ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಡುಗಿಯರ ಜೊತೆ ಚಾಟಿಂಗ್ ಹುಚ್ಚು ತಂದ ಆಪತ್ತು!; ಕಾಟನ್ ಪೇಟೆ ಬಟ್ಟೆ ವ್ಯಾಪಾರಿಗೆ ಐಎಸ್ಐ ಜೊತೆ ಲಿಂಕ್

ಬೆಂಗಳೂರಿನ ಕಾಟನ್ ಪೇಟೆ ಬಟ್ಟೆ ವ್ಯಾಪಾರಿಗೆ ಪಾಕಿಸ್ತಾನದ ಐಎಸ್ಐ ಏಜೆನ್ಸಿಯೊಂದಿಗೆ ಸಂಪರ್ಕ ಇರುವ ಆಘಾತಕಾರಿ ಮಾಹಿತಿ ಇದೀಗ ಲಭ್ಯವಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
Published on

ಬೆಂಗಳೂರು: ಬೆಂಗಳೂರಿನ ಕಾಟನ್ ಪೇಟೆ ಬಟ್ಟೆ ವ್ಯಾಪಾರಿಗೆ ಪಾಕಿಸ್ತಾನದ ಐಎಸ್ಐ ಏಜೆನ್ಸಿಯೊಂದಿಗೆ ಸಂಪರ್ಕ ಇರುವ ಆಘಾತಕಾರಿ ಮಾಹಿತಿ ಇದೀಗ ಲಭ್ಯವಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿ ರಾಜಸ್ಥಾನ ಮೂಲದ ಜಿತೇಂದರ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತನಿಂದ ಬೆಚ್ಚಿಬೀಳುವ ಸ್ಫೋಟಕ ವಿಚಾರವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ಈತ ಮಿಲಿಟರಿ ಫೋಟೋಗಳ ಸೋರಿಕೆ ಪ್ರಕರಣ ಬೆನ್ನುಬ್ದಿದಿರುವ ಸಿಸಿಬಿ ಪೊಲೀಸರು, ಬಂಧಿತ ಆರೋಪಿ ಜಿತೇಂದರ್ ಸಿಂಗ್ ಮೊಬೈಲ್ ರಿಟ್ರೀವ ವೇಳೆ ಪೊಲೀಸರು ಬೆಚ್ಚಿಬೀಳುವ ವಿಚಾರಗಳನ್ನು ಹೊರಗೆಡವಿದ್ದಾರೆ. 

ಟೆಕ್ನಿಕಲ್ ಸೆಲ್ ನಲ್ಲಿ ಜಿತೇಂದರ್ ಸಿಂಗ್ ಫೋನ್ ಜಾಲಾಡಿದಾಗ ಎಟಿಸಿಗೆ 50ಕ್ಕೂ ಹೆಚ್ಚು ಯುವತಿಯರು ಹಾಗೂ ಮಹಿಳೆಯರ ಕಲರ್ ಫುಲ್ ಫೋಟೋ ಪತ್ತೆಯಾಗಿದೆ. ಮೊಬೈಲ್ ಡೇಟಾ ಮತ್ತು ಕರೆಗಳನ್ನು ರಿಟ್ರೀವ್ ಮಾಡಿ ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿ ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಮೂಲಕ ಯುವತಿಯರ ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಅವರ ಪೋಟೊಗಳನ್ನ ಆರೋಪಿ ಪೋನ್ ನಲ್ಲಿ ಸಂಗ್ರಹಿಸುತ್ತಿದ್ದ, ಬಳಿಕ ಅವರಿಂದ ನಂಬರ್ ಪಡೆದುಕೊಂಡು ಚಾಟಿಂಗ್ ಮಾಡುತ್ತಿದ್ದ. ಹೀಗೆ ಹಲವರ ಜೊತೆ ಚಾಟ್ ಮತ್ತು ಕರೆ ಮಾಡಿರುವುದು ಪೊಲೀಸರಿಗೆ ತನಿಖೆ ವೇಳೆ ಪತ್ತೆಯಾಗಿದೆ.

ಹುಡ್ಗಿಯರ ಜೊತೆ ಚಾಟಿಂಗ್ ಗೀಳು ಹಚ್ಚಿಕೊಂಡಿದ್ದ ಜಿತೇಂದರ್ ಸಿಂಗ್, ಸೋಷಿಯಲ್ ಮೀಡಿಯಾದಲ್ಲಿ ಚಾಟ್ ಮಾಡುವ ವೇಳೆ ಪಾಕ್ ಯುವತಿ ನಂಟು ಸಂಪಾದಿಸಿದ್ದನಲ್ಲದೆ ಪಾಕ್ ನ ಕರಾಚಿ ಇಂಟಲಿಜೆನ್ಸ್ ಜತೆ ಸಂಪರ್ಕ ಸಾಧಿಸಿದ್ದ. ಯುವತಿ ಹೆಸರಲ್ಲಿ ಕರಾಚಿ ಇಂಟಲಿಜೆನ್ಸ್ ಜೊತೆ ಚಾಟ್ ಮಾಡಿ ಸೇನೆಯ ಪೋಟೊಗಳು ಸೋರಿಕೆಯಾಗಿವೆ. ಸದ್ಯ ಆರೋಪಿ ಜಿತೇಂದರ್ ಸಿಂಗ್ ಮೊಬೈಲ್ ನಲ್ಲಿದ್ದ ಪೋಟೋ ಹಾಗೂ ಕರೆಗಳ ಡಿಟೈಲ್ಸ್ ಮತ್ತು ಚಾಟಿಂಗ್ ಸಹ ಎಟಿಸಿ ತಂಡ ರಿಟ್ರೀವ್ ಮಾಡಿದೆ. ಯುವತಿಯರ ಜೊತೆ ಚಾಟಿಂಗ್ ಹುಚ್ಚಿನಿಂದ ಪಾಕ್ ಇಂಟಲಿಜೆನ್ಸ್ ಗೆ ಪೋಟೊ ಕಳಿಸಿ ಜಿತೇಂದರ್ ಸಿಂಗ್ ಸಿಕ್ಕಿಬಿದ್ದಿದ್ದಾನೆ.

ಸದ್ಯ ಜಿತೇಂದರ್ ಸಿಂಗ್ ಬ್ಯಾಂಕ್ ಅಕೌಂಟ್ ಗೆ ಹಣ ಬಂದ ಬಗ್ಗೆ ಎಟಿಸಿ ತನಿಖೆ ನಡೆಸುತ್ತಿದ್ದು, ಖಾತೆಗೆ ಹಣ ಎಲ್ಲಿಂದ ಸಂದಾಯವಾಯ್ತು ಅನ್ನೋದು ಮಾತ್ರ ನಿಗೂಢವಾಗಿ ಉಳಿದಿದೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಆರೋಪಿ ಪೂರ್ವಪರ ಪರಿಶೀಲನೆಗಾಗಿ ರಾಜಸ್ಥಾನಕ್ಕೆ ಎಟಿಸಿ ತಂಡ ತೆರಳಿತ್ತು. ಅರ್ಮಿ ಪೋಟೊಗಳನ್ನ ಕರಾಚಿ ಇಂಟಲಿಜೆನ್ಸ್ ಗೆ ಕಳಿಸಿ ಬಂಧಿತನಾಗಿರುವ ಜಿತೇಂದರ್ ಸಿಂಗ್, ಸೆಪ್ಟೆಂಬರ್ ನಲ್ಲಿ ಸಿಸಿಬಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದನು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com