ಹಲವು ಸಂಸ್ಥೆಗಳ ಮುಖ್ಯಸ್ಥತೆಯಿಂದ ನಗರದ ಯೋಜನೆಗಳಿಗೆ ಪೆಟ್ಟು: ತಜ್ಞರು

ಹಲವು ನಾಗರೀಕ ಸಂಸ್ಥೆಗಳು, ಯೋಜನೆಗಳ ಕಳಪೆ ಅನುಷ್ಠಾನದಿಂದಾಗಿ ನಗರದಲ್ಲಿ ಕಳೆದ 5 ವರ್ಷಗಳಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣಾ ರ್ಯಾಕಿಂಗ್ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆಯಲು ಸಾಧಅಯವಾಗಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹಲವು ನಾಗರೀಕ ಸಂಸ್ಥೆಗಳು, ಯೋಜನೆಗಳ ಕಳಪೆ ಅನುಷ್ಠಾನದಿಂದಾಗಿ ನಗರದಲ್ಲಿ ಕಳೆದ 5 ವರ್ಷಗಳಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣಾ ರ್ಯಾಕಿಂಗ್ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆಯಲು ಸಾಧಅಯವಾಗಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿಯೇ ಬೆಂಗಳೂರಿನಲ್ಲಿ ಅತೀ ಹೆಚ್ಚು ತ್ಯಾಜ್ಯ ಸ್ವಯಂ ಸೇವಕರನ್ನು ಹೊಂದಿದೆ. ಆದರೂ ಘನತ್ಯಾಜ್ಯ ನಿರ್ವಹಣೆಯಲ್ಲಿ ನಗರದ ಶ್ರೇಯಾಂಕವು ಸುಧಾರಿಸುತ್ತಿಲ್ಲ ಏಕೆಂದರೆ ಸಮನ್ವಯ ಮತ್ತು ನಾಯಕತ್ವದ ಕೊರತೆ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಘನತ್ಯಾಜ್ಯ ನಿರ್ವಹಣಾ ರೌಂಡ್ ಟೇಬಲ್ (ಎಸ್ ಡಬ್ಲ್ಯೂಎಂಆರ್ ಟಿ) ನ ಮಾಲಿನಿ ಪರ್ಮಾರ್ ಅವರು ಮಾತನಾಡಿ, ನಗರದಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಹಲವಾರು ನೀತಿಗಳು, ಸಂಸ್ಥೆಗಳು ಮತ್ತು ಅಧಿಕಾರಿಗಳು ಇದ್ದಾರೆ. ಘೋಷಣೆಯಾಗಿರುವ ಸಾಕಷ್ಟು ಯೋಜನೆಗಳಿವೆ. ಆದರೆ, ಕಳಪೆ ಅನುಷ್ಠಾನದಿಂದಾಗಿ ಯೋಜನೆಗಳು ಸೂಕ್ತ ರೀತಿಯಲ್ಲಿ ಜಾರಿಯಾಗಿಲ್ಲ. ಸಂಸ್ಥೆಗಲ ನಡುವೆ ಸಮನ್ವಯತೆ ಇಲ್ಲದಿರುವುದು ಶ್ರೇಯಾಂಕ ಉತ್ತಮವಾಗಿರದಿರಲು ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.

ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಹರೀಶ್ ಕುಮಾರ್ ಅವರು ಮಾತನಾಡಿ, ನಾಗರಿಕರಿಂದಲೂ ಸೂಕ್ತರೀತಿಯ ಪ್ರತಿಕ್ರಿಯೆಗಳು ಬಾರದ ಕಾರಣ ಮತ್ತು ಮಾಲೀಕತ್ವದ ಕೊರತೆಯಿಂದಾಗಿ ಶ್ರೇಯಾಂಕವು ಸುಧಾರಿಸಿಲ್ಲ. ಶ್ರೇಯಾಂಕವನ್ನು ಸುಧಾರಿಸಲು ಕಠಿಣ ಮತ್ತು ಚುರುಕಿನ ಕೆಲಸ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಕೈಕೊಂಡನಹಳ್ಳಿ, ಕೋರಮಂಗಲ, ಸರ್ಜಾಪುರ ರಸ್ತೆ ಮತ್ತು ಶಾಂತಿನಗರದಂತಹ ಸ್ಥಳಗಳಲ್ಲಿ ನಾಗರಿಕರು ಮತ್ತು ಸ್ವಯಂಸೇವಕರು ಕೈಜೋಡಿಸಿ ಕೆಲಸ ಮಾಡಿದ್ದರಿಂದ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ತೆರವುಗೊಳಿಸಲಾಗಿದೆ. ರಸ್ತೆಬದಿಗಳಲ್ಲಿ ಜನರು ಕಸ ಎಸೆಯದಂತೆ ಮಾಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ.
 
ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಸಾಕಷ್ಟು ವಾಹನಗಳಲ್ಲಿನ ಜಿಪಿಎಸ್ ಕಾರ್ಯನಿರ್ವಹಿಸದೇ ಇರುವುದು ಕಂಡು ಬಂದಿದೆ. ಮುಂಬೈ ನಗರದಲ್ಲಿ ತ್ಯಾಜ್ಯ ವಿಂಗಡಣೆ ಕಳಪೆಯಾಗಿದೆ. ಆದರೂ, ರ್ಯಾಕಿಂಗ್ ನಲ್ಲು ಬೆಂಗಳೂರಿಗಿಂತಲೂ ಉತ್ತಮ ಸ್ಥಾನದಲ್ಲಿದೆ. ಏಕೆಂದರೆ, ಅಲ್ಲಿನ ಪಾಲಿಕೆಯು ಕಟ್ಟುನಿಟ್ಟಾಗಿ ತ್ಯಾಜ್ಯ ಸಂಗ್ರಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com