ಕೋವಿಡ್-19: ರಾಜ್ಯದಲ್ಲಿ ಒಂದೇ ದಿನ 411 ಮಂದಿ ಬಲಿ, 29 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ರಾಜ್ಯದಲ್ಲಿ ಗುಣಮುಖರ ಪ್ರಮಾಣ ಹೆಚ್ಚಳವಾಗುತ್ತಿದ್ದರೂ, ಸಾವಿನ ಪ್ರಮಾಣ ಮಾತ್ರ ಇಳಿಕೆಯಾಗುತ್ತಲೇ ಇಲ್ಲ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 411 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಮೃತರ ಸಂಖ್ಯೆ 29 ಸಾವಿರ ಗಡಿ ದಾಟಿ, 29,090ಕ್ಕೆ ತಲುಪಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಗುಣಮುಖರ ಪ್ರಮಾಣ ಹೆಚ್ಚಳವಾಗುತ್ತಿದ್ದರೂ, ಸಾವಿನ ಪ್ರಮಾಣ ಮಾತ್ರ ಇಳಿಕೆಯಾಗುತ್ತಲೇ ಇಲ್ಲ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 411 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಮೃತರ ಸಂಖ್ಯೆ 29 ಸಾವಿರ ಗಡಿ ದಾಟಿ, 29,090ಕ್ಕೆ ತಲುಪಿದೆ. 

ಸಾವಿನ ಸಂಖ್ಯೆ 29 ಸಾವಿರ ಗಡಿ ದಾಟಿದ ಹಿನ್ನೆಲೆಯಲ್ಲಿ ಇದೀಗ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.10ರಿಂದ ಶೇ.1.11ಕ್ಕೆ ಏರಿಕೆಯಾಗಿದೆ. ಜೊತೆಗೆ ದಿನದ ಮರಣ ಪ್ರಮಾಣ ಶೇ.2.47ಕ್ಕೆ ತಲುಪಿದೆ. 

ನಿನ್ನೆ ಸಾವನ್ನಪ್ಪಿದ 411 ಮಂದಿಯಲ್ಲಿ 31 ಮಂದಿ ಮನೆಗಳಲ್ಲಿಯೇ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಹಲವರು ತೀವ್ರ ಶ್ವಾಸಕೋಶ ಸೋಂಕು, ಉಸಿರಾಟ ಸಮಸ್ಯೆ, ಅಧಿಕ ರಕ್ತದೊತ್ತಡ, ಕೆಮ್ಮು, ಮಧುಮೇಹ, ಜ್ವರ, ಹೃದಯ ಸಮಸ್ಯೆ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಮತ್ತು ಇನ್ನಿತರೆ ಅನಾರೋಗ್ಯದಿಂದ ಬಳಲುತ್ತಿದ್ದರು. ಇಲ್ಲದೆ, ಇಬ್ಬರು ಆಸ್ಪತ್ರೆಗೆ ತರುವಷ್ಟರಲ್ಲೇ ಮೃತಪಟ್ಟಿದ್ದಾರೆಂದು ಇಲಾಕೆ ಮಾಹಿತಿ ನೀಡಿದೆ. 

ರಾಜ್ಯದಲ್ಲಿ ನಿನ್ನೆ 16,604 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 26,04,431ಕ್ಕೆ ಏರಿಕೆಯಾಗಿದೆ. 

ಸೋಂಕಿನ ಪ್ರಕರಣ ಕಡಿಮೆ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಸಿಟಿವಿಟಿ ದರ ನಿರಂತರವಾಗಿ ಇಳಿಕೆಯಾಗುತ್ತಲೇ ಇದೆ. ಸೋಮವಾರ ಶೇ.8.75ರ ಪಾಸಿಟಿವಿಟಿ ದರ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com