ರಾಜ್ಯಕ್ಕೆ ಬರುವ ಈ 9 ರಾಷ್ಟ್ರಗಳ ನಾಗರಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ: ಕರ್ನಾಟಕ ಸರ್ಕಾರ

ಕೋವಿಡ್ ಸಾಂಕ್ರಾಮಿಕ ಅಪಾಯದಲ್ಲಿರುವ 9 ರಾಷ್ಟ್ರಗಳ ನಾಗರೀಕರು ಕರ್ನಾಟಕ ಪ್ರವೇಶಿಸಲು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ಆದೇಶಿಸಿದೆ. 
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಅಪಾಯದಲ್ಲಿರುವ 9 ರಾಷ್ಟ್ರಗಳ ನಾಗರೀಕರು ಕರ್ನಾಟಕ ಪ್ರವೇಶಿಸಲು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ಆದೇಶಿಸಿದೆ.

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ, ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಕರ್ನಾಟಕ ಸರ್ಕಾರವು ಕೊರೋನಾ ಸಾಂಕ್ರಾಮಿಕ ಅಪಾಯದಲ್ಲಿರುವ ಕೆಲವು ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೋವಿಡ್ -19 ಪರೀಕ್ಷೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಿದೆ. ರಾಜ್ಯದ ವಿಮಾನ ನಿಲ್ದಾಣಗಳಿಗೆ ಆಗಮಿಸಿದಾಗ, ಅವರ ವ್ಯಾಕ್ಸಿನೇಷನ್ ಸ್ಥಿತಿ-ಗತಿಯನ್ನು ಲೆಕ್ಕಿಸದೆ ಪರೀಕ್ಷೆಗೊಳಪಡಬೇಕು ಎಂದು ರಾಜ್ಯ ಸರ್ಕಾರ ಸೋಮವಾರ ಸುತ್ತೋಲೆ ಹೊರಡಿಸಿದೆ.

ಯುನೈಟೆಡ್ ಕಿಂಗ್‌ಡಮ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್‌ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್ ಮತ್ತು ಜಿಂಬಾಬ್ವೆ ಸೇರಿದಂತೆ ಯುರೋಪ್‌ನ ದೇಶಗಳ ಪ್ರಯಾಣಿಕರು ಕರ್ನಾಟಕಕ್ಕೆ ಆಗಮಿಸುವಾಗ ಹೆಚ್ಚುವರಿ ಕ್ರಮಗಳನ್ನು ಅನುಸರಿಸಬೇಕು. ಕಡ್ಡಾಯ ಕೋವಿಡ್ ಪರೀಕ್ಷೆಗೊಳಪಡಬೇಕು ಎನ್ನಲಾಗಿದೆ. ಅಕ್ಟೋಬರ್ 25 ರಿಂದ ಜಾರಿಗೆ ಬರುವ ಸುತ್ತೋಲೆಯಲ್ಲಿ ಈ ದೇಶಗಳ ಪ್ರಯಾಣಿಕರು ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿರಬೇಕು ಮತ್ತು ಅವರ ಆಗಮನದ 8ನೇ ದಿನದಂದು ಕಡ್ಡಾಯವಾಗಿ COVID ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಲಾಗಿದೆ. 

ಏರ್ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆಯ ನಮೂನೆಯೊಂದಿಗೆ ಪ್ರಯಾಣಿಕರು ಅವರ ಪ್ರಯಾಣದ ಮೊದಲು 72 ಗಂಟೆಗಳಿಗಿಂತಲೂ ಹಳೆಯದಾದ ತಮ್ಮ ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿಯನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. ಬೋರ್ಡಿಂಗ್ ಮೊದಲು, ಪ್ರಯಾಣಿಕರಿಗೆ ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳು/ಏಜೆನ್ಸಿಗಳು ಟಿಕೆಟ್‌ಗಳ ಜೊತೆಗೆ ಮಾಡಬೇಕಾದ ಮತ್ತು ಮಾಡಬಾರದ ಅಂಶಗಳ ಪಟ್ಟಿಯಲ್ಲಿ ಇದನ್ನು ತಿಳಿಸಲಾಗಿದೆ. 

ಕೋವಿಡ್ ಸೂಕ್ತ ನಡವಳಿಕೆಯನ್ನು ಎಲ್ಲಾ ಸಮಯದಲ್ಲೂ ಅನುಸರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಆದೇಶವು ವಿಮಾನದಲ್ಲಿನ ಸಿಬ್ಬಂದಿಗೆ ನಿರ್ದೇಶನ ನೀಡಿದೆ. ಯಾವುದೇ ಪ್ರಯಾಣಿಕರು ಹಾರಾಟದ ಸಮಯದಲ್ಲಿ COVID-19 ರೋಗಲಕ್ಷಣಗಳನ್ನು ವರದಿ ಮಾಡಿದರೆ, ಅವನು/ಅವಳನ್ನು ಪ್ರೋಟೋಕಾಲ್ ಪ್ರಕಾರ ಪ್ರತ್ಯೇಕಿಸಲಾಗುತ್ತದೆ ಎಂದು ಆದೇಶದಲ್ಲಿ ಒತ್ತಿ ಹೇಳಲಾಗಿದೆ.

ಅಂತೆಯೇ WHO-ಅನುಮೋದಿತ COVID-19 ಲಸಿಕೆಗಳನ್ನು ಪರಸ್ಪರ ಸ್ವೀಕರಿಸಲು ಭಾರತವು ಪರಸ್ಪರ ವ್ಯವಸ್ಥೆಗಳನ್ನು ಹೊಂದಿರುವ ದೇಶದಿಂದ ಪ್ರಯಾಣಿಕರು ಬರುತ್ತಿದ್ದರೆ, ಅವರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದರೆ, ಅವರನ್ನು ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿಸಲಾಗುವುದು ಮತ್ತು ಅಂತಹ ಪ್ರಯಾಣಿಕರು ಆಗಮನದ ನಂತರ 14 ದಿನಗಳವರೆಗೆ ಅವರು ಸ್ವಯಂ-ಆರೋಗ್ಯ ಮೇಲ್ವಿಚಾರಣೆ ಮಾಡಬೇಕು. ಭಾಗಶಃ/ಲಸಿಕೆ ಹಾಕದಿದ್ದರೆ, ಪ್ರಯಾಣಿಕರು ಸಲ್ಲಿಕೆಯನ್ನು ಒಳಗೊಂಡಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆಗಮನದ ನಂತರದ ಕೋವಿಡ್-19 ಪರೀಕ್ಷೆಯ ಮಾದರಿಯನ್ನು ಆಗಮನದ ಹಂತದಲ್ಲಿ ನೀಡಬೇಕು. 7 ದಿನಗಳವರೆಗೆ ಹೋಮ್ ಕ್ವಾರಂಟೈನ್, ಭಾರತಕ್ಕೆ ಆಗಮಿಸಿದ 8ನೇ ದಿನದಂದು ಮರು-ಪರೀಕ್ಷೆ ಮತ್ತು ನಕಾರಾತ್ಮಕವಾಗಿದ್ದರೆ, ಮುಂದಿನ 7 ದಿನಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕಕ್ಕೆ ಆಗಮನದ ನಂತರದ ಪರೀಕ್ಷೆ ಸೇರಿದಂತೆ ಹೆಚ್ಚುವರಿ ಕ್ರಮಗಳನ್ನು ಅನುಸರಿಸಬೇಕಾದ ದೇಶಗಳ ಪಟ್ಟಿ:
ಯುಕೆ ಸೇರಿದಂತೆ ಯುರೋಪಿನ ದೇಶಗಳು

ದಕ್ಷಿಣ ಆಫ್ರಿಕಾ
ಬ್ರೆಜಿಲ್
ಬಾಂಗ್ಲಾದೇಶ
ಬೋಟ್ಸ್ ವಾನ
ಚೀನಾ
ಮಾರಿಷಸ್
ನ್ಯೂಜಿಲೆಂಡ್
ಜಿಂಬಾಬ್ವೆ

ಸಂಪೂರ್ಣವಾಗಿ ಲಸಿಕೆ ಪಡೆದ ವ್ಯಕ್ತಿಗಳಿಗೆ ಪ್ರಮಾಣಪತ್ರಗಳ ಪರಸ್ಪರ ಗುರುತಿಸುವಿಕೆಗಾಗಿ ಕೇಂದ್ರ ಸರ್ಕಾರವು ಒಪ್ಪಂದ ಮಾಡಿಕೊಂಡಿರುವ ದೇಶಗಳ ಪಟ್ಟಿ:
ಯುಕೆ
ಫ್ರಾನ್ಸ್
ಜರ್ಮನಿ
ನೇಪಾಳ
ಬೆಲಾರಸ್
ಲೆಬನಾನ್
ಅಮೇನಿಯಾ
ಉಕ್ರೇನ್
ಬೆಲ್ಜಿಯಂ
ಹಂಗೇರಿ
ಸರ್ಬಿಯಾ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com