ಶೀಘ್ರದಲ್ಲೇ ಎಲ್ಲರಿಗೂ ಲಸಿಕೆ, ಕೊರೋನಾ 3ನೇ ಅಲೆ ತಡೆಯಲು ಇದೊಂದೇ ರಾಮಬಾಣ: ಸಚಿವ ಸುಧಾಕರ್‌

ಆದಷ್ಟು ಬೇಗ ಎಲ್ಲರಿಗೂ ಲಸಿಕೆ ನೀಡುವುದು ಸರ್ಕಾರದ ಆದ್ಯತೆಯಾಗಿದ್ದು, ಇದರಿಂದ ಕೊರೋನಾ ಮೂರನೇ ಅಲೆಯನ್ನು ತಡೆಯಬಹುದು. ಲಸಿಕೆ ಅಭಿಯಾನ ಬಹಳ ಮುಖ್ಯ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು ಹೇಳಿದ್ದಾರೆ.
ಸುಧಾಕರ್
ಸುಧಾಕರ್

ಬೆಂಗಳೂರು: ಆದಷ್ಟು ಬೇಗ ಎಲ್ಲರಿಗೂ ಲಸಿಕೆ ನೀಡುವುದು ಸರ್ಕಾರದ ಆದ್ಯತೆಯಾಗಿದ್ದು, ಇದರಿಂದ ಕೊರೋನಾ ಮೂರನೇ ಅಲೆಯನ್ನು ತಡೆಯಬಹುದು. ಲಸಿಕೆ ಅಭಿಯಾನ ಬಹಳ ಮುಖ್ಯ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,  'ಲಸಿಕೆ ಪಡೆಯದಿದ್ದರೆ ಮೂರು ಮತ್ತು ನಾಲ್ಕನೇ ಅಲೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲರಿಗೂ ಲಸಿಕೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಮಕ್ಕಳಿಗೆ ಲಸಿಕೆ ನೀಡುವ ಕುರಿತು ಪ್ರಯೋಗಗಳು ಮುಂದುವರೆದಿವೆ. ಪ್ರಸ್ತುತ ವೃದ್ಧರು, ಯುವ ಜನರು ಸೇರಿ ಹೆಚ್ಚು ಜನ ಸಂಪರ್ಕದಲ್ಲಿ ಇರುವವರಿಗೆ ಲಸಿಕೆ ನೀಡಲಾಗುತ್ತಿದೆ. ಎರಡು ಡೋಸ್‌ ಪಡೆದವರು ಕೂಡ ಕೋವಿಡ್‌ ಸುರಕ್ಷತಾ ಕ್ರಮ ಪಾಲಿಸಬೇಕು. ಇನ್ನೂ 1 ವರ್ಷ ಮಾಸ್ಕ್‌ ಧರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ರಾಜ್ಯದ ಅಗತ್ಯಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರ ರೆಮ್ಡೆಸಿವಿರ್ ಔಷಧಿಯನ್ನು ಪೂರೈಸುತ್ತಿದೆ. ಈಗ ಕೆಲ ಕಂಪನಿಗಳು ಮುಂದೆ ಬಂದು ರಾಜ್ಯಕ್ಕೆ ಔಷಧಿ ನೀಡುವುದಾಗಿ ತಿಳಿಸಿವೆ. ಮಾರುಕಟ್ಟೆಯಲ್ಲಿ ಔಷಧಿ ಲಭ್ಯವಿರುವುದರಿಂದ ಕೇಂದ್ರ ಸರ್ಕಾರ ನೇರವಾಗಿ ಖರೀದಿಸಲು ರಾಜ್ಯಕ್ಕೆ ಸೂಚನೆ ನೀಡಿದೆ ಎಂದಿದ್ದಾರೆ.

ಬ್ಲ್ಯಾಕ್ ಫಂಗಸ್ ಔಷಧಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಎಂಟಕ್ಕೂ ಅಧಿಕ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಸುಮಾರು 80 ಸಾವಿರ ವಯಲ್ಸ್ ಮಾರುಕಟ್ಟೆಯಲ್ಲಿದೆ. ರಾಜ್ಯಕ್ಕೆ ಈವರೆಗೆ 8-10 ಸಾವಿರ ವೈಯಲ್ಸ್ ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ 1,250 ಪ್ರಕರಣ ಕಂಡುಬಂದಿದ್ದು 30-35 ಸಾವಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸೂಕ್ತ ರೀತಿಯ ಡೆತ್ ಆಡಿಟ್‌ಗೆ ಸೂಚಿಸಲಾಗಿದೆ. ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗೆ ದಾಖಲಾದ ಕಪ್ಪು ಶಿಲೀಂಧ್ರ ಸೋಂಕಿತರಿಗೆ ಔಷಧಿ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com