ಕೋವಿಡ್-19: ರಾಜ್ಯದಲ್ಲಿ ಮಕ್ಕಳಲ್ಲಿ ಸೋಂಕು ಇಳಿಕೆ!

ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕ ಇದೀಗ ದೂರಾಗಿರುವ ಬೆಳವಣಿಗೆಗಳು ಕಂಡು ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕ ಇದೀಗ ದೂರಾಗಿರುವ ಬೆಳವಣಿಗೆಗಳು ಕಂಡು ಬಂದಿದೆ.

ರಾಜ್ಯದ ಕೋವಿಡ್ ವಾರ್ ರೂಮ್ ನೀಡಿರುವ ಮಾಹಿತಿಗಳ ಪ್ರಕಾರ ಮಕ್ಕಳಲ್ಲಿ ಸೋಂಕು ಇಳಿಕೆಯಾಗಿರುವುದು ತಿಳಿದುಬಂದಿದೆ.

ಈ ವರ್ಷ ಐದು ತಿಂಗಳ (ಜುಲೈ 20 ರಿಂದ ನವೆಂಬರ್ 20) ದತ್ತಾಂಶವು, 0 ರಿಂದ 9 ವರ್ಷ ವಯಸ್ಸಿನ ಮಕ್ಕಳಿನಲ್ಲಿ ಸೋಂಕು ಕ್ಷೀಣಿಸಿರುವುದು ಕಂಡು ಬಂದಿದೆ. ಜುಲೈ 20 ರಿಂದ ಆಗಸ್ಟ್ 20 ರವರೆಗೆ 2,231 ಹೊಸ ಪ್ರಕರಣಗಳು ವರದಿಯಾಗಿದ್ದರೆ, ಆಗಸ್ಟ್ 21 ಮತ್ತು ಸೆಪ್ಟೆಂಬರ್ 20 ರ ನಡುವೆ 1,311ಕ್ಕೆ ಇಳಿದಿದೆ.

ಸೆಪ್ಟೆಂಬರ್ 21 ಮತ್ತು ಅಕ್ಟೋಬರ್ 20 ರ ನಡುವೆ ಕೇವಲ 630 ಪ್ರಕರಣಗಳು ವರದಿಯಾಗಿದ್ದು, ನವೆಂಬರ್ 20 ರವರೆಗೆ 315 ಪ್ರಕರಣಗಳು ಕಂಡು ಬಂದಿದೆ.

ಕೋವಿಡ್-19 ಮಕ್ಕಳ ಪ್ರಕರಣಗಳು ವಯಸ್ಕರಲ್ಲಿ ನೇರವಾಗಿ ಅನುಪಾತದಲ್ಲಿರುತ್ತವೆ. ಆದ್ದರಿಂದ, ಮಕ್ಕಳಲ್ಲಿ ಹೊಸ ಪ್ರಕರಣಗಳು ಕಡಿಮೆಯಾಗಿದೆ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಪೀಡಿಯಾಟ್ರಿಕ್ ಇಂಟರ್ವೆನ್ಷನಲ್ ಪಲ್ಮನಾಲಜಿ ಮತ್ತು ಸ್ಲೀಪ್ ಮೆಡಿಸಿನ್ ಸಲಹೆಗಾರ ಮತ್ತು ರಾಜ್ಯ ಕೋವಿಡ್ -19 ಸಮಿತಿಯ ಸದಸ್ಯ ಡಾ.ಶ್ರೀಕಾಂತ ಜೆಟಿ ಅವರು ಹೇಳಿದ್ದಾರೆ.

ಮಕ್ಕಳಲ್ಲಿ ಗಮನಾರ್ಹವಾಗಿರುವ ಸೋಂಕುಗಳನ್ನೋು ನಾವು ಗಮನಿಸಿಲ್ಲ. ಯಾವುದೇ ಪ್ರಕರಣಗಳು ವರದಿಯಾಗಿದ್ದರೂ, ಸಾಮಾನ್ಯವಾಗಿ ವಯಸ್ಕ ಕುಟುಂಬದ ಸದಸ್ಯರಿಂದ ಹರಡುವ ಸೋಂಕಿನಿಂದ ಉಂಟಾಗುತ್ತದೆ. ಮೂರನೇ ಅಲೆಯು ಮಕ್ಕಳ ಪರಿಣಾಮ ಬೀರುತ್ತದೆ ಎನ್ನಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಮಕ್ಕಳಲ್ಲಿ ಹೆಚ್ಚು ಸೋಂಕು ಹಾಗೂ ಸಾವುಗಳು ಕಂಡು ಬರಲಿಲ್ಲ. ಶಾಲೆಗಳ ಪುನರಾರಂಭ ಮಾಡಿರುವುದು ಉತ್ತಮ ನಿರ್ಧಾರವಾಗಿದೆ. ಮಕ್ಕಳಲ್ಲಿನ ಸೋಂಕು ಇತರರಿಗೆ ಹೆಚ್ಚಾಗಿ ಹರಡುವುದಿಲ್ಲ ಎಂದು ಪಶ್ಚಿಮ ಯುರೋಪ್‌ನಲ್ಲಿನ ಅಧ್ಯಯನಗಳು ತಿಳಿಸಿವೆ ಎಂದಿದ್ದಾರೆ.

ಈ ನಡುವೆ 10 ರಿಂದ 19 ವಯೋಮಾನದವರಲ್ಲಿ ಕೂಡ ಸೋಂಕು ಇಳಿಕೆಯಾಗಿರುವುದು ಕಂಡು ಬಂದಿದೆ. ಮೊದಲಿದ್ದ ಸೋಂಕು 5,107 ರಿಂದ 4,040ಕ್ಕೆ, 2,520ಕ್ಕೆ ಮತ್ತು ಇದೀಗ 1,184ಕ್ಕೆ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ದೇಶದಲ್ಲಿ ಕೋವಿಡ್-19 ದೊಡ್ಡ ಸಮಸ್ಯೆಯಾಗಿಲ್ಲ. ಸೋಂಕಿನ ಗಂಭೀರತೆ ಇದೀಗ ಇಳಿಕೆಯಾಗಿದೆ. ಪ್ರಸ್ತುತ ಇರುವ ಸೋಂಕಿನಿಂದ ದೂರ ಉಳಿಯಲು ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಎಂತಹ ರೂಪಾಂತರಿ ವೈರಸ್ ಎದುರಾಗಲಿದೆ ಎಂಬುದು ತಿಳಿದಿಲ್ಲ. ಆದರೀಗ ಮಕ್ಕಳು ಹಾಗೂ ವಯಸ್ಕರಲ್ಲಿ ಯಾವುದೇ ಸಮಸ್ಯೆಗಳಿಲ್ಲ  ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಬಸವರಾಜ್ ಜಿವಿ ಹೇಳಿದ್ದಾರೆ.

ಇತರೆ ಯಾವುದೇ ರೋಗಗಳೂ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗದೇ ಇರುವುದು ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com