ಬಿಬಿಎಂಪಿಯ ಬಸ್ ಶಾಲೆ 'ಸ್ಕೂಲ್ ಆನ್ ವೀಲ್ಸ್' ಯೋಜನೆ ಇಂದಿನಿಂದ ಆರಂಭ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಕೂಲ್ ಆನ್ ವೀಲ್ಸ್ ಯೋಜನೆ ಬುಧವಾರದಿಂದ ಆರಂಭವಾಗಿದೆ. ಯೋಜನೆ ಅಡಿಯಲ್ಲಿ ನಗರದ ಎಂಟು ಬಿಬಿಎಂಪಿ ವಲಯಗಳಿಗೆ ತಲಾ 10 ಬಸ್‌ಗಳು ಭೇಟಿ ನೀಡಲಿವೆ ಎಂದು ತಿಳಿದುಬಂದಿದೆ.
ಕಲಬುರಗಿ ಶಾಲೆಯಲ್ಲಿ ಬಿಸಿಯೂಟ ಸವಿಯುತ್ತಿರುವ ಸಚಿವ ಬಿ.ಸಿ.ನಾಗೇಶ್
ಕಲಬುರಗಿ ಶಾಲೆಯಲ್ಲಿ ಬಿಸಿಯೂಟ ಸವಿಯುತ್ತಿರುವ ಸಚಿವ ಬಿ.ಸಿ.ನಾಗೇಶ್
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಕೂಲ್ ಆನ್ ವೀಲ್ಸ್ ಯೋಜನೆ ಬುಧವಾರದಿಂದ ಆರಂಭವಾಗಿದೆ. ಯೋಜನೆ ಅಡಿಯಲ್ಲಿ ನಗರದ ಎಂಟು ಬಿಬಿಎಂಪಿ ವಲಯಗಳಿಗೆ ತಲಾ 10 ಬಸ್‌ಗಳು ಭೇಟಿ ನೀಡಲಿವೆ ಎಂದು ತಿಳಿದುಬಂದಿದೆ.

1 ರಿಂದ 5 ನೇ ತರಗತಿಗಳು ತೆರೆದ ನಂತರ ಯೋಜನೆಯನ್ನು ಆರಂಭಿಸಲಾಗಿದೆ. ಭಿಕ್ಷಾಟನೆ ಹಾಗೂ ಶಾಲೆಗಳ ಬಿಡ್ಡು ಕಟ್ಟಡ ನಿರ್ಮಾಣ ಕಾರ್ಯದ ವೇಳೆ ಸ್ಥಳಗಳಲ್ಲಿ ಓಡಾಡಿಕೊಂಡಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿದೆ. ಶಿಕ್ಷಣ ಸಹಾಯಕ ಆಯುಕ್ತ ಉಮೇಶ ಅವರು ತಿಳಿಸಿದ್ದಾರೆ.

ಬಿಎಂಟಿಸಿಯ ಹಳೆಯ ಬಸ್ ಗಳನ್ನು ರೂ.4 ಲಕ್ಷಕ್ಕೆ ಖರೀದಿ ಮಾಡಲಾಗಿತ್ತು. ಇದೀಗ ಈ ಬಸ್'ಗಳಿಗೆ ಒಳಾಂಗಣದಲ್ಲಿ ಅಂಗನವಾಡಿ ಲುಕ್ ನೀಡಲಾಗಿದೆ. ಯೋಜನೆಯು ದೊಡ್ಡಗೊಲ್ಲರಹಟ್ಟಿ, ಹೊಸಕೆರೆಹಳ್ಳಿಯನ್ನೂ ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿಯೇ ಈ ಯೋಜನೆ ಕಾರ್ಯರೂಪಕ್ಕೆ ಬರಬೇಕಾಗಿತ್ತು. ಆದರೆ, ಕೊರೋನಾ ಸಾಂಕ್ರಾಮಿಕ ರೋಗ 2ನೇ ಅಲೆ ಆರಂಭವಾಗಿದ್ದ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಬಸ್ ಗಳಲ್ಲಿ ಬಿಬಿಎಂಪಿ ಶಿಕ್ಷಕರನ್ನು ನಿಯೋಜಿಸಲಿದೆ. 18 ವರ್ಷದೊಳಗಿನ ಮಕ್ಕಳ ಶೈಕ್ಷಣಿಕ ಸ್ಥಿತಿಯನ್ನು ಅರಿತು ಬೋಧನೆಗಳನ್ನು ಮಾಡಲಾಗುತ್ತದ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com