ಸಂದರ್ಶನ: ಹರ್ಷವರ್ಧನ್ ಸುಳ್ಯ
ನಾನು ಮಯೂರಿ ಹೆಸರಿನ ಪತ್ರಕರ್ತೆಯ ಪಾತ್ರ ನಿರ್ವಹಿಸಿದ್ದೀನಿ. ಮಯೂರಿಗೆ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವ ತುಡಿತ. ಒಳ್ಳೊಳ್ಳೆ ಕಥೆಗಳನ್ನು ಶೋಧಿಸಿ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕು ಎನ್ನುವ ಮನಸ್ಥಿತಿ ಅವಳದು.
ಇದೆ. ಮಯೂರಿ ಥರಾನೆ ನನಗೂ ಸಿನಿಮಾರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ತುಡಿತವಿದೆ. ಮಯೂರಿ ಕಥಾ ಶೋಧನೆಗೆ ಹೊರಡುವಂತೆ ನನಗೂ ಈ ಕ್ಷೇತ್ರದಲ್ಲಿ ನನ್ನದೇ ಛಾಪು ಮೂಡಿಸಬೇಕು ಅನ್ನೋ ಹಂಬಲವಿದೆ.
ಮಯೂರಿ ಕಥೆಯನ್ನು ಶೋಧಿಸುತ್ತಿರುತ್ತಾಳೆ. ಅದೇ ಸಮಯಕ್ಕೆ ಕಾಮನ್ ಮ್ಯಾನ್ ರತ್ನಾಕರ ತನ್ನ ಜೀವನದ ಮಹತ್ತರ ಅನ್ವೇಷಣೆಗಾಗಿ ಪಯಣ ಹೊರಡುತ್ತಾನೆ. ಈ ಪ್ರಯಾಣದಲ್ಲಿ ಅವನಿಗೆ ಮಯೂರಿಯೂ ಸಾಥ್ ನೀಡುತ್ತಾಳೆ. ರತ್ನಾಕರನ ಹುಡುಕಾಟವೂ, ಮಯೂರಿಯ ಕಥಾ ಶೋಧನೆಯೂ ಜೊತೆ ಜೊತೆಯಾಗಿಯೇ ತೆರೆದುಕೊಳ್ಳುತ್ತಾ ಹೋಗುತ್ತದೆ.
ಹೌದು ಜೀವನದ ಹುಡುಕಾಟದ ಪಯಣ ಅಂತ ಹೇಳಬಹುದು. ಅಲ್ಲದೆ ಚಿತ್ರದ ಕಥೆ ಪ್ರೇಕ್ಷಕರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ಯುತ್ತದೆ. ಅವು ಕಥೆಗೆ ವಿಭಿನ್ನ ಆಯಾಮ ಒದಗಿಸುತ್ತದೆ. ಯಾವ ಸ್ಥಳಗಳನ್ನು ತೋರಿಸಲಾಗಿದೆ ಎಂಬುದನ್ನು ಸಿನಿಮಾದಲ್ಲೇ ನೋಡಿದರೆ ಇನ್ನೂ ಮಜಾ.
ಹೌದು. ಚಿತ್ರದ ಕಥೆಯಂತೆ ಭಾರತದ ವಿವಿಧ ನಗರಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ರತ್ನಾಕರನ ಪಯಣ ಬೆಂಗಳೂರಿನಿಂದ ಶುರುವಾಗುತ್ತದೆ. ಎಲ್ಲಿ ಕೊನೆಗೊಳ್ಳುತ್ತದೆ ಅನ್ನೋದು ಮಾತ್ರ ಸಸ್ಪೆನ್ಸ್!
ಥ್ಯಾಂಕ್ ಯೂ. ಬೆಂಗಳೂರಿನಲ್ಲಿ ಬೆಳೆದಿದ್ದರೂ ಮಲಯಾಳಿ ಆಗಿರುವುದರಿಂದ ಹಾಗನ್ನಿಸುತ್ತಿರಬಹುದು. ಆದರೆ ಒಂದಂತೂ ನಿಜ. ಮಲಯಾಳಿ ಸಿನಿಮಾಗಳಲ್ಲಿ ನೈಜತೆ ಇರುತ್ತದೆ. ಅದರ ಪ್ರಭಾವವೂ ನನ್ನ ಮೇಲೆ ಬೀರಿರಬಹುದು.
ಭಾಷೆಯದ್ದು. ಕರುನಾಡಲ್ಲೇ ಬೆಳೆದಿದ್ದರಿಂದ ಕನ್ನಡ ಓದೋಕೆ ಬರೆಯೋಕೆ ನನಗೆ ಬರುತ್ತದೆ. ಅದರೆ ಇಲ್ಲಿನವರಷ್ಟು ಪಕ್ವತೆಯಿಂದ ಸಹಜವಾಗಿ ಕನ್ನಡ ಮಾತನಾಡುವುದಿಲ್ಲ ಎನ್ನುವ ಅಂಜಿಕೆ ಮುಂಚಿನಿಂದಲೂ ಇದೆ.
ನನಗಿಷ್ಟವಾಗಿದ್ದು ಕಾಶ್ಮೀರ. ನಾವು ಹೋಗಿದ್ದು ಕೂಡಾ ಚಳಿಗಾಲದಲ್ಲಿ. ಮರಗಟ್ಟುವ ಚಳಿಯ ನಡುವೆ ಶೂಟಿಂಗ್ ಮಾಡಿದ್ದು ಆದ್ಭುತ ಅನುಭವ. ಅಲ್ಲದೆ ಅಲ್ಲಿನ ಸ್ಥಳೀಯರ ಜೊತೆ ಬೆರೆತು ಅವರ ಜೀವನ ಕುರಿತು ತಿಳಿದುಕೊಂಡಿದ್ದು ಕಾಶ್ಮೀರದ ಅನುಭವವನ್ನು ಇನ್ನಷ್ಟು ಶ್ರೀಮಂತವಾಗಿಸಿತು.
ವಂಡರ್ ಫುಲ್. ರತ್ನನ್ ಪ್ರಪಂಚದ ನಿರ್ದೇಶಕ ರೋಹಿತ್ ಪದಕಿ ಅವರ ತಂಡ ಬೆಸ್ಟ್ ತಂಡ. ಹೊಸಬರೊಂದಿಗೆ ಕೆಲಸ ಮಾಡುವ ಅನುಭವ ಯಾವತ್ತಿಗೂ ಅನನ್ಯವಾದುದು. ಅದಕ್ಕೆ ನನ್ನ ಬದುಕಿನಲ್ಲಿ ಸ್ಪೆಷಲ್ ಸ್ಥಾನ ಇರುತ್ತದೆ.
ಸುದೀಪ್, ರಕ್ಷಿತ್ ಶೆಟ್ಟಿ ಮತ್ತು ಅಫ್ ಕೋರ್ಸ್ ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಲು ಇಷ್ಟ.ಅದರಲ್ಲೂ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕರೆ ನಾನು ಲಕ್ಕಿ.
ಯಾರಿಗೇ ಆದರೂ ಜಗತ್ತೆಲ್ಲಾ ಸುತ್ತಿ ಬಂದರೂ ಕಡೆಗೆ ನೆಮ್ಮದಿ ಸಿಗೋದು ಮನೆಯಲ್ಲಿ. ಹೀಗಾಗಿ ನನ್ನ ಮನೆಯಾದ ಬೆಂಗಳೂರು ನನಗಿಷ್ಟದ ಸ್ಥಳ.
ಹಿರಿಯ ನಟರ ದಂಡೇ ಮೇಳೈಸಿರುವ ರತ್ನನ್ ಪ್ರಪಂಚ: ಅಮೆಜಾನ್ ಪ್ರೈಮ್ ನಲ್ಲಿ ಅಕ್ಟೋಬರ್ 22ರಂದು ತೆರೆಗೆ
ಅಮೆಜಾನ್ ಪ್ರೈಮ್ ನಲ್ಲಿ ಡಾಲಿ ಧನಂಜಯ್ ರತ್ನನ್ ಪ್ರಪಂಚ ಸಿನಿಮಾ ಟ್ರೇಲರ್ ಬಿಡುಗಡೆ
ಡಾಲಿ ಧನಂಜಯ ರತ್ನನ್ ಪ್ರಪಂಚ ಸಿನಿಮಾಗೆ ಪವರ್ ಪುನೀತ್ ರಾಜಕುಮಾರ್ 'ಗಿಚ್ಚಿ ಗಿಲಿಗಿಲಿ'!
ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ, ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ
Advertisement