ಬೆಂಗಳೂರು: ಗೂಂಡಾ ಕಾಯ್ದೆಯಡಿ ಜೂಜುಕೋರನ ಬಂಧನ

ನಗರದ ಹಲವಾರು ಕಡೆಗಳಲ್ಲಿ ಜೂಜು ಅಡ್ಡೆಗಳನ್ನು ನಡೆಸುತ್ತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತನಾಗಿದ್ದ ಜೂಜುಕೋರನೊಬ್ಬನನ್ನು ಕೇಂದ್ರೀಯ ಅಪರಾಧ ವಿಭಾಗದ ಪೊಲೀಸರು ಗೂಂಡಾ ಕಾಯ್ದೆಯಡಿಯಲ್ಲಿ ಬುಧವಾರ ಬಂಧನಕ್ಕೊಳಪಡಿಸಿದ್ದಾರೆ. 

Published: 22nd April 2021 09:00 AM  |   Last Updated: 22nd April 2021 09:00 AM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ನಗರದ ಹಲವಾರು ಕಡೆಗಳಲ್ಲಿ ಜೂಜು ಅಡ್ಡೆಗಳನ್ನು ನಡೆಸುತ್ತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತನಾಗಿದ್ದ ಜೂಜುಕೋರನೊಬ್ಬನನ್ನು ಕೇಂದ್ರೀಯ ಅಪರಾಧ ವಿಭಾಗದ ಪೊಲೀಸರು ಗೂಂಡಾ ಕಾಯ್ದೆಯಡಿಯಲ್ಲಿ ಬುಧವಾರ ಬಂಧನಕ್ಕೊಳಪಡಿಸಿದ್ದಾರೆ. 

ಹರಿರಾಜಶೆಟ್ಟಿ ಅಲಿಯಾಸ್ ಹರೀಶ್ (58) ಎಂಬಾತನನ್ನು ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯಡಿ ಬಧಿಸಿದ್ದಾರೆ. ಈತ ನಗರದ ಹಲವಾರು ಕಡೆಗಳಲ್ಲಿ ರಿಕ್ರಿಯೇಷನ್ ಕ್ಲಬ್, ವಿಡಿಯೋಗೇಮ್ ಸೆಂಟರ್‍ಗಳಲ್ಲಿ ಅದೃಷ್ಟದ ಜೂಜಾಟಗಳನ್ನು ನಡೆಸುತ್ತಿದ್ದನೆಂದು ತಿಳಿದುಬಂದಿದೆ. 

ಈತನ ವಿರುದ್ಧ ವೈಯಾಲಿಕಾವಲ್, ಹೈ ಗ್ರೌಂಡ್ಸ್ ಕಬ್ಬನ್‍ಪಾರ್ಕ್, ಕೋರಮಂಗಲ, ಅಶೋಕನಗರ, ಕೆಪಿ ಅಗ್ರಹಾರ, ಬಸವೇಶ್ವರನಗರ ಮತ್ತು ಇಂದಿರಾನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಜೂಜು ಕೇಂದ್ರಗಳಲ್ಲಿ ಜೂಜಾಟ ನಡೆಸುತ್ತಿದ್ದ ಬಗ್ಗೆ 2014 ರಿಂದ 13 ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

2014 ರಿಂದ 13 ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದರೂ ಲೆಕ್ಕಿಸದೆ ತನ್ನ ಕಾನೂನು ಬಾಹಿರ ಜೂಜಾಟದ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸಿದ್ದನು. ಅಲ್ಲದೆ, ಈತನು ನಡೆಸುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುವ ಪೊಲೀಸ್ ಅಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಕಾರಿಗಳ ತೇಜೋವಧೆ ಮಾಡುವುದನ್ನು ರೂಢಿಸಿಕೊಂಡಿದ್ದನು.

ಸಿಸಿಬಿ ಅಕಾರಿಗಳು ಸಲ್ಲಿಸಿದ್ದ ವರದಿಯನ್ನು ಡಿಸಿಪಿ ಹಾಗೂ ಜಂಟಿ ಪೊಲೀಸ್ ಆಯುಕ್ತರು (ಅಪರಾಧ)ರವರು ಅನುಮೋದಿಸಿ ಶಿಫಾರಸು ಮಾಡಿದ್ದ ಮೇರೆಗೆ ಪೊಲೀಸ್ ಆಯುಕ್ತರು ಈತನನ್ನು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಆದೇಶ ಮಾಡಿದ್ದರು. ಜೂಜುಕೋರರ ವಿರುದ್ಧ ಪ್ರಥಮ ಬಾರಿಗೆ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp