The New Indian Express
ಬೆಂಗಳೂರು: ಬೆಲ್ಜಿಯಂ ದೇಶದಿಂದ ಆಮದು ಮಾಡಿಕೊಳ್ಳಲಾದ ವಿಡಿಯೋ ವಾಲ್ ಅನ್ನು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದೆ. ರೈಲ್ವೇ ಭದ್ರತಾ ಪಡೆ (ಆರ್ ಪಿ ಎಫ್) ಈ ವಿಡಿಯೊ ವಾಲ್ ಅನ್ನು ತನ್ನ ಸೈಬರ್ ಸೆಲ್ ಕಚೇರಿಯಲ್ಲಿ ಅಳವಡಿಸಿದೆ. ಇದು ದೇಶದಲ್ಲೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ರೈಲ್ವೆ ವಿಭಾಗ ಮತ್ತೊಂದು ಪರಿಸರ ಸ್ನೇಹಿ ಕ್ರಮದ ಮೂಲಕ 1 ಕೋಟಿ ರೂಪಾಯಿ ಉಳಿತಾಯ!
ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿರುವ ರೈಲ್ವೇ ಸೈಬರ್ ಸೆಲ್ ವಿಭಾಗದಲ್ಲಿನ ಗೋಡೆ ಮೇಲೆ 16x10 ಅಡಿಯಷ್ಟು ವಿಸ್ತೀರ್ಣದ ಡಿಜಿಟಲ್ ಪರದೆ ಹಾಕಲಾಗಿದೆ. ಅದರಲ್ಲಿ 16 ವಿಂಡೋಗಳಿವೆ. ಅಂದರೆ 16 ಸ್ಕ್ರೀನ್ ಗಳಲ್ಲಿ ರೈಲ್ವೇ ನಿಲ್ದಾಣಗಳ ಭದ್ರತೆಯನ್ನು ಮಾನಿಟರ್ ಮಾಡಬಹುದಾಗಿದೆ. ಅರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಸಹಾಯದಿಂದ ಇದು ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿ: ಅರ್ಹ ರೈಲ್ವೆ ನೌಕರರಿಗೆ ದಸರಾ ಬಂಪರ್: 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸಂಪುಟ!
ತಪಾಸಣಾ ಸಿಬ್ಬಂದಿಯ ಕಣ್ತಪ್ಪಿಸಿ ಸ್ಕ್ಯಾನರ್ ಒಳಗಿಂದ ಅಪಾಯಕಾರಿ ಶಸ್ತ್ರಾಸ್ತ್ರ ಹಾದು ನಿಲ್ದಾಣದೊಳಕ್ಕೆ ಪ್ರವೇಶಿಸಿದರೂ ನೂತನ ವಿಡಿಯೊ ವಾಲ್ ತಂತ್ರಜ್ಞಾನದಿಂದ ಅದನ್ನು ಪತ್ತೆಹಚ್ಚಬಹುದಾಗಿದೆ. ಇದುವ ವಿಡಿಯೋ ವಾಲ್ ನ ಹಲವು ಉಪಯೋಗಗಳಲ್ಲಿ ಒಂದು.
ಇದನ್ನೂ ಓದಿ: ದೇಶದಲ್ಲೇ ಪ್ರಥಮ: ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಫೇಷಿಯಲ್ ರೆಕಾಗ್ನಿಷನ್ ವ್ಯವಸ್ಥೆ; 47 ಮಂದಿ ರೌಡಿ ಶೀಟರ್ ಗಳ ಪತ್ತೆ