ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಕನ್ನಡ ಕಡ್ಡಾಯ: ಇಕ್ಕಟ್ಟಿನಲ್ಲಿ ಭಾಷಾ ಶಿಕ್ಷಕರು, 4 ಸಾವಿರ ಶಿಕ್ಷಕರ ಉದ್ಯೋಗಕ್ಕೆ ಕುತ್ತು!

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಾಗುತ್ತಿರುವ ತರಾತುರಿಯಿಂದ ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲೇ ಅವ್ಯವಸ್ಥೆ ಉಂಟಾಗಿದ್ದು, ನೀತಿಯಡಿಯಲ್ಲಿ ಯುಜಿ ಕಾರ್ಯಕ್ರಮಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿರುವುದರಿಂದ ಭಾಷಾ ಶಿಕ್ಷಕರು ತಮ್ಮ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ
ರಾಷ್ಟ್ರೀಯ ಶಿಕ್ಷಣ ನೀತಿ
Updated on

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಾಗುತ್ತಿರುವ ತರಾತುರಿಯಿಂದ ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲೇ ಅವ್ಯವಸ್ಥೆ ಉಂಟಾಗಿದ್ದು, ನೀತಿಯಡಿಯಲ್ಲಿ ಯುಜಿ ಕಾರ್ಯಕ್ರಮಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿರುವುದರಿಂದ ಭಾಷಾ ಶಿಕ್ಷಕರು ತಮ್ಮ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಕರ್ನಾಟಕ ಮೂಲದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ತಮ್ಮ ಮೊದಲ ವರ್ಷದಲ್ಲಿ ಕನ್ನಡ ಭಾಷೆಯನ್ನು ಕಲಿಯುವುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯು ಕಡ್ಡಾಯಗೊಳಿಸುತ್ತದೆ. ಇತರ ರಾಜ್ಯಗಳಿಂದ ಬಂದ ಅಭ್ಯರ್ಥಿಗಳು ಒಂದು ಸೆಮಿಸ್ಟರ್‌ಗೆ ಕನ್ನಡವನ್ನು ಅಧ್ಯಯನ ಮಾಡಬೇಕಾಗುತ್ತದೆ ಮತ್ತು ಅವರ ಮೊದಲ ವರ್ಷದಲ್ಲಿ ಮತ್ತೊಂದು ಸೆಮಿಸ್ಟರ್‌ಗೆ ಬೇರೆ ಭಾಷೆಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಪ್ರಸ್ತುತ ಜಾರಿಗೆ ತಂದಿರುವ ನೀತಿಯು ಇತರೆ ಭಾಷಾ ಶಿಕ್ಷಕರಿಗೆ ಬೋಧನಾ ಸಮಯದ ತೀವ್ರ ಕೊರತೆಗೆ ಕಾರಣವಾಗಿದೆ. ಆದರೆ ಕನ್ನಡ ಶಿಕ್ಷಕರಿಗೆ ಬೋಧನಾ ಅವಧಿ ಹೆಚ್ಚಾಗಿದೆ. ಕನ್ನಡ ಕಡ್ಡಾಯ ಸಮಯವನ್ನು ಸರಿದೂಗಿಸಲು ಹಲವಾರು ಬೆಂಗಳೂರಿನ ಕಾಲೇಜುಗಳು ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಪರದಾಡುತ್ತಿವೆ.

ಲೊಯೊಲಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಫ್ರಾನ್ಸಿಸ್ ಡಿ’ಅಲ್ಮೇಡಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಸಮಗ್ರ ಶಿಕ್ಷಣದತ್ತ ಹೆಜ್ಜೆ ಹಾಕಿದ್ದರೂ, ಕನ್ನಡ ಉಪನ್ಯಾಸಕರ ವ್ಯವಸ್ಥೆಯಲ್ಲಿನ ತೊಂದರೆಯಿಂದಾಗಿ ಆಡಳಿತ ಮಂಡಳಿಗೆ ತೊಂದರೆಯಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಇನ್ನೂ ಹಲವು ಹೆಸರು ಹೇಳಲಿಚ್ಛಿಸದ ಶಿಕ್ಷಕರು ಇದೇ ವಿಚಾರವಾಗಿ ಮಾತನಾಡಿದ್ದು, 'ನಮ್ಮ ಎಲ್ಲಾ ತರಗತಿಗಳನ್ನು ಷಫಲ್ ಮಾಡಲಾಗಿದೆ, ಖಂಡಿತವಾಗಿ ಗಂಟೆಗಳ ಕಡಿತವಾಗಿದೆ. ನಮಗೆ ಗಂಟೆಗಳ ಆಧಾರದ ಮೇಲೆ ಪಾವತಿಸಿದರೆ ಖಂಡಿತಾ ನಮ್ಮ ವೇತನ ಕಡಿತಗೊಳಿಸಲಾಗುತ್ತದೆ ಎಂದು ಸಂಸ್ಕೃತ ಪ್ರಾಧ್ಯಾಪಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಕೋರ್ಟ್ ನಲ್ಲಿ ಪಿಐಎಲ್
ನಾಲ್ಕು ಸಂಸ್ಕೃತ ಸಂಸ್ಥೆಗಳು, ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಹಯಗ್ರೀವ ಟ್ರಸ್ಟ್ ಮತ್ತು ವ್ಯೋಮ ಲಿಂಗ್ವಿಸ್ಟಿಕ್ ಲ್ಯಾಬ್ಸ್ ಫೌಂಡೇಶನ್, ವಿದ್ಯಾರ್ಥಿಗಳಿಗೆ ಕಡ್ಡಾಯ ಕನ್ನಡವನ್ನು ಜಾರಿಗೊಳಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅಕ್ಟೋಬರ್ ಆರಂಭದಲ್ಲಿ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ. ಅಕ್ಟೋಬರ್ 26 ರಂದು ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ರಾಜ್ಯ ಸರ್ಕಾರವು ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಡ್ಡಾಯ ಮಾಡುವ ನೀತಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿದೆ. ನ್ಯಾಯಾಲಯವು ಮುಂದಿನ ವಿಚಾರಣೆನ್ನು ನವೆಂಬರ್ 10ಕ್ಕೆ ಮುಂದೂಡಿದೆ. ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ವಿಫಲವಾದರೆ ಆಗಸ್ಟ್ 7, 2021 ಮತ್ತು ಸೆಪ್ಟೆಂಬರ್ 15, 2021 ರ ದಿನಾಂಕದ ಆದೇಶಗಳನ್ನು ತಡೆಹಿಡಿಯಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದೆ.

KSHEC ನ ಉಪಾಧ್ಯಕ್ಷ ಪ್ರೊ.ಬಿ ತಿಮ್ಮೇಗೌಡ ಅವರು ಮಾತನಾಡಿ, 'ಇಲ್ಲಿಯವರೆಗೆ ನಾವು ನಿರ್ಧಾರವನ್ನು ಪರಿಷ್ಕರಿಸಲು ಸರ್ಕಾರದಿಂದ ಯಾವುದೇ ಆದೇಶಗಳನ್ನು ಸ್ವೀಕರಿಸಿಲ್ಲ. ನಾವು ಕೇವಲ ಸಲಹಾ ಸಂಸ್ಥೆ, ಅಂತಿಮವಾಗಿ, ರಾಜ್ಯ ಸರ್ಕಾರವು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಉಜಿರೆಯ ಎಸ್‌ಡಿಎಂ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಭಟ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿ, 'ವಿದ್ಯಾರ್ಥಿಗಳಿಗೆ ಭಾಷೆಯ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಬೇಕು. ಕಡ್ಡಾಯ ಕನ್ನಡವು ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಮತ್ತು ನಾವು ಅನೇಕ ಅತೃಪ್ತ ವಿದ್ಯಾರ್ಥಿಗಳು ನಮ್ಮ ಬಳಿಗೆ ಬಂದು ದೂರು ನೀಡಿದ್ದೇವೆ, ಆದ್ದರಿಂದ ನಾವು PIL ಅನ್ನು ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

'ಕಾಲೇಜು ನಮ್ಮನ್ನು ನವೀಕರಿಸುವಲ್ಲಿ ಉತ್ತಮವಾಗಿದ್ದರೂ, ಕೇವಲ ಒಂದು ಸೆಮಿಸ್ಟರ್‌ಗೆ ಬೇರೆ ಭಾಷೆಯನ್ನು ಅಳವಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಇದು ಹೊಸ ಭಾಷೆಯನ್ನು ಕಲಿಯುವ ಉದ್ದೇಶಕ್ಕೆ ಹಿನ್ನಡೆಯನ್ನುಂಟು ಮಾಡುತ್ತದೆ ಎಂದು ತಮಿಳುನ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ.

ಸಂಸ್ಕೃತ ಪ್ರಾಧ್ಯಾಪಕರೊಬ್ಬರು 'ಸರ್ಕಾರದ ಕ್ರಮಗಳ ಮತ್ತು ಅದರ ಪರಿಣಾಮಗಳು ವಿದ್ಯಾರ್ಥಿಗಳಿಗೆ ಕೆಟ್ಟದಾಗಿವೆ. ನಾವೆಲ್ಲರೂ ಕನ್ನಡಿಗರು, ನಮಗೆ ಕನ್ನಡ ಮಾಧ್ಯಮದಲ್ಲಿ ಕಲಿಸಲಾಗಿದೆ. ಆದ್ದರಿಂದ ಬಹಳಷ್ಟು ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಕನ್ನಡ ಗೊತ್ತಿದೆ ಮತ್ತು ಕಾಲೇಜನ್ನು ಇತರ ಭಾಷೆಗಳನ್ನು ಕಲಿಯಲು ಅವಕಾಶವಾಗಿ ಬಳಸಿಕೊಳ್ಳಲು ಬಯಸುತ್ತಾರೆ. ಅವರನ್ನು ಏಕೆ ನಿರ್ಬಂಧಿಸಬೇಕು?. ಸರ್ಕಾರವು ತೀರ್ಮಾನಕ್ಕೆ ಬರುವವರೆಗೆ ಭಾಷೆಯ ಸಮಯದ ಬದಲಾವಣೆಗಳ ಬಗ್ಗೆ ಯಾವುದೇ ಪ್ರಕಟಣೆಯನ್ನು ಮಾಡುವುದನ್ನು ತಮ್ಮ ಕಾಲೇಜು ತಡೆಹಿಡಿದಿದೆ ಎಂದು ಅವರು ಹೇಳಿದ್ದಾರೆ.

ಇಷ್ಟೇ ಅಲ್ಲ, ಇನ್ನೂ ಸಾಕಷ್ಟು ಗೊಂದಲಗಳಿವೆ ಮತ್ತು ಪರಿಸ್ಥಿತಿಗಳು ಯಾವುದೇ ದಿನ ಬದಲಾಗಬಹುದು, ಆದ್ದರಿಂದ ನಾವು ಯಾವುದೇ ಔಪಚಾರಿಕ ಪ್ರಕಟಣೆಗಳನ್ನು ಸ್ವೀಕರಿಸಿಲ್ಲ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಕೆಎಸ್‌ಸಿಎಚ್‌ಇ ಉಪಾಧ್ಯಕ್ಷರು ಮತ್ತು ವಿವಿಧ ಶಾಸಕರು, ಸಂಸದರು ಮತ್ತು ರಾಜಕೀಯ ಮುಖಂಡರೊಂದಿಗೆ ಚರ್ಚಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಡಾ ಭಟ್ ಪ್ರಸ್ತಾಪಿಸಿದರು. ಸರ್ಕಾರ ನಾವು ಅದನ್ನು ಪರಿಶೀಲಿಸುತ್ತೇವೆ ಎಂದು ಹೇಳಿತ್ತಾದರೂ, ಈ ವರೆಗೂ ಏನನ್ನೂ ಮಾಡಲಿಲ್ಲ. ಈ ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿರಲಿಲ್ಲ, ಎಂದು ಅವರು ಹೇಳಿದರು.

4 ಸಾವಿರ ಶಿಕ್ಷಕರ ಉದ್ಯೋಗಕ್ಕೆ ಕುತ್ತು!
ಎನ್‌ಇಪಿ ಅನುಷ್ಠಾನದಿಂದ ರಾಜ್ಯದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಿಕ್ಷಣ ಮತ್ತು 4000 ಶಿಕ್ಷಕರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com