಡದಂತೆ ಶಿವಾಜಿ ನಗರ ಕುಖ್ಯಾತ ರೌಡಿಶೀಟರ್ಗೆ ಒಂದು ವರ್ಷ ಗಡಿಪಾರು
ಬೆಂಗಳೂರು ರೈಲ್ವೆ ವಿಭಾಗ ಮತ್ತೊಂದು ಪರಿಸರ ಸ್ನೇಹಿ ಕ್ರಮದ ಮೂಲಕ 1 ಕೋಟಿ ರೂಪಾಯಿ ಉಳಿತಾಯ!
Advertisement