ಸ್ವಯಂ ಅನುವಾದ ತಂದ ಅವಾಂತರ: ಟ್ವೀಟ್ ನಿಂದ ಬಿಬಿಎಂಪಿ ಅಧಿಕಾರಿಗಳ ತಬ್ಬಿಬ್ಬು!

ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್ ಲಸಿಕಾ ಅಭಿನಯದ ಕುರಿತ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರ ಒಂದು ಟ್ವೀಟ್ ಬಿಬಿಎಂಪಿ ಅಧಿಕಾರಿಗಳ ತಬ್ಬಿಬ್ಬುಗೊಳಿಸಿದ ಘಟನೆ ನಡೆದಿದೆ.
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್ ಲಸಿಕಾ ಅಭಿನಯದ ಕುರಿತ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರ ಒಂದು ಟ್ವೀಟ್ ಬಿಬಿಎಂಪಿ ಅಧಿಕಾರಿಗಳ ತಬ್ಬಿಬ್ಬುಗೊಳಿಸಿದ ಘಟನೆ ನಡೆದಿದೆ.

ಹೌದು.. ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಬಿಬಿಎಂಪಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಲಸಿಕೆ ಅಭಿಯಾನದ ಕುರಿತು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು, ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿದ್ದ ಈ ಟ್ವೀಟ್ ಸ್ವಯಂ ಭಾಷಾಂತರ ಸಮಸ್ಯೆಯಿಂದಾಗಿ  ಟ್ವೀಟ್ ನಲ್ಲಿ ಅಸಭ್ಯ ಪದಗಳ ಜೋಡಣೆಯಾಗಿತ್ತು. ಇದನ್ನು ಗಮನಿಸಿದ್ದ ನಾಗರಿಕರು ಕೂಡಲೇ ಅದನ್ನು ಬಿಬಿಎಂಪಿ ಮತ್ತು ಆಯುಕ್ತ ಗೌರವ್ ಗುಪ್ತಾ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಹಲವು ನೆಟ್ಟಿಗರು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಸ್ಕ್ರೀನ್ ಶಾಟ್ ತೆಗೆದು ಹಂಚಿಕೊಂಡಿದ್ದರು. ಕೆಲ ಕಾಲ ಈ  ಟ್ವೀಟ್ ಬಿಬಿಎಂಪಿ ಅಧಿಕಾರಿಗಳನ್ನು ತಬ್ಬಿಗೊಳಿಸಿತ್ತು.

ಟ್ವೀಟ್ ನ ಉದ್ದೇಶ ಒಳ್ಳೆಯದೇ ಆಗಿದ್ದರೂ, ಭಾಷಾಂತರ ದೋಷದಿಂದಾಗಿ ಟ್ವೀಟ್ ಟೀಕೆಗೊಳಗಾಗಿತ್ತು. ಇದೀಗ ಎಚ್ಚೆತ್ತ ಅಧಿಕಾರಿಗಳು ಈ ಟ್ವೀಟ್ ನ್ನು ತೆಗೆದು ಹಾಕಿದ್ದು, ಈ ಟ್ವೀಟ್ ಗೆ ಸಂಬಂಧಿಸಿದ ಪೋಸ್ಚ್ ಗಳನ್ನು ಕೂಡ ತೆಗೆದು ಹಾಕಿದ್ದಾರೆ.

ಸ್ಪಷ್ಟನೆ ನೀಡಿದ ಬಿಬಿಎಂಪಿ
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ತಂಡದ ಅಧಿಕಾರಿಯೊಬ್ಬರು ಟಿಎನ್‌ಐಇಗೆ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳ ಮಾಹಿತಿಗೆ ಸಂಬಂಧಿಸಿದ ಫೇಸ್‌ಬುಕ್‌ನಲ್ಲಿನ ಪೋಸ್ಟ್ ನಕಲಿ ಎಂದು ಹೇಳಿದ್ದಾರೆ. ಇದು ಯಾರೊಬ್ಬರ ಕಿಡಿಗೇಡಿತನದ ಕೃತ್ಯವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com