ಜುಲೈ, ಆಗಸ್ಟ್ ನಲ್ಲಿ ಕೋವಿಡ್ ನಿಂದ ಬೆಂಗಳೂರಿನ ಮಕ್ಕಳ ಸಾವು ಪ್ರಕರಣ 'ಶೂನ್ಯ'!
ಇತ್ತೀಚಿನ ವರದಿಗಳ ಪ್ರಕಾರ ಅನೇಕ ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಹಾಗೂ ಮಕ್ಕಳಲ್ಲಿ ಮೂರನೇ ಅಲೆ ಊಹೆಯೊಂದಿಗೆ ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ ಕಳೆದ ಎರಡು ತಿಂಗಳುಗಳಲ್ಲಿ ಸ್ವಲ್ವ ಎಚ್ಚರಿಕೆಯ ಲಕ್ಷಣ ತೋರಿಸುತ್ತಿದೆ.
Published: 25th August 2021 01:10 PM | Last Updated: 25th August 2021 03:00 PM | A+A A-

ಮಕ್ಕಳಲ್ಲಿ ಕೋವಿಡ್-19 ಸೋಂಕಿನ ಪ್ರಮಾಣದ ಪಟ್ಟಿ
ಬೆಂಗಳೂರು: ಇತ್ತೀಚಿನ ವರದಿಗಳ ಪ್ರಕಾರ ಅನೇಕ ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಹಾಗೂ ಮಕ್ಕಳಲ್ಲಿ ಮೂರನೇ ಅಲೆ ಊಹೆಯೊಂದಿಗೆ ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ ಕಳೆದ ಎರಡು ತಿಂಗಳುಗಳಲ್ಲಿ ಸ್ವಲ್ವ ಎಚ್ಚರಿಕೆಯ ಲಕ್ಷಣ ತೋರಿಸುತ್ತಿದೆ. ಜುಲೈ 1 ರಿಂದ ಆಗಸ್ಟ್ 23 ರವರೆಗೆ 0-9 ವರ್ಷದೊಳಗಿನ ಮಕ್ಕಳಲ್ಲಿ ಯಾವುದೇ ಸಾವು ಪ್ರಕರಣ ಸಂಭವಿಸಿಲ್ಲ, 10-19 ವರ್ಷದೊಳಗಿನ ಗುಂಪಿನಲ್ಲಿ ಒಂದು ಮಗು ಸಾವನ್ನಪ್ಪಿದೆ.
ಬಿಬಿಎಂಪಿ ವಾರ್ ರೂಮ್ ಪ್ರಕಾರ, ಜುಲೈ 1 ರಿಂದ 31ರವರೆಗೆ ಈ ವಯಸ್ಸಿನ ಗುಂಪಿನಲ್ಲಿ ಯಾವುದೇ ಕೋವಿಡ್ ಸಾವು ಪ್ರಕರಣ ಉಂಟಾಗಿಲ್ಲ. 0-9 ವರ್ಷದೊಳಗಿನ ಗುಂಪಿನ ಸುಮಾರು 536 ಮಕ್ಕಳು ಸೋಂಕಿಗೆ ತುತ್ತಾಗಿದ್ದರೆ 10-19 ವರ್ಷದೊಳಗಿನ 1,053 ಹದಿಹರೆಯದವರಿಗೆ ಸೋಂಕು ತಗುಲಿದೆ. ಆದರೆ, ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ. ಆಗಸ್ಟ್ 1-23ರವರೆಗೆ 0-9 ವರ್ಷದೊಳಗಿನ ಮಕ್ಕಳಲ್ಲಿ 369 ಪಾಸಿಟಿವ್ ಪ್ರಕರಣಗಳಿದ್ದು, ಸಾವಿನ ಸಂಖ್ಯೆ ಶೂನ್ಯವಾಗಿದೆ.
10-19 ವರ್ಷದೊಳಗಿನ ಗುಂಪಿನಲ್ಲಿ 645 ಪಾಸಿಟಿವ್ ಕೇಸ್ ಕಂಡುಬಂದಿವೆ. ಈ ಗುಂಪಿನಲ್ಲಿ ಆಗಸ್ಟ್ 17 ರಂದು ಒಂದು ಸಾವಿನ ಪ್ರಕರಣ ವರದಿಯಾಗಿದೆ. ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದರೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ತೀವ್ರತೆಯೂ ಕಡಿಮೆಯಾಗಿರುವುದಾಗಿ ವೈದ್ಯರು ಹೇಳಿದ್ದಾರೆ. ಕೋವಿಡ್ ನಿಂದ ಗುಣಮುಖರಾದ ಬಳಿಕ ಬರುವ ಮಲ್ಟಿ-ಸಿಸ್ಟಂ ಇನ್ಫ್ಲಮೇಟರಿ ಸಿಂಡ್ರೋಮ್ (ಎಂಐಎಸ್-ಸಿ) ಪ್ರಕರಣಗಳು ಸಹ ಕಡಿಮೆಯಾಗಿವೆ. ಮಕ್ಕಳ ಆಸ್ಪತ್ರೆಯಲ್ಲಿಯೂ ಕನಿಷ್ಠ ದಾಖಲಾತಿ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯದ ಮಟ್ಟಿಗೆ ಬಹುತೇಕ ಜಿಲ್ಲೆಗಳಲ್ಲಿ ಮಕ್ಕಳಲ್ಲಿ ಕೋವಿಡ್ ಸಂಖ್ಯೆ ಒಂದಕ್ಕಿಯನ್ನು ದಾಟಿಲ್ಲ. ಮೊದಲ ಹಾಗೂ ಎರಡನೇ ಅಲೆ ವೇಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹದಿಹರೆಯದವರು ಸೋಂಕಿಗೆ ತುತ್ತಾಗಿದ್ದರು. ಇದರಿಂದಾಗಿ ಮಕ್ಕಳಲ್ಲಿ ಕೋವಿಡ್ ತಗುಲಿದೆ. ಹದಿಹರೆಯದವರಲ್ಲಿ ಸೋಂಕಿನ ಪ್ರಕರಣಗಳು ಕಡಿಮೆಯಾಗಿದ್ದು, ಮಕ್ಕಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯ ಡಾ. ಜೆ. ಟಿ. ಶ್ರೀಕಾಂತ್ ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲು ಹಾಗೂ ಸಾವನ್ನಪ್ಪುತ್ತಿರುವ ಬಹುತೇಕರು ಎಂಐಸ್- ಸಿಗೆ ಸಂಬಂಧಿಸಿದವರಾಗಿದ್ದಾರೆ. ಆದರೆ, ಇದೀಗ, ಎಂಐಸ್- ಸಿ ಪ್ರಕರಣಗಳು ದೇಶಾದ್ಯಂತ ಕಡಿಮೆಯಾಗಿದ್ದು, ಈ ಗುಂಪಿನಲ್ಲಿ ಇಮ್ಯೂನಿಟಿ ಹೆಚ್ಚಾಗಿದೆ. ಆದ್ದರಿಂದ ಲಘು ಸೋಂಕಿನ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು, ಬೇಗನೆ ಗುಣಮುಖರಾಗುತ್ತಿದ್ದಾರೆ ಎಂದು ರೈನ್ ಬೋ ಚಿಲ್ಡ್ರನ್ ಆಸ್ಪತ್ರೆಯ ಮಕ್ಕಳು ತುರ್ತು ಸೇವಾ ವಿಭಾಗದ ಮುಖ್ಯಸ್ಥ ಡಾ. ರಕ್ಷಯ್ ಶೆಟ್ಟಿ ಹೇಳಿದ್ದಾರೆ.