1930ರಲ್ಲಿ ಪ್ರಾರಂಭವಾದ ಬೆಂಗಳೂರಿನ ಈ ಸರ್ಕಾರಿ ಶಾಲೆಗೆ 7 ವರ್ಷದಿಂದ ವಿದ್ಯುತ್ ಸಂಪರ್ಕವೇ ಇಲ್ಲ!
ಹೆಸರಿಗೆ ಬೆಂಗಳೂರು ಸಿಲಿಕಾನ್ ಸಿಟಿ... ದೇಶದ ರಾಜಕೀಯ ಶಕ್ತಿ ಕೇಂದ್ರ ಮತ್ತು ತಂತ್ರಜ್ಞಾನದ ರಾಜಧಾನಿ.. ಆದರೆ ಇಂತಹ ಪ್ರಭಾವಿ ನಗರದಲ್ಲಿ ಸರ್ಕಾರಿ ಶಾಲೆಯೊಂದು ವಿದ್ಯುತ್ ಸಂಪರ್ಕವಿಲ್ಲದೇ ನಡೆಯುತ್ತಿದೆ ಎಂದು ಎಂದರೆ ಅಚ್ಚರಿಯಾಗಬಹುದು...
Published: 27th November 2021 01:06 PM | Last Updated: 27th November 2021 03:37 PM | A+A A-

ಬೆಂಗಳೂರಿನ ಸರ್ಕಾರಿ ಶಾಲೆ
ಬೆಂಗಳೂರು: ಹೆಸರಿಗೆ ಬೆಂಗಳೂರು ಸಿಲಿಕಾನ್ ಸಿಟಿ... ದೇಶದ ರಾಜಕೀಯ ಶಕ್ತಿ ಕೇಂದ್ರ ಮತ್ತು ತಂತ್ರಜ್ಞಾನದ ರಾಜಧಾನಿ.. ಆದರೆ ಇಂತಹ ಪ್ರಭಾವಿ ನಗರದಲ್ಲಿ ಸರ್ಕಾರಿ ಶಾಲೆಯೊಂದು ವಿದ್ಯುತ್ ಸಂಪರ್ಕವಿಲ್ಲದೇ ನಡೆಯುತ್ತಿದೆ ಎಂದು ಎಂದರೆ ಅಚ್ಚರಿಯಾಗಬಹುದು...
Govt Tamil Higher Primary School, started in 1930 in Bengaluru has no power supply for last 7 yrs. Students attend classes in open & run into classrooms when it rains. As its dark inside, teacher lights a candle & takes classes
— TNIE Karnataka (@XpressBengaluru) November 27, 2021
Video by @ashishhpendsehttps://t.co/dxxCd95iN9 pic.twitter.com/lMklWCRxy6
ಇದನ್ನೂ ಓದಿ: ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಆಗ್ರಹ: ರೈತರಿಂದ ಹೆದ್ದಾರಿ ಬಂದ್, ಸಂಚಾರ ಅಸ್ತವ್ಯಸ್ತ
ಹೌದು..ಅಚ್ಚರಿಯಾದರೂ ಇದು ನಿಜ.. ಬೆಂಗಳೂರಿನ ಹೃದಯಭಾಗದಲ್ಲಿರುವ ಸರ್ಕಾರಿ ಶಾಲೆಯೊಂದು ಕಳೆದ ಏಳು ವರ್ಷಗಳಿಂದ ವಿದ್ಯುತ್ ಇಲ್ಲದೆ ನಡೆಯುತ್ತಿದೆ. ಇಲ್ಲಿ ವಿದ್ಯಾರ್ಥಿಗಳು ತೆರೆದ ತರಗತಿಗಳಿಗೆ ಹಾಜರಾಗುತ್ತಿದ್ದು, ಮಳೆ ಬಂದರೆ ತರಗತಿಗಳಿಗೆ ಓಡುತ್ತಾರೆ. ಒಳಗೆ ಕತ್ತಲಾಗಿರುವುದರಿಂದ ಶಾಲೆಗೆ ಒಬ್ಬರೇ ಶಿಕ್ಷಕರು ಮೇಣದಬತ್ತಿಯನ್ನು ಬೆಳಗಿಸಿ ತರಗತಿಗಳನ್ನು ಮುಂದುವರಿಸುತ್ತಾರೆ.
ಇದನ್ನೂ ಓದಿ: ಬಿಎಂಐಸಿ ಯೋಜನೆಯಡಿ ರಾಜ್ಯ ಧಾರವಾಡ ಕೈಗಾರಿಕಾ ಪ್ರದೇಶದ ಅಭಿವೃದ್ಧಿ
ಇಷ್ಟಕ್ಕೂ ಯಾವುದು ಈ ಶಾಪಗ್ರಸ್ಥ ಶಾಲೆ?
1930ರಲ್ಲಿ ಪ್ರಾರಂಭವಾದ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆಯು ವಿಧಾನಸೌಧದಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಅಶೋಕ್ ನಗರದಲ್ಲಿ ಕಮಿಸ್ಸರಿಯಟ್ ರಸ್ತೆಯಲ್ಲಿದೆ. 1ರಿಂದ 5ನೇ ತರಗತಿವರೆಗೆ 10 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದು, ಒಬ್ಬ ಶಿಕ್ಷಕರನ್ನು ಮಾತ್ರ ನಿಯೋಜಿಸಲಾಗಿದೆ. ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದೆ ಏಳು ವರ್ಷಗಳ ಹಿಂದೆ ಶಾಲೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಇದನ್ನೂ ಓದಿ: ಜಿಮ್ ತರಬೇತುದಾರರಿಗೆ ಮಣಿಪಾಲ ಆಸ್ಪತ್ರೆಯಿಂದ ಸಿಪಿಆರ್ ಕಾರ್ಯಾಗಾರ
ಈ ಬಗ್ಗೆ ಹೆಸರು ಹೇಳಲಿಚ್ಛಿಸದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, 'ಶಿಕ್ಷಣ ಇಲಾಖೆಯಾಗಲಿ ಅಥವಾ ಚುನಾಯಿತ ಪ್ರತಿನಿಧಿಯಾಗಲಿ ಶಾಲೆ ಪುನಶ್ಚೇತನಕ್ಕೆ ಆಸಕ್ತಿ ವಹಿಸಿಲ್ಲ. ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇದಲ್ಲದೆ, ಶಾಲೆಯು ಗರುಡಾ ಮಾಲ್‌ಗೆ ಸಮೀಪವಿರುವ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿದೆ. ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಮುಚ್ಚಲು ಬಯಸುತ್ತಾರೆ, ಇದರಿಂದ ಅವರು ಈ ಭೂಮಿಯನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಬಹುದು. ಕಟ್ಟಡವನ್ನು ಕೆಡವುವ ಪ್ರಸ್ತಾವನೆ ಇದೆ. ಶಾಲೆಗೆ ವಿದ್ಯುತ್ ಪೂರೈಕೆ ಪುನರಾರಂಭಿಸಲು ಆಸಕ್ತಿ ಇಲ್ಲದಿರುವುದಕ್ಕೆ ಇದೂ ಒಂದು ಕಾರಣ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ 10 ನೇ ತರಗತಿ ಪಠ್ಯಕ್ರಮ ಶೇ.20 ರಷ್ಟು ಇಳಿಕೆಗೆ ಚಿಂತನೆ
‘ಶಾಲೆಗೆ ಭೇಟಿ ನೀಡುವಂತೆ ಬಿಇಒಗಳಿಗೆ ಸೂಚಿಸಲಾಗುವುದು’: ಸಚಿವ ಬಿಸಿ ನಾಗೇಶ್
ಶಾಲೆಗೆ ಭೇಟಿ ನೀಡಿ ವಿದ್ಯುತ್ ಪೂರೈಕೆ ಪುನರಾರಂಭಿಸುವಂತೆ ಸಂಬಂಧಪಟ್ಟ ಬ್ಲಾಕ್ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 100 ವರ್ಷಗಳಷ್ಟು ಹಳೆಯದಾದಾಗ ಒಂದು ರಚನೆಗೆ ಪರಂಪರೆಯ ಟ್ಯಾಗ್ ಸಿಗುತ್ತದೆ ಎಂದು ಖ್ಯಾತ ಇತಿಹಾಸಕಾರ ಸುರೇಶ್ ಮೂನಾ ಹೇಳಿದರು. ಆದರೆ ಈ ಸಂದರ್ಭದಲ್ಲಿ ವಸಾಹತುಶಾಹಿಯಾಗಿರುವ ವಾಸ್ತುಶಿಲ್ಪವನ್ನು ಅವಲಂಬಿಸಿ, 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಳೆಯ ಕಟ್ಟಡಗಳು ಸಹ ಟ್ಯಾಗ್ ಅನ್ನು ಪಡೆಯಬೇಕು. “ಅವರು ಹಳೆಯ ಬೆಂಗಳೂರಿನ ಆತ್ಮವನ್ನು ಪ್ರತಿನಿಧಿಸುತ್ತಾರೆ. ಇತ್ತೀಚೆಗೆ, 120 ವರ್ಷಗಳಷ್ಟು ಹಳೆಯದಾದ ಫೋರ್ಟ್ ಹೈಸ್ಕೂಲ್ ಅನ್ನು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿ ಸಂರಕ್ಷಿಸಲಾಗಿದೆ. ನಾವು ಕಟ್ಟಡಗಳನ್ನು ಅವುಗಳ ಪ್ರಾಚೀನತೆಯನ್ನು ಕಳೆದುಕೊಳ್ಳದೆ ಪುನಃಸ್ಥಾಪಿಸಬಹುದು. ಆದರೆ ಅದಕ್ಕಾಗಿ ನಗರದ ಪರಂಪರೆಯನ್ನು ಉಳಿಸಿಕೊಳ್ಳುವ ಒಲವು ಬೇಕು' ಎಂದು ಅವರು ಪ್ರತಿಕ್ರಿಯಿಸಿದರು.