ಚೆನ್ನೈ- ಬೆಂಗಳೂರು ನಡುವೆ ಗಂಟೆಗೆ 160 ಕಿ.ಮೀ ವೇಗದಲ್ಲಿ ರೈಲು ಒಡಾಟ; ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ: ಸದರ್ನ್ ರೈಲ್ವೇ

ಸುಧಾರಣೆಗೊಳಪಡಿಸಲು ಒಪ್ಪಿಗೆ ದೊರೆತಿರುವ ರೈಲ್ವೇ ಮಾರ್ಗ ಚೆನ್ನೈ, ಮುಂಬೈ, ನವದೆಹಲಿ, ಕೋಲ್ಕತ, ಹೈದರಾಬಾದ್, ಬೆಂಗಳೂರು ಮತ್ತು ಪುರಿಯನ್ನು ಸಂಪರ್ಕಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚೆನ್ನೈ- ಬೆಂಗಳೂರು ರೈಲ್ವೇ ಮಾರ್ಗವನ್ನು 160 ಕಿ.ಮೀ ವೇಗದ ರೈಲು ಓಡಾಟಕ್ಕೆ ಸೂಕ್ತವಾಗುವ ಹಾಗೆ ಮೇಲ್ದರ್ಜೆಗೆ ಏರಿಸಲು ರೈಲ್ವೇ ಮಂಡಳಿಯಿಂದ ಒಪ್ಪಿಗೆ ದೊರೆತಿದೆ. 

ಸುಧಾರಣೆಗೊಳಪಡಿಸಲು ಒಪ್ಪಿಗೆ ದೊರೆತಿರುವ ರೈಲ್ವೇ ಮಾರ್ಗ ಚೆನ್ನೈ, ಮುಂಬೈ, ನವದೆಹಲಿ, ಕೋಲ್ಕತ, ಹೈದರಾಬಾದ್, ಬೆಂಗಳೂರು ಮತ್ತು ಪುರಿಯನ್ನು ಸಂಪರ್ಕಿಸಲಿದೆ. 9,628 ಕಿ.ಮೀ ಹಳಿಯನ್ನು ಮೇಲ್ದರ್ಜೆಗೆ ಏರಿಸಲಾಗುವುದು.

ಬೆಂಗಳೂರು- ಚೆನ್ನೈ ಮಾರ್ಗದ ದೂರ 362 ಕಿ.ಮೀ. 160 ಕಿ.ಮೀ ವೇಗದ ರೈಲು ಓಡಾಟ ಪ್ರಾರಂಭವಾದಲ್ಲಿ ಸುಮಾರು 2.5 ಗಂಟೆಗಳ ಒಳಗೆ ಬೆಂಗಳೂರನ್ನು ತಲುಪಬಹುದಾಗಿದೆ. 

ಸದ್ಯ ಈ ಮಾರ್ಗದಲ್ಲಿ ಈ ವೇಗದ ರೈಲಿನ ಓಡಾಟಕ್ಕೆ ಅನುವಾಗುವ ಹಾಗೆ ಮೂಲಸೌಕರ್ಯಗಳ ಪರಿಶೀಲನೆ ನಡೆಸಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರು- ಚೆನ್ನೈ ರೈಲ್ವೇ ಮಾರ್ಗದಲ್ಲಿ ರೈಲು 160 ಕಿ.ಮೀ ವೇಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವ ಸಲುವಾಗಿ 200 ಕಡೆಗಳಲ್ಲಿನ ತಿರುವುಗಳನ್ನು ನೇರಗೊಳಿಸುವ ಬಗ್ಗೆ ಚಿಂತನೆ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com