ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆ: ಕೋವಿಡ್ ಕೇರ್ ಕೇಂದ್ರಗಳ ಸ್ಥಗಿತಗೊಳಿಸಲು ಬಿಬಿಎಂಪಿ ನಿರ್ಧಾರ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಕುಸಿಯುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಮತ್ತು ಟ್ರಯೇಜಿಂಗ್ (ಭೌತಿಕ ತಪಾಸಣಾ) ಕೇಂದ್ರ ಸ್ಥಗಿತಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.
ಕೋವಿಡ್ ಕೇರ್ ಕೇಂದ್ರ
ಕೋವಿಡ್ ಕೇರ್ ಕೇಂದ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಕುಸಿಯುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಮತ್ತು ಟ್ರಯೇಜಿಂಗ್ (ಭೌತಿಕ ತಪಾಸಣಾ) ಕೇಂದ್ರ ಸ್ಥಗಿತಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.

ಬೆಂಗಳೂರಿನಲ್ಲಿರುವ ಬಹುತೇಕ ಕೋವಿಡ್ ಕೇಂದ್ರಗಳಲ್ಲಿನ ಬೆಡ್ ಗಳು ಖಾಲಿಯಾಗಿದ್ದು, ಹೊಸ ಸೋಂಕಿತರ ದಾಖಲಾತಿ ಕೂಡ ಗಣನೀಯವಾಗಿ ಕುಸಿಯುತ್ತಿದೆ. ಹೀಗಾಗಿ ಕೋವಿಡ್ ಕೇಂದ್ರಗಳನ್ನು ಮುಚ್ಚಲು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ನಿರ್ಧರಿಸಿದ್ದಾರೆ ಎಂದು ಸಿಸಿಸಿಗಳ ಉಸ್ತುವಾರಿ ಹೊಂದಿರುವ  ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಹೇಳಿದ್ದಾರೆ. ಆದಾಗ್ಯೂ, ಗಾತ್ರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ವಲಯದಲ್ಲಿ ಒಂದು ಅಥವಾ ಎರಡು ಸಿಸಿಸಿಗಳು ತೆರೆದಿರುತ್ತವೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನು ಬಿಬಿಎಂಪಿ ನಗರದಾದ್ಯಂತ 58 ಟ್ರಯೇಜಿಂಗ್ ಕೇಂದ್ರಗಳು ಮತ್ತು 3,000 ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯದ ಸಿಸಿಸಿಗಳನ್ನು ಸ್ಥಾಪಿಸಿತ್ತು. ಕೋವಿಡ್ ಸಾಂಕ್ರಾಮಿಕ ಉತ್ತುಂಗ ಸ್ಥಿತಿಯಲ್ಲಿದ್ದಾಗಲೂ ಇಲ್ಲಿ ದಾಖಲಾಗದ ಸೋಂಕಿತರ ಸಂಖ್ಯೆ 1 ಸಾವಿರದಿಂದ 1200ಕ್ಕಿಂತ ಹೆಚ್ಚಿರಲಿಲ್ಲ. ಈ ಸಂಖ್ಯೆ ಕಳೆದೊಂದು  ವಾರದಲ್ಲಿ 200 ರಿಂದ 300ಕ್ಕೆ ಕುಸಿದಿತ್ತು. ಅಲ್ಲದೆ ಬಹುತೇಕ ಸೋಂಕಿತರು ಮನೆಯಲ್ಲೇ ಇದ್ದು ಆರೈಕೆ ಮಾಡಿಕೊಳ್ಳುತ್ತಿದ್ದು, ಇದರಿಂದ ಕೋವಿಡ್ ಕೇಂದ್ರಗಳಿಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಹೀಗಾಗಿ ಪ್ರಸ್ತುತ ಸಿಸಿಸಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಖಾನ್  ಮಾಹಿತಿ ನೀಡಿದ್ದಾರೆ.

ಅಗತ್ಯ ಬಿದ್ದರೆ ಭವಿಷ್ಯದಲ್ಲಿ ಮತ್ತೆ ತೆರೆಯುತ್ತೇವೆ
ಇನ್ನು ಭವಿಷ್ಯದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಪರಿಸ್ಥಿತಿ ಬಂದರೆ ಆಗ ಮತ್ತೆ ಇದೇ ಸಿಸಿಸಿ ಕೇಂದ್ರಗಳನ್ನು ತೆರೆಯುತ್ತೇವೆ. ಹೀಗಾಗಿ ಅಗತ್ಯವಿದ್ದಲ್ಲಿ ಅವುಗಳನ್ನು ಮತ್ತೆ ತೆರೆಯಲು ಸಾಧ್ಯವಾಗುವಂತೆ ಕೇಂದ್ರಗಳಲ್ಲಿನ ಸೌಲಭ್ಯಗಳು ಹಾಗೇ ಉಳಿಸಿಕೊಂಡು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಖಾನ್  ಹೇಳಿದರು. ಇದೇ ವೇಳೆ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ತೆರೆದಿದ್ದ ಸಿಸಿಸಿಗಳನ್ನು ಕೂಡ ಮುಚ್ಚಲು ಬಿಬಿಎಂಪಿ ನಿರ್ಧರಿಸಿದ್ದು, ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಹೋಟೆಲ್‌ಗಳಲ್ಲಿ ಸ್ಥಾಪಿಸಲಾದ ಸ್ಟೆಪ್-ಡೌನ್ ಸೌಲಭ್ಯಗಳ ಬಗ್ಗೆ ಈ ವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಮತ್ತು ಬಿಬಿಎಂಪಿ  ತನ್ನ ಮೊಬೈಲ್ ಟ್ರಯೇಜಿಂಗ್ ಸೌಲಭ್ಯಗಳನ್ನು ನಿಲ್ಲಿಸದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಮುಚ್ಚಬೇಕಾದ ಸಿಸಿಸಿಗಳ ಅಂತಿಮ ಪಟ್ಟಿಯನ್ನು ಪ್ರತಿ ವಲಯದ ಜಂಟಿ ಆಯುಕ್ತರು ನಿರ್ಧರಿಸಲಿದ್ದು, ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ (ರಾಷ್ಟ್ರೀಯ ಕ್ರೀಡಾಕೂಟ ಗ್ರಾಮ) ತೆರೆಯಲಾಗಿರುವ ಸಿಸಿಸಿಯನ್ನು ಮುಚ್ಚಲು ನಿರ್ಧರಿಸಲಾಗಿದೆ, ಮಹಾಲಕ್ಷ್ಮಿಪುರಂನ ಡಾ.ರಾಜ್‌ಕುಮಾರ್ ಕಲಾ ಭವನ ,  ರಾಜಾಜಿನಗರದ ಹೋಮಿಯೋಪತಿ ಕಾಲೇಜು, ಗಾಂಧಿನಗರದ ಆಯುರ್ವೇದ ಕಾಲೇಜು ಮತ್ತು ಬೊಮ್ಮನಹಳ್ಳಿಯ ಬ್ಲಾಸಮ್ಸ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ. ಎಂಟು ಸರ್ಕಾರಿ ಹೆರಿಗೆ ಆಸ್ಪತ್ರೆಗಳನ್ನು ಸಿಸಿಸಿ ಮತ್ತು ಸ್ಥಿರೀಕರಣ ಕೇಂದ್ರಗಳಾಗಿ ಪರಿವರ್ತಿಸಲಾಗಿತ್ತು ಎಂದು ಖಾನ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com