ಗದಗದಲ್ಲಿ ಗರ್ಭಪಾತಗಳ ಸಂಖ್ಯೆ ಹೆಚ್ಚಳ: ಕೋವಿಡ್ ಕಾರಣವೆಂದ ವೈದ್ಯರು

ಗದಗ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಸ್ವಯಂಪ್ರೇರಿತ ಗರ್ಭಪಾತಗಳು ಹಾಗೂ ವೈದ್ಯಕೀಯ ಗರ್ಭಪಾತಗಳ (ಎಂಟಿಪಿ) ಸಂಖ್ಯೆ ಹೆಚ್ಚಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದ್ದು, ಈ ಬೆಳವಣಿಗೆಗ ಕೋವಿಡ್ ಕಾರಣವೆಂದು ವೈದ್ಯರು ಶಂಕಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗದಗ: ಗದಗ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಸ್ವಯಂಪ್ರೇರಿತ ಗರ್ಭಪಾತಗಳು ಹಾಗೂ ವೈದ್ಯಕೀಯ ಗರ್ಭಪಾತಗಳ (ಎಂಟಿಪಿ) ಸಂಖ್ಯೆ ಹೆಚ್ಚಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದ್ದು, ಈ ಬೆಳವಣಿಗೆಗ ಕೋವಿಡ್ ಕಾರಣವೆಂದು ವೈದ್ಯರು ಶಂಕಿಸಿದ್ದಾರೆ.

ಗ್ರಾಮೀಣ ಮತ್ತು ನಗರದ ಪ್ರದೇಶಗಳಲ್ಲಿ ಆರಂಭಿಕ ಹಂತದಲ್ಲಿಯೇ ಗರ್ಭಪಾತಗಳಾಗುತ್ತಿರುವುದು, ಗರ್ಭದೊಳಗೇ ಮಗು ಸಾಯುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

ಆರೋಗ್ಯ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಏಪ್ರಿಲ್-ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 363 ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿವೆ.

ಈ ಕುರಿತು ಆರೋಗ್ಯಾಧಿಕಾರಿಗಳು ಪ್ರತಿಕ್ರಿಯೆ ನೀಡಿ, ಕೋವಿಡ್ ಸಂಬಂಧಿತ ಒತ್ತಡಗಳು, ಅಪೌಷ್ಟಿಕತೆ, ವಂಶವಾಹಿ ಹಾಗೂ ಇತರೆ ಕಾರಣಗಳು ಇದಕ್ಕೆ ಕಾರಣವಾಗಿದ ಎಂದು ಹೇಳಿದ್ದಾರೆ.

ಪ್ರಸ್ತುತ ವರದಿಯಾಗಿರುವ ಈ ಎಲ್ಲಾ ಗರ್ಭಪಾತಗಳು ಕಾನೂನುಬದ್ಧವಾಗಿದ್ದು, ಮಹಿಳೆಯರ ಗಂಭೀರ ಸ್ಥಿತಿಯಿಂದಾಗಿ ಕುಟುಂಬದ ಸದಸ್ಯರ ಒಪ್ಪಿಗೆಯೊಂದಿಗೆ ನಡೆಸಲಾಗಿದೆ ಎಂದು ತಿಳಿಸಿದೆ.

ಕಳೆದ ವರ್ಷ ಏಪ್ರಿಲ್ 2020 ರಲ್ಲಿ ಆರಂಭವಾಗಿದ್ದ ಕೊರೋನಾ ಮೊದಲೆ ವೇಳೆಯೂ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಈ ಸಂದರ್ಭದಲ್ಲಿ ಒಂದು ತಿಂಗಳ ಅವಧಿಯಲ್ಲಿ 100 ಕ್ಕೂ ಹೆಚ್ಚು ಗರ್ಭಪಾತಗಳಾಗಿದ್ದವು. ತದನಂತರದ ದಿನಗಳಲ್ಲಿ ಈ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಎರಡನೇ ಲಾಕ್‌ಡೌನ್ ನಂತರ ಕಳೆದ ಆರು ತಿಂಗಳಲ್ಲಿ ಮತ್ತೆ ಏರಿಕೆಯಾಗಿರುವುದು ಕಂಡು ಬಂದಿದೆ.

ಏಪ್ರಿಲ್ ಮತ್ತು ಸೆಪ್ಟೆಂಬರ್ 2021 ರ ನಡುವೆ, ಜಿಲ್ಲೆಯಲ್ಲಿ ಒಟ್ಟು 363 ಸ್ವಾಭಾವಿಕ ಗರ್ಭಪಾತಗಳು ಮತ್ತು ವೈದ್ಯಕೀಯ ಗರ್ಭಪಾತಗಳು ವರದಿಯಾಗಿವೆ. ಇನ್ನೂ ತಾಲೂಕಿನಲ್ಲಿ 137 ಪ್ರಕರಣಗಳು ವರದಿಯಾಗಿದ್ದು, ಶಿರಹಟ್ಟಿ (107), ಮುಂಡರಗಿ (55), ನರಗುಂದ (44) ಮತ್ತು ರೋನ್ (20) ಪ್ರಕರಣಗಳು ಕಂಡು ಬಂದಿದೆ.

ಗದಗ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಆರೋಗ್ಯ ಅಧಿಕಾರಿಯೊಬ್ಬರು ಮಾತನಾಡಿ, “ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದವರಲ್ಲಿ ಹೆಚ್ಚಿನ ಸಂಖ್ಯೆಯ ಗರ್ಭಪಾತಗಳಾಗಿರುವುದು ಕಂಡು ಬಂದಿದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಗರ್ಭಿಣಿಯರು ವೈದ್ಯರ ಮಾರ್ಗದರ್ಶನವನ್ನು ತೆಗೆದುಕೊಂಡಿಲ್ಲ. ಇನ್ನೂ ಕೆಲ ಮಹಿಳೆಯರು ತಾವು ಗರ್ಭಿಣಿ ಎಂದು ತಿಳಿಯದೆ ಕೆಲಸಕ್ಕೆ ಹೋಗಿದ್ದಾರೆ. ಮತ್ತೊಂದು ಲಾಕ್ಡೌನ್ ಆಗುವ ಭೀತಿಯಿಂದ ಹೆಚ್ಚಿನ ಸಮಯದಲ್ಲಿ ಕೆಲಸಗಳನ್ನು ಮಾಡಿದ್ದಾರೆ. ಇದೂ ಕೂಡ ಗರ್ಭಪಾತ ಸಂಖ್ಯೆ ಹೆಚ್ಚಾಗಲು ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com