ಬೆಂಗಳೂರಲ್ಲಿ ಪ್ರತಿ ದಿನ 800 ನಾಯಿಗಳಿಗೆ ರೇಬಿಸ್ ಲಸಿಕೆ: ಪ್ರತ್ಯೇಕ ವಾಹನಕ್ಕೆ ಬಿಬಿಎಂಪಿ ಚಾಲನೆ

ವಿಶ್ವ ಪ್ರಾಣಿಜನ್ಯ ರೋಗ ತಡೆ ದಿನಾಚರಣೆ ಅಂಗವಾಗಿ 8 ರೇಬಿಸ್ ಲಸಿಕಾ ವಾಹನಗಳಿಗೆ ಬಿಬಿಎಂಪಿ ಮಂಗಳವಾರ ಚಾಲನೆ ನೀಡಿದೆ. 
8 ರೇಬಿಸ್ ಲಸಿಕಾ ವಾಹನಗಳಿಗೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಚಾಲನೆ
8 ರೇಬಿಸ್ ಲಸಿಕಾ ವಾಹನಗಳಿಗೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಚಾಲನೆ

ಬೆಂಗಳೂರು: ವಿಶ್ವ ಪ್ರಾಣಿಜನ್ಯ ರೋಗ ತಡೆ ದಿನಾಚರಣೆ ಅಂಗವಾಗಿ 8 ರೇಬಿಸ್ ಲಸಿಕಾ ವಾಹನಗಳಿಗೆ ಬಿಬಿಎಂಪಿ ಮಂಗಳವಾರ ಚಾಲನೆ ನೀಡಿದೆ. 

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ವಿಶ್ವ ಪ್ರಾಣಿಜನ್ಯ ರೋಗ ತಡೆ ದಿನಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 8 ರೇಬಿಸ್ ಲಸಿಕಾ ವಾಹನಗಳಿಗೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿಗಳ ಸಂತಾನ ನಿಯಂತ್ರಣ (ಎಬಿಸಿ) ಮತ್ತು ರೇಬಿಸ್ ತಡೆ ಲಸಿಕೆ (ಎಂಆರ್'ವಿ) ಕಾರ್ಯಗಳಿಗೆ ಪ್ರತ್ಯೇಕ ವಾಹನಗಳ ಬಳಕೆ ಮಾಡಲಾಗುವುದು ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಿಗೆ ತಲಾ ಒಂದರಂತೆ 8 ರೇಬಿಸ್ ಲಸಿಕಾ ವಾಹನಗಳನ್ನು ಮೀಸಲು ಇಡಲಾಗಿದೆ. ನಾಯಿಗಳ ಸಂತಾನ ನಿಯಂತ್ರಣಕ್ಕೆ ಮತ್ತು ರೇಬಿಸ್ ಲಸಿಕಾಕರಣಕ್ಕೆ ಈ ಮೊದಲು ಒಂದೇ ವಾಹನ ಬಳಸಲಾಗುತ್ತಿತ್ತು. ಇದೀಗ ಎಬಿಸಿ ಮತ್ತು ಎಆರ್'ವಿಗೆ ಪ್ರತ್ಯೇಕ ವಾಹನಗಳನ್ನು ಬಳಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಪ್ರತಿ ವಲಯದ ಎಬಿಸಿ ಮತ್ತು ಎಆರ್'ವಿ ಸೇವಾದಾರರು ಒಂದು ವಾಹನವನ್ನು ಹೊರಗುತ್ತಿಗೆ ಪಡೆದು ವಾಹನ ಚಾಲಕರು ಮತ್ತು ಇಬ್ಬರು ನಾಯಿ ಹಿಡಿಯುವವರನ್ನು ನೇಮಿಸಿಕೊಂಡು ವಾರ್ಡ್'ವಾರು ವಾರ್ಷಿಕವಾಗಿ ವಲಯದ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದನ್ನು ಹಾಕಬೇಕಾಗಿದೆ. ಈ ಕಾರ್ಯಕ್ರಮವು ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲಾ 198 ವಾರ್ಡ್ ಗಳಲ್ಲಿ ವಾರ್ಷಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿನಾಯಿಗಳಿಗೆ ಲಸಿಕೆ ಹಾಕಲು ಉಪಯುಕ್ತವಾಗಿದೆ ಎಂದರು.

ಜಂಟಿ ನಿರ್ದೇಶಕ ಡಾ.ಮಂಜುನಾಥ್ ಶಿಂಧೆ ಮಾತನಾಡಿ, ವಿಶ್ವಪ್ರಾಣಿಜನ್ಯ ರೋಗ ತಡೆ ದಿನಾಚರಣೆ ಅಂಗವಾಗಿ ಬಿಬಿಎಂಪಿ ವತಿಯಿಂದ ವಾರಾಂತ್ಯದವರೆಗೆ ತೀವ್ರತರ ರೇಬಿಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ದಿನ 800 ಬೀದಿನಾಯಿಗಳಿಗೆ ಲಸಿಕೆ ಹಾಕುವ ಯೋಜನೆ ಹೊಂದಲಾಗಿದೆ ಎಂದು ಹೇಳಿದರು.

ಎಲ್ಲಾ 198 ವಾರ್ಡ್ ಗಳಲ್ಲಿ ಕನಿಷ್ಠ ಶೇ.70ರಷ್ಟು ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆಯನ್ನು ಪ್ರತಿ ವರ್ಷ ಹಾಕಲು ಯೋಜನೆ ಆಯೋಜಿಸಲಾಗಿದೆ. 2020ರಲ್ಲಿ 47,164 ಮತ್ತು 2021ರ ಮೊದಲ ಆರು ತಿಂಗಳಲ್ಲಿ 41,933 ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಗಿದೆ. ರೇಬಿಸ್ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೀದಿನಾಯಿಗಳಿಗೆ ಹಾಕಲು ಮತ್ತು ಹೆಚ್ಚಿನ ಗುರಿಯನ್ನು ಸಾಧಿಸುವ ಇಚ್ಛೆ ಬಿಬಿಎಂಪಿ ಹೊಂದಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com