ಸುಸೈಡ್ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೊ ಮಾಡಿದ್ದ ಹುಡುಗನನ್ನು ರಕ್ಷಿಸಿದ ರೈಲ್ವೇ ಪೊಲೀಸ್ ಪಡೆ

ಹುಡುಗ ದೆಹಲಿ ರೈಲಿನಲ್ಲಿ ಕುಳಿತುಕೊಂಡು ಅಳುತ್ತಿದ್ದ. ರೈಲು ಇನ್ನೇನು ಹೊರಡುವುದರಲ್ಲಿತ್ತು. ಪೊಲೀಸರು ಸ್ವಲ್ಪ ತಡ ಮಾಡಿದರೂ ಹುಡುಗ ಮತ್ತೆ ಸಿಗುತ್ತಿರಲಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 16 ವರ್ಷದ ಬೆಂಗಳೂರು ಮೂಲದ ಹುಡುಗನೋರ್ವ ತಂದೆಯೊಂದಿಗಿನ ಮನಸ್ತಾಪದಿಂದ ನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೊ ಮಾಡಿದ್ದ. ಆ ವಿಡಿಯೊ ರೈಲ್ವೇ ಪೊಲೀಸ್ ಪಡೆಯ ಗಮನಕ್ಕೆ ಬಂದಿತ್ತು. 

ವಿಡಿಯೋದಲ್ಲಿದ್ದ ಸ್ಥಳವನ್ನು ಓರ್ವ ರೈಲ್ವೇ ಪೊಲೀಸ್ ಸಿಬ್ಬಂದಿ ಗುರುತು ಹಿಡಿದಿದ್ದರು. ಒಡನೆ ಕಾರ್ಯಪ್ರವೃತ್ತರಾದ ಸಿಬ್ಬಂದಿ ಕಡೆಗೂ ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿದ್ದ ಹುಡುಗನನ್ನು ಪ್ರಾಣಪಾಯದಿಂದ ರಕ್ಷಿಸಿದ್ದಾರೆ. 

ವಿಡಿಯೊ ಮಾಡಿದ್ದ ಹುಡುಗ ಕೆಲ ದಿನಗಳ ಹಿಂದೆಯೇ ಮನೆ ಬಿಟ್ಟು ಬಂದಿದ್ದ. ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಢೇಳಿದ್ದ ವಿಡಿಯೋವನ್ನು ಹುಡುಗನ ಸಂಬಂಧಿಕರು ರೈಲ್ವೇ ಪೊಲೀಸ್ ಪಡೆಯ ಗಮನಕ್ಕೆ ತಂದಿದ್ದರು. ಆ ವಿಡಿಯೊ ನೋಡಿದ್ದ ಅನುಷಾ ಎಂಬ ರೈಲ್ವೇ ಪೊಲೀಸ್ ಸಿಬ್ಬಂದಿ ವಿಡಿಯೊದಲ್ಲಿರುವ ಸ್ಥಳ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ಸ್ಟೇಷನ್ ಎನ್ನುವುದನ್ನು ಪತ್ತೆ ಹಚ್ಚಿದ್ದರು. 

ನಂತರ ಕೆ.ಎಸ್ ಆರ್ ರೈಲ್ವೇ ಪೊಲೀಸ್ ಪಡೆಗೆ ಮಾಹಿತಿ ರವಾನಿಸಲಾಗಿತ್ತು. ಹುಡುಗ ದೆಹಲಿ ರೈಲಿನಲ್ಲಿ ಕುಳಿತುಕೊಂಡು ಅಳುತ್ತಿದ್ದ. ರೈಲು ಇನ್ನೇನು ಹೊರಡುವುದರಲ್ಲಿತ್ತು. ಪೊಲೀಸರು ಸ್ವಲ್ಪ ತಡ ಮಾಡಿದರೂ ಹುಡುಗ ಮತ್ತೆ ಸಿಗುತ್ತಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com