ಬೆಂಗಳೂರು: 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಡ್ರಗ್ ಪೆಡ್ಲರ್ ಬಂಧನ
ಪೊಲೀಸರ ಕೈಗೆ ಸಿಗದೆ ಬರೋಬ್ಬರಿ 8 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ ಕುಖ್ಯಾತ ಗಾಂಜಾ ದಂಧೆಕೋರ ಹಮೀದ್ ಹಾಗೂ ಆತನ ಸಹೋದರನನ್ನು ಕೆಂಗೇರಿ ಉಪವಿಭಾಗದ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
Published: 03rd September 2021 08:49 AM | Last Updated: 03rd September 2021 09:15 AM | A+A A-

ಬಂಧಿತ ಆರೋಪಿ ಹಮೀದ್
ಬೆಂಗಳೂರು: ಪೊಲೀಸರ ಕೈಗೆ ಸಿಗದೆ ಬರೋಬ್ಬರಿ 8 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ ಕುಖ್ಯಾತ ಗಾಂಜಾ ದಂಧೆಕೋರ ಹಮೀದ್ ಹಾಗೂ ಆತನ ಸಹೋದರನನ್ನು ಕೆಂಗೇರಿ ಉಪವಿಭಾಗದ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಉಲ್ಲಾಳದ ಹಮೀದ್, ಆತನ ಸಹೋದರ ಸಯೀದ್ ಬಂಧಿತರಾಗಿದ್ದು, ನಗರಕ್ಕೆ ಹೊರ ರಾಜ್ಯದಿಂದ ಟನ್ ಗಟ್ಟಲೆ ಗಾಂಜಾ ತಂದು ಆರೋಪಿಗಳು ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ: ಬೆಂಗಳೂರು: ಕುಖ್ಯಾತ ಡ್ರಗ್ಸ್ ಪೆಡ್ಲರ್ ಮೆಸ್ಸಿ ಬಂಧನ
ಇಬ್ಬರು ಆರೋಪಿಗಳನ್ನು ಎಸಿಪಿ ಕೃಷ್ಣ ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧನಕ್ಕೊಳಪಡಿಸಿದ್ದು, ಈ ಇಬ್ಬರು ಆರೋಪಿಗಳ ಬಂಧನದಿಂದ ಇದೀಗ ತಾವರೆಗೆ, ಬ್ಯಾಡರಹಳ್ಳಿ ಹಾಗೂ ವಿಜಯನಗರ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ 15 ಕೇಸ್'ಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಹಲವು ವರ್ಷಗಳಿಂದ ನಗರ ಹೊರವಲಯದಲ್ಲಿ ಗಾಂಜಾ ದಂಧೆಯಲ್ಲಿ ಹಮೀದ್ ನಿರತನಾಗಿದ್ದು, ಆತನ ಮೇಲೆ ಜ್ಞಾನಭಾರತಿ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು. ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದ ಗಾಂಜಾ ತಂದು ಹಮೀದ್ ನಗರದ ಸಬ್ ಪೆಡ್ಲರ್ ಗಳಿಗೆ ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ.