ಬೆಂಗಳೂರು: ನಾಲ್ಕು ತಿಂಗಳ ಸತತ ಮನವಿ ನಂತರ ನಾಗವಾರ ಮತ್ತು ವೀರನಪಾಳ್ಯ ನಿವಾಸಿಗಳ ದೂರುಗಳಿಗೆ ಸ್ಪಂದನೆ ದೊರೆತಿದೆ. ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈ ವಾಕ್ ನಿರ್ಮಾಣ ಕಾಮಗಾರಿ ವೇಳೆ ನೆಲಸಮಗೊಳಿಸಿದ್ದ ಎರಡು ಮೆಟ್ಟಿಲೇಣಿಗಳ ಪುನರ್ ನಿರ್ಮಾಣಕ್ಕೆ ಪ್ಲ್ಯಾನ್ ಅನ್ನು ನೀಡಲು ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗ ಕೇಳಿದೆ.
ಇದನ್ನೂ ಓದಿ: ಬೆಂಗಳೂರು: ಚರ್ಚ್ ಸ್ಟ್ರೀಟ್ ಯೋಜನೆ ನಗರದ ಇನ್ನೂ ಮೂರು ರಸ್ತೆಗಳಿಗೆ ವಿಸ್ತರಣೆ
ಸ್ಥಳೀಯರು ಹೇಳುವಂತೆೀ ಹಿಂದೆ ನಾಗವಾರ ಫ್ಲೈ ಓವರ್ ಮತ್ತು ಸರ್ವೀಸ್ ರಸ್ತೆಗಳನ್ನು ಸಂಪರ್ಕಿಸಲು ಎರಡು ಮೆಟ್ಟಿಲೇಣಿಗಳಿದ್ದವು. ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಲು ಅಲ್ಲಿನ ನಿವಾಸಿಗಳು ಈ ಮೆಟ್ಟಿಲೇಣಿಗಳ ಬಳಕೆ ಮಾಡುತ್ತಿದ್ದರು.
ಮಾನ್ಯತಾ ಟೆಕ್ ಪಾರ್ಕ್ ನವರು ಫ್ಲೈ ಓವರಿನಿಂದ ಟೆಕ್ ಪಾರ್ಕ್ ಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಸ್ಕೈ ವಾಕ್ ಅನ್ನು ನಿರ್ಮಿಸಿದ್ದರು. ಈ ಸಂದರ್ಭ ಎರಡು ಮೆಟ್ಟಿಲೇಣಿಗಳನ್ನು ತೆಗೆಯಲಾಗಿತ್ತು. ಅದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು.
ಇದನ್ನೂ ಓದಿ: ನಂದಿ ಹಿಲ್ಸ್ ಭೂಕುಸಿತಕ್ಕೆ ಬ್ಲಾಸ್ಟ್ ಗಳು ಕಾರಣ: ಅಧಿಕಾರಿಗಳು, ಪರಿಸರ ತಜ್ಞರ ಶಂಕೆ
ಈ ಹಿಂದೆ ಟೆಕ್ ಪಾರ್ಕ್ ನವರಿಗೆ ಈ ಸಂಬಂಧ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.